• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇರಳದ ನಂತರ, ತಮಿಳುನಾಡು, ಕರ್ನಾಟಕದಲ್ಲಿ ಕೋವಿಡ್‌ ಏಕಾಏಕಿ ಹೆಚ್ಚಳ

|
Google Oneindia Kannada News

ನವದೆಹಲಿ, ಜು. 30: ಕೇರಳದ ನಂತರ, ನೆರೆಯ ಕರ್ನಾಟಕ ಮತ್ತು ತಮಿಳುನಾಡು ಕೂಡ ಗುರುವಾರ ಹೊಸ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ದಾಖಲಿಸಿದೆ. ಭಾರತದ ದೈನಂದಿನ ಪ್ರಕರಣಗಳ ಸಂಖ್ಯೆ ಸುಮಾರು 45,000 ಕ್ಕೆ ತಲುಪಿದೆ. ಇದು 22 ದಿನಗಳಲ್ಲಿ ಅತಿ ಹೆಚ್ಚಿನ ಪ್ರಕರಣವಾಗಿದೆ.

ಕಳೆದ ಎರಡು ದಿನಗಳಲ್ಲಿ ಭಾರತದ ಹೊಸ ಪ್ರಕರಣಗಳಲ್ಲಿ 50% ಕ್ಕಿಂತ ಹೆಚ್ಚು ಕೇರಳದ್ದು ಆಗುತ್ತಿದೆ. ಕೇರಳವು ಗುರುವಾರ 22,064 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಏತನ್ಮಧ್ಯೆ, ಕರ್ನಾಟಕದ ಪ್ರಕರಣಗಳ ಸಂಖ್ಯೆ 19 ದಿನಗಳ ನಂತರ 2,000 ದಾಟಿದೆ.

ಕೇರಳಿಗರೇ ದಯವಿಟ್ಟು ಹುಷಾರಾಗಿರಿ; ರಾಹುಲ್ ಗಾಂಧಿ ಮನವಿಕೇರಳಿಗರೇ ದಯವಿಟ್ಟು ಹುಷಾರಾಗಿರಿ; ರಾಹುಲ್ ಗಾಂಧಿ ಮನವಿ

ದಕ್ಷಿಣ ರಾಜ್ಯಗಳನ್ನು ಹೊರತುಪಡಿಸಿ, ಮಹಾರಾಷ್ಟ್ರದಲ್ಲಿಯೂ ಸೋಂಕುಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ 7,242 ಹೊಸ ಪ್ರಕರಣಗಳು ಗುರುವಾರ ದಾಖಲಾಗಿವೆ. ಇದು ಒಂದು ವಾರದಲ್ಲಿ ಅತಿ ಹೆಚ್ಚಿನ ಕೋವಿಡ್‌ ಪ್ರಕರಣವಾಗಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದಲ್ಲಿ ಯಾವುದೇ ಕೋವಿಡ್‌ ಸಾವುಗಳು ವರದಿಯಾಗಿಲ್ಲ. ರಾಜಸ್ಥಾನದ 33 ಜಿಲ್ಲೆಗಳಲ್ಲಿ 27 ರಲ್ಲಿ ಶೂನ್ಯ ಧನಾತ್ಮಕ ಪ್ರಕರಣಗಳು ದಾಖಲಾಗಿವೆ. ಈ ಜಿಲ್ಲೆಗಳಲ್ಲಿ ಸಿಕಾರ್, ಸಿರೋಹಿ, ಕೋಟ ಮತ್ತು ನಾಗೌರ್ ಸೇರಿವೆ.

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಗುರುವಾರ ನೀಡಿದ ಮಾಹಿತಿಯ ಪ್ರಕಾರ, ರಾಜಸ್ಥಾನದಾದ್ಯಂತ ಕೇವಲ 17 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ಈ ಪೈಕಿ ಮೂರು ಪ್ರಕರಣಗಳು ರಾಜ್ಯದ ರಾಜಧಾನಿ ಜೈಪುರದಲ್ಲಿ ದಾಖಲಾಗಿವೆ.

ಕೋವಿಡ್‌ ಪ್ರಕರಣ ಹೆಚ್ಚಳ ಬೆನ್ನಲ್ಲೇ ಮಿಲಿಟರಿ ಸಹಾಯ ಕೋರಿದ ಸಿಡ್ನಿಕೋವಿಡ್‌ ಪ್ರಕರಣ ಹೆಚ್ಚಳ ಬೆನ್ನಲ್ಲೇ ಮಿಲಿಟರಿ ಸಹಾಯ ಕೋರಿದ ಸಿಡ್ನಿ

ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 259 ಕ್ಕೆ ಇಳಿದಿವೆ ಮತ್ತು ಅದೇ ಅವಧಿಯಲ್ಲಿ 26 ಜನರು ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 43,509 ಕೋವಿಡ್ -19 ಪ್ರಕರಣಗಳು ಮತ್ತು 640 ಸಾವುಗಳು ವರದಿಯಾಗಿವೆ.

ಕರ್ನಾಟಕದಲ್ಲಿ 2,052 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 35 ಸಾವುಗಳು ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 29,01,247 ಕ್ಕೆ ಏರಿದೆ. ಬುಧವಾರದ 1,531 ಹೊಸ ಪ್ರಕರಣಗಳಿಂದ ದೈನಂದಿನ ಪ್ರಮಾಣವು 34 ಪ್ರತಿಶತದಷ್ಟು ಹೆಚ್ಚಾಗಿದೆ. ದಿನವು 1,332 ಸೋಂಕಿತರು ಬಿಡುಗಡೆಯಾಗಿದ್ದಾರೆ. ಹೊಸ ಪ್ರಕರಣಗಳನ್ನು ಹೆಚ್ಚಾಗುವುದು ಮುಂದುವರಿಯುತ್ತಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಕೆಯ ಪ್ರಮಾಣ 28,41,479 ಆಗಿದೆ.

ಇನ್ನು ಕರ್ನಾಟಕದಲ್ಲಿ ಕೋವಿಡ್‌ ಹೆಚ್ಚಳಕ್ಕೆ ಸಂಬಂಧಿಸಿ ಮಾತನಾಡಿದ ಕರ್ನಾಟಕ ಮುಖ್ಯಮಂತ್ರಿ, "ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿವೆ ಮತ್ತು ನಮ್ಮಲ್ಲಿ 3 ಗಡಿ ಜಿಲ್ಲೆಗಳಿವೆ. ನಾವು ಜಿಲ್ಲಾಧಿಕಾರಿಗೆ ಜಾಗರೂಕರಾಗಿರಲು ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಿದ್ದೇವೆ. ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧಪಡಿಸಲು ತಿಳಿಸಲಾಗಿದೆ. ನಾನು ವಾಪಸ್ ಹೋದ ನಂತರ ವಿವರವಾದ ಸಭೆ ನಡೆಸುತ್ತೇನೆ," ಎಂದು ಹೇಳಿದ್ದಾರೆ.

ಮೇ 21 ರಿಂದ ಪ್ರತಿ ದಿನವೂ ಹೊಸ ಪ್ರಕರಣಗಳಲ್ಲಿ ಇಳಿಕೆ ದಾಖಲಿಸಿದ ನಂತರ, ತಮಿಳುನಾಡು ಗುರುವಾರ 69 ದಿನಗಳ ನಂತರ ದೈನಂದಿನ ಪ್ರಕರಣಗಳ ಹೆಚ್ಚಳವಾಗಿದೆ. ಬುಧವಾರ 1,756 ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಗುರುವಾರ 1,859 ಹೊಸ ಪ್ರಕರಣಗಳು ದಾಖಲಾಗಿವೆ. ಚೆನ್ನೈ, ಕೊಯಮತ್ತೂರು ಮತ್ತು ಈರೋಡ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿ ದಿನವೂ ಕೋವಿಡ್‌ ಹೆಚ್ಚಳವಾಗುತ್ತಿದೆ. ಚೆನ್ನೈನಲ್ಲಿ ಹೊಸ ಪ್ರಕರಣಗಳು ಜುಲೈ 26 ರಂದು 122 ರಿಂದ ಗುರುವಾರ 181 ಕ್ಕೆ ಏರಿಕೆಯಾಗಿದೆ.

ಅದೇ ಅವಧಿಯಲ್ಲಿ ಕೊಯಮತ್ತೂರಿನಲ್ಲಿ ಪ್ರಕರಣಗಳು 164 ರಿಂದ 188 ಕ್ಕೆ ಏರಿದರೆ, ಈರೋಡ್‌ನಲ್ಲಿ ಅದು 127 ರಿಂದ 166 ಕ್ಕೆ ಏರಿದೆ.

ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಮಾ ಸುಬ್ರಮಣಿಯನ್, "ನಾವು ಈಗ ಹೆಚ್ಚಿನ ಜನರನ್ನು ಪರೀಕ್ಷಿಸುತ್ತಿದ್ದೇವೆ. ಸಂಪರ್ಕ ಪತ್ತೆಹಚ್ಚುವಿಕೆ ಕೂಡ ಸುಧಾರಿಸಿದೆ. ನಾವು ವಾರದ ಹಿಂದೆ ದಿನಕ್ಕೆ ಸುಮಾರು 1.3 ಲಕ್ಷ ಪರೀಕ್ಷೆಗಳನ್ನು ಮಾಡುತ್ತಿದ್ದೆವು. ನಾವು ಈಗ 1.5 ಲಕ್ಷ ಜನರನ್ನು ಪರೀಕ್ಷಿಸುತ್ತಿದ್ದೇವೆ. ಆ ಪೈಕಿ ಹೆಚ್ಚಿನ ಪ್ರಕರಣಗಳು ಅಪಾಯಕಾರಿಯಾಗಿದೆ. ಇದು ಹೊಸ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Following Kerala, neighboring Karnataka and Tamil Nadu too recorded a spike in new Covid cases on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X