• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈರಲ್ ವಿಡಿಯೋ; ರಾನು ಮಂಡಲ್ ಕಂಠದಲ್ಲಿ ಮತ್ತೊಂದು ಹಾಡು

|
Google Oneindia Kannada News

ನವದೆಹಲಿ, ಅಕ್ಟೋಬರ್ 18: ಸಾಮಾಜಿಕ ತಾಲತಾಣಗಳಲ್ಲಿ ರಾನು ಮಂಡಲ್ ಹಾಡಿದ 'ಮನಿಕೆ ಮಗೆ ಹಿತೆ' ವೈರಲ್ ಆಗಿತ್ತು. ಈಗ ರಾನುವಿನ ಹೊಸ ಕ್ಲಿಪ್ ವೈರಲ್ ಆಗಿದೆ. ಅದರಲ್ಲಿ ಆಕೆ 'ಬಚ್ಪನ್ ಕಾ ಪ್ಯಾರ್' ಹಾಡನ್ನು ಹಾಡುವ ಮೂಲಕ ಸುದ್ದಿಯಾಗಿದ್ದಾಳೆ. ಯೂಟ್ಯೂಬ್‌ನಲ್ಲಿ ರಾನು ಮಂಡಲ್ 'ಬಚ್ಚನ್ ಕಾ ಪ್ಯಾರ್' ಹಾಡುತ್ತಿರುವ 15 ಸೆಕೆಂಡುಗಳ ಕ್ಲಿಪ್ ಅನ್ನು ಪೋಸ್ಟ್ ಮಾಡಲಾಗಿದೆ. ಇದು 5 ಲಕ್ಷ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

'ಬಚ್ಬನ್ ಕಾ ಪ್ಯಾರ್' ಟಾಪ್ ಟ್ರೆಂಡಿಂಗ್ ಹಾಡಾಗಿದ್ದು, ಈ ವರ್ಷದ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಸಹದೇವ್ ಡಿರ್ಡೊ ಎಂಬ ಪುಟ್ಟ ಹುಡುಗ ಹಾಡಿದ ಈ ಹಾಡು ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತ್ತು. ಈ ಹಾಡನ್ನು ರಾಪರ್ ಬಾದ್‌ಶಾ ಸಹದೇವ್ ರೀಮಿಕ್ಸ್ ಮಾಡಿದ್ದಾರೆ. ಈ ವೀಡಿಯೋ ಪೋಸ್ಟ್ ಮಾಡಿದ ನಂತರ ಹಾಡಿನ ಜನಪ್ರಿಯತೆಯು ಹೆಚ್ಚಾಯಿತು.

ಈ 'ಬಚ್ಪನ್ ಕಾ ಪ್ಯಾರ್' ಹಾಡನ್ನು ಮೂಲತಃ ಕಮಲೇಶ್ ಬರೋಟ್ ಹಾಡಿದ್ದಾರೆ ಮತ್ತು ಸಾಹಿತ್ಯವನ್ನು ಪಿ .ಪಿ. ಬರಿಯಾ ಅವರು ಬರೆದಿದ್ದು, ಮೂಲ ಹಾಡಿನ ಶೀರ್ಷಿಕೆ 'ಬಚ್ಪನ್ ಕಾ ಪ್ಯಾರ್, ಸೋನು ಮೇರಿ ಡಾರ್ಲಿಂಗ್' ಎಂಬುದಾಗಿದೆ. ಬಾದ್‌ಶಾ ಕೂಡ ಈ ಹಾಡಿನ ಬಗ್ಗೆ ಪಾನಿ ಪಾನಿ ಹಾಡನ್ನು ಹಾಡಿದಂತ ಗಾಯಕ ಆಸ್ತಾ ಗಿಲ್ ಅವರೊಂದಿಗೆ ವಿಡಿಯೋ ಮಾಡಿದ್ದು ಹಾಡಿಗೆ ಸಿಕ್ಕಾಪಟ್ಟೆ ಕುಣಿದಿದ್ದಾರೆ.

ರಾನು ಮಂಡಲ್; ಯೂಟ್ಯೂಬ್​, ಇನ್​ಸ್ಟಾಗ್ರಾಮ್​ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ​ 'ಮನಿಕೆ ಮಗೆ ಹಿತೆ' ಹಾಡನ್ನು ಕೇಳದವರೇ ಇಲ್ಲ. ಅಷ್ಟರಮಟ್ಟಿಗೆ ಈ ಗೀತೆ ಫೇಮಸ್​ ಆಗಿದೆ. ಶ್ರೀಲಂಕಾದ ಗಾಯಕಿ ಯೊಹಾನಿ ಕಂಠದಲ್ಲಿ ಮೂಡಿಬಂದಿರುವ ಈ ಹಾಡು 135 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಇದರದ್ದೇ ಹಾವಳಿ. ಜನ ಸಾಮಾನ್ಯರು ಮಾತ್ರವಲ್ಲದೇ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ 'ಮನಿಕೆ ಮಗೆ ಹಿತೆ' ಹಾಡಿಗೆ ಮರುಳಾಗಿದ್ದಾರೆ. ಆದರೆ ಅದೇ ಹಾಡನ್ನು ಗುನುಗಿರುವ ರಾನು ಮಂಡಲ್ ಅವರು ಹಿಗ್ಗಾಮುಗ್ಗಾ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

'ಮನಿಕೆ ಮಗೆ ಹಿತೆ' ಹಾಡನ್ನು ರಾನು ಮಂಡಲ್​ ಹಾಡಿರುವ ವಿಡಿಯೋ ಎಲ್ಲೆಲ್ಲೂ ವೈರಲ್​ ಆಗಿದೆ. ಅನೇಕ ಯೂಟ್ಯೂಬ್​ ಚಾನೆಲ್​ಗಳಲ್ಲಿ ಇದನ್ನು ಅಪ್​ಲೋಡ್​ ಮಾಡಲಾಗಿದೆ. ಅಚ್ಚರಿ ಎಂದರೆ ಅವರು ಹಾಡಿರುವುದು ಕೂಡ ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದುಕೊಂಡಿದೆ. ಕಮೆಂಟ್​ ಸೆಕ್ಷನ್​ಗೆ ಹೋಗಿ ನೋಡಿದರೆ ಬರೀ ನೆಗೆಟಿವ್​ ಮಾತುಗಳೇ ಕಾಣಿಸುತ್ತಿವೆ.

ಯಾರೀ ರಾನು ಮಂಡಲ್?; ಎರಡು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ರಣಘಾಟ್ ರೈಲು ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ ಐಕಾನಿಕ್ ಹಾಡು ಏಕ್ ಪ್ಯಾರ್ ಕಾ ನಾಗ್ಮಾ ಹೈ ಹಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ರಾನು ಮಂಡಲ್ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದರು.
ಶೀಘ್ರದಲ್ಲೇ ಆಕೆಯನ್ನು ಮುಂಬೈನಲ್ಲಿ ರಿಯಾಲಿಟಿ ಶೋಗೆ ಆಹ್ವಾನಿದ್ದೇ ತಡ ರಾನು ಅದೃಷ್ಟ ಕುದುರಿಸಿಬಿಟ್ಟಿದೆ. ಆ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಂಡ ಹಿಮೇಶ್ ರೇಶಮಿಯಾ, ರಾನು ಅವರ ಹಾಡುವ ಕೌಶಲ್ಯವನ್ನು ಮೆಚ್ಚಿ ಅವರ ಚಿತ್ರಕ್ಕಾಗಿ ಹಾಡಲು ವಿನಂತಿಸಿದರು. ಆ ನಂತರ ರಾನು ಹಾಡು ಸಖತ್ ವೈರಲ್ ಆಗಿವೆ.

ಸದ್ಯ ಗಾಯಕಿ ರಾನು ಮಂಡಲ್ 'ಮಣಿಕೆ ಮಗೆ ಹಿತೆ' ಹಾಡನ್ನು ಹಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ರಾನು ಮಂಡಲ್ ಅವರ ಹೊಸ ವಿಡಿಯೋವನ್ನು ವೀಕ್ಷಿಸಿದ ನಂತರ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಹಾರ್ಟ್ ಸಿಂಬೋಲ್ ಪೋಸ್ಟ್ ಮಾಡಿದ್ದಾರೆ.

ಮಣಿಕೆ ಮಗೇ ಹಿತೆ ಎಂಬುದು ಸತೀಶನ್ ರತ್ನಾಯಕ ಅವರ 2020ರ ಸಿಂಹಳ ಗೀತೆ. ಯೂಟ್ಯೂಬ್ ನಲ್ಲಿ ಸಿಂಹಳಿ ಭಾಷೆಯ ಈ ಹಾಡು ಮೂಡಿಸಿದ ಸಂಚಲನ ಅದ್ಭುತವಾದುದು. ಯೊಹಾನಿ ಎಂದೇ ಜನಪ್ರಿಯರಾಗಿರುವ 28 ವರ್ಷದ ಯುವತಿ ಈ ಹಾಡಿನ ಗಾಯಿಕಿ. ಯೊಹಾನಿ ದಿಲೋಕಾ ಡಿಸಲ್ವಾ ಎಂಬುದು ಪೂರ್ಣ ಹೆಸರು. ಶ್ರೀಲಂಕಾದ ಈ ಗಾಯಕಿಯು ಕವಯಿತ್ರಿ, ರ್ಯಾಪರ್, ಮ್ಯೂಸಿಕ್ ಪ್ರೊಡ್ಯೂಸರ್, ಯೂಟ್ಯೂಬರ್ ಕೂಡ ಹೌದು.

ನಶೆ ಏರಿಸುವ ಕಂಠದಲ್ಲಿ ಹಾಡಿದ ಈ ಹಾಡನ್ನು ಕೆಲವು ತಿಂಗಳ ಹಿಂದೆಯೇ ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದೆ. ಇದು ಇತ್ತೀಚೆಗಷ್ಟೇ ಭಾರತದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಗಮನಸೆಳೆದಿತ್ತು. ಅವರು ಅದನ್ನು ಶೇರ್ ಮಾಡಿದ ನಂತರದಲ್ಲಿ ಯೂಟ್ಯೂಬ್ ನಲ್ಲಿ 'ಮನಿಕೆ ಮಗೆ ಹಿತೆ' ಮೂಡಿಸಿದ ಸಂವಲನ ಸ್ವತ: ಯೊಹಾನಿ ಮತ್ತು ಅವರ ತಂಡವನ್ನು ದಿಗ್ಭ್ರಮೆಗೆ ಕೆಡವಿದೆ.

ಯೊಹಾನಿಯ ಮಣಿಕೆ ಮಗೆ ಹಿತೆ ಆನ್‌ಲೈನ್‌ನಲ್ಲಿ ಲಭ್ಯವಾದ 3 ತಿಂಗಳಲ್ಲಿ ಯೂಟ್ಯೂಬ್‌ನಲ್ಲಿ 91 ಮಿಲಿಯನ್ ವೀಕ್ಷಣೆಗಳನ್ನು ಮೀರಿದೆ. ಆಕೆಯ ಧ್ವನಿಯಿಂದ ಪ್ರಭಾವಿತರಾದ ಅತೀಂದ್ರ ಅವರು ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್ ಅನ್ನು ಕೆಲವೇ ದಿನಗಳಲ್ಲಿ 2.5 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.

English summary
Ranu Mandal has gone viral after singing the song 'Bhanpan Ka Paar', which is a huge fame on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X