ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ವಿರುದ್ಧ ವ್ಯಕ್ತಿಗತ ನಿಂದನೆ ಬಿಡಿ: ಕಾಂಗ್ರೆಸ್ ಮುಖಂಡ ಸಿಂಘ್ವಿ

|
Google Oneindia Kannada News

ನವದೆಹಲಿ, ಆಗಸ್ಟ್ 23: ಕಾಂಗ್ರೆಸ್ಸಿನ ಹಿರಿಯ ನಾಯಕರ ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಸಿ ಹೇಳಿಕೆ ನೀಡಿದ ಬಳಿಕ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಮೋದಿ ಪರ ಟ್ವೀಟ್ ಮಾಡಿದ್ದಾರೆ.

"2014 ರಿಂದ 2019 ರವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಎಲ್ಲಾ ಕೆಲಸಗಳನ್ನೂ ತೆಗಳುವುದಕ್ಕೆ ಬರುವುದಿಲ್ಲ. ಹಾಗೊಮ್ಮೆ ಅವರು ಯಾವ ಉತ್ತಮ ಕೆಲಸವನ್ನೂ ಮಾಡಿಲ್ಲ ಎಂದಾಗಿದ್ದರೆ ಮತದಾರರು ಈ ಪ್ರಮಾಣದಲ್ಲಿ ಅವರ ಕೈ ಹಿಡಿಯುತ್ತಿರಲಿಲ್ಲ" ಎಂದು ಜೈರಾಮ್ ರಮೇಶ್ ಹೇಳಿದ್ದರು.

ಅಭಿಷೇಕ್ ಮನು ಸಿಂಘ್ವಿ ಅವರು ಟ್ವೀಟ್ ಮಾಡಿ, "ಪ್ರಧಾನಿ ಮೋದಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವುದು ಸರಿಯಲ್ಲ, ಅವರು ರಾಷ್ಟ್ರದ ಪ್ರಧಾನಿಯಾಗಿದ್ದು, ಪ್ರತಿ ನಡೆಯಲ್ಲೂ ಉತ್ತಮ, ಕಳಪೆ, ವಿರೋಧಗಳಿರುತ್ತವೆ, ಆದರೆ ಅದನ್ನು ವ್ಯಕ್ತಿಗತವಾಗಿ ನೋಡದೆ, ವಿಷಯಾಧಾರಿತವಾಗಿ ವಿಮರ್ಶಿಸಬೇಕಾಗಿದೆ. ಜೈರಾಮ್ ರಮೇಶ್ ಹೇಳಿದ್ದರಲ್ಲಿ ಅರ್ಥವಿದೆ. ಮೋದಿ ಅವರ ಉಜ್ವಲ ಯೋಜನೆ ನಿಜಕ್ಕೂ ಉತ್ತಮ ಕಾರ್ಯ" ಎಂದಿದ್ದಾರೆ.

After Jairam Ramesh, Congress leader Abhishek Singhvi says demonising PM Modi wrong

ರಮೇಶ್ ಹೇಳಿದ್ದೇನು?: ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಎಲ್ಲಾ ಬಾರಿಯೂ ಋಣಾತ್ಮಕವಾಗಿಯೇ ನೋಡುವುದಕ್ಕೆ ಬರುವುದಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

"ನಾನೇನು ಯಾರೋ ಮೋದಿಯನ್ನು ಹೊಗಳಬೇಕು ಎಂದು ಹೇಳುತ್ತಿಲ್ಲ. ಆದರೆ ಅವರು ಸರ್ಕಾರದಲ್ಲಿತಂದಿರುವ ಕೆಲವು ಬದಲಾವಣೆಯನ್ನು ಗಮನಿಸಬೇಕು" ಎಮದು ಹೇಳುತ್ತಿದ್ದೇನೆ ಎಂದು ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದರು.

"ಮೋದಿಯವರು ಮಾಡಿದ್ದೆಲ್ಲವನ್ನೂ ಋಣಾತ್ಮಕವಾಗಿಯೇ ನೋಡುವ ಅಗತ್ಯವಿಲ್ಲ. ಅವರ ಆಡಳಿತ ಸಂಪೂರ್ಣ ವಿಭಿನ್ನ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನೇ ನೋಡಿ. ಅದು ಎಷ್ಟು ಯಶಸ್ವಿಯಾಗಿದೆ!" ಎಂದು ಜೈರಾಮ್ ರಮೇಶ್ ಶ್ಲಾಘಿಸಿದರು.

English summary
Days after Congress leader Jairam Ramesh praised the work done by Prime Minister Narendra Modi-led government, party leader Abhishek Manu Singhvi on Friday came out in support of Ramesh and said that "demonising" the PM was wrong and acts must be judged "issue-wise, not person-wise".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X