• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಜರಾತ್: ಸಾಗರ ವಿಮಾನದಲ್ಲಿ ಮೋದಿ ಪ್ರಚಾರದ ಸರ್ಕಸ್

By ವಿಕಾಸ್ ನಂಜಪ್ಪ
|
   ಸಾಗರ ವಿಮಾನದಲ್ಲಿ ಮೋದಿ ಪ್ರಚಾರದ ಸರ್ಕಸ್ | Filmibeat Kannada

   ಅಹಮದಾಬಾದ್, ಡಿಸೆಂಬರ್ 12: ನಗರದಲ್ಲಿ ಇಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಕಾನೂನು ಸುವ್ಯವಸ್ಥೆಯ ಕಾರಣ ಮುಂದಿಟ್ಟು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಇದಕ್ಕೆ ಪರ್ಯಾಯವಾಗಿ ಮೋದಿ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದೇ ಸಾಗರ ವಿಮಾನ!

   ಸಾಬರಮತಿ ನದಿಯಿಂದ ಪ್ರಧಾನಿ ನರೇಂದ್ರ ಮೋದಿ ಸಾಗರ ವಿಮಾನದಲ್ಲಿ ಇಂದು ಮೇಲೇರಲಿದ್ದಾರೆ. ನಂತರ ಈ ವಿಮಾನ ಧರೋಯ್ ನ ಕೆರೆಯಲ್ಲಿ ಲ್ಯಾಂಡ್ ಆಗಲಿದೆ. ಅಲ್ಲಿಂದ ಅಂಬಾಜಿ ದೇವಸ್ಥಾನಕ್ಕೆ ರಸ್ತೆ ಮಾರ್ಗವಾಗಿ ತೆರಳಲಿದ್ದಾರೆ.

   ಮಿಷನ್ 150: ಗುಜರಾತ್ ನಲ್ಲಿ ಬಿಜೆಪಿಗೆ ಕಾಂಗ್ರೆಸ್ ದಾಖಲೆ ಮುರಿಯುವ ತವಕ

   ಭಾರತದಲ್ಲಿ ಸಾಗರ ವಿಮಾನ ಟೇಕ್ ಆಫ್ ಆಗುತ್ತಿರುವ ಮೊದಲ ದೃಷ್ಟಾಂತ ಇದಾಗಲಿದೆ. ಈ ಸಂಬಂಧ ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, "ಈ ಮಟ್ಟಿಗಿನ ಅಭಿವೃದ್ಧಿಯನ್ನು ಕಾಂಗ್ರೆಸ್ ಗೆ ಸಹಿಸಿಕೊಳ್ಳಲಾಗುತ್ತಿಲ್ಲ," ಎಂದಿದ್ದಾರೆ.

   "ನಾವು ಎಲ್ಲಾ ಕಡೆಯೂ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾವು ವಾಟರ್ ವೇ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ದೇಶದಾದ್ಯಂತ 106 ವಾಟರ್ ವೇಗಳ ಬಗ್ಗೆ ಯೋಜನೆ ರೂಪಿಸಿದ್ದೇವೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

   ಅಹ್ಮದಾಬಾದ್: ಮೋದಿ-ರಾಹುಲ್ ಪ್ರಚಾರ ಯಾತ್ರೆಗೆ ಪೊಲೀಸರಿಂದ ನಕಾರ

   "ನಾಳೆ ಬೆಳಿಗ್ಗೆ (ಮಂಗಳವಾರ) ಸಾಬರಮತಿ ನದಿಯಲ್ಲಿ 9.30ಕ್ಕೆ ವಿಮಾನವೊಂದು ಲ್ಯಾಂಡ್ ಆಗಲಿದೆ. ಈ ಸಾಗರ ವಿಮಾನದಲ್ಲಿ ನಾನಿರಲಿದ್ದೇನೆ. ಇಲ್ಲಿಂದ ಧರೋಯಿಗೆ ಹೋಗಿ ನಾನು ಅಂಬಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲಿದ್ದೇನೆ," ಎಂದು ನರೇಂದ್ರ ಮೋದಿ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

   ಗುಜರಾತ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಸಾಗರ ವಿಮಾನ ಏರಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

   ಇದೇ ಡಿಸೆಂಬರ್ 14ರಂದು ಗುಜರಾತ್ ನಲ್ಲಿ ಎರಡನೇ ಹಂತದ ಮತದಾನ 93 ಸ್ಥಾನಗಳಿಗೆ ನಡೆಯಲಿದೆ. ಈಗಾಗಲೇ ಮೊದಲ ಹಂತದ ಮತದಾನ ಡಿಸೆಂಬರ್ 9ರಂದು ನಡೆದಿದ್ದು ಫಲಿತಾಂಶ ಡಿಸೆಂಬರ್ 18ರಂದು ಹೊರ ಬೀಳಲಿದೆ.

   English summary
   Prime Minister Narendra Modi’s roadshow in Ahmedabad was cancelled. The PM has now opted for another plan that possibly could be a first. The PM would use a sea plane to take off from the Sabarmati river. The plane would land on the pond of the Dharoi dam from where Modi will proceed to the temple of Ambaji by road.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X