ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬತ್ತುತ್ತಿವೆ ನದಿಗಳು, ಪ್ರವಾಹದ ಹೊಸ ಸಂಕಷ್ಟದಲ್ಲಿ ಕೇರಳ

|
Google Oneindia Kannada News

ತಿರುವನಂತಪುರ, ಸೆಪ್ಟೆಂಬರ್ 13: ಭಾರಿ ಪ್ರವಾಹದಿಂದ ತತ್ತರಿಸಿಹೋದ ಕೇರಳದಲ್ಲಿ ಈಗ ಹೊಸ ಸಂಕಟ ಎದುರಾಗಿದೆ. ಇದ್ದಕ್ಕಿಂದ್ದಂತೆ ನದಿ, ಹಳ್ಳ, ಬಾವಿಗಳು ಇಂಗಿಹೋಗುತ್ತಿವೆ.

ಭಾರಿ ಮಳೆಯಿಂದ ಪ್ರವಾಹಬಂದು, ವರ್ಷಾನುಗಟ್ಟಲೆ ಹರಿಯದ, ನದಿ, ತೊರೆ, ಹಳ್ಳಗಳೆಲ್ಲಾ ತುಂಬು ಹರಿದಿದ್ದ ಕೇರಳದಲ್ಲಿ ಪ್ರವಾಹ ಇಳಿದ ಕೆಲವೇ ದಿನಗಳಲ್ಲಿ ಈ ಹೊಸ ಸಂಕಷ್ಟ ಎದುರಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ನೀರಿನಿಂದ ತುಂಬಿ ತುಳುಕುತ್ತಿದ್ದ ನದಿ, ಹಳ್ಳಗಳು ಬತ್ತಿಹೋಗುತ್ತಿವೆ.

ಕೇರಳ ಪ್ರವಾಹ: ಎಂಟು ದಿನ ಜತೆಗಿದ್ದರೂ ಇವರ ಗುರುತು ಯಾರಿಗೂ ಸಿಗಲಿಲ್ಲ!ಕೇರಳ ಪ್ರವಾಹ: ಎಂಟು ದಿನ ಜತೆಗಿದ್ದರೂ ಇವರ ಗುರುತು ಯಾರಿಗೂ ಸಿಗಲಿಲ್ಲ!

ಭೂಮಿಯಲ್ಲಿ ಪಾದರಸ ಪ್ರಮಾಣ ಏಕಾಏಕಿ ಹೆಚ್ಚಾಗಿದೆ ಹಾಗಾಗಿ ನದಿಗಳು, ಬಾವಿ, ಹಳ್ಳಗಳೆಲ್ಲಾ ಬತ್ತಿ ಹೋಗುತ್ತಿವೆ ಎಂದು ಅಂದಾಜಿಸಲಾಗಿದ್ದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ ತನಿಖೆಯ ಜವಾಬ್ದಾರಿಯನ್ನು ರಾಜ್ಯ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಹವಾಮಾನ ಇಲಾಖೆಗೆ ವಹಿಸಿದೆ.

After floods River and well dry up in Kerala

ಕೇರಳದಂತೆ ರಾಜ್ಯದಲ್ಲಿ ಇಲಿಜ್ವರ ಭೀತಿ ಇಲ್ಲ : ಆರೋಗ್ಯ ಇಲಾಖೆಕೇರಳದಂತೆ ರಾಜ್ಯದಲ್ಲಿ ಇಲಿಜ್ವರ ಭೀತಿ ಇಲ್ಲ : ಆರೋಗ್ಯ ಇಲಾಖೆ

ಅತಿವೃಷ್ಠಿಯ ನಂತರ ಏಕಾ-ಏಕಿ ಹೀಗೆ ನೀರು ಬತ್ತಿಹೋಗುತ್ತಿರುವ ಕಾರಣ ವಿಚಿತ್ರ ಹುಳ್ಳುಗಳು ಭಾರಿ ಸಂಖ್ಯೆಯಲ್ಲಿ ಎಲ್ಲ ಹಳ್ಳ, ಬಾವಿಗಳಲ್ಲಿ ಕಂಡುಬರುತ್ತಿದ್ದು, ಸ್ಥಳೀಯರನ್ನು ಗಾಬರಿಗೊಳಿಸಿವೆ. ಆದರೆ ಕೆಲವುಕಡೆ ಪ್ರವಾಹದ ನಂತರ ಮಣ್ಣಿನ ಹುಳಗಳು ನಾಪತ್ತೆಯೇ ಆಗಿಬಿಟ್ಟಿವೆ.

After floods River and well dry up in Kerala

ಪ್ರವಾಹದ ಲಾಭ ಪಡೆದ ಮಿಷನರಿಗಳು: ಎಗ್ಗಿಲ್ಲದೆ ಸಾಗಿದೆ ಮತಾಂತರದ ಹಾವಳಿಪ್ರವಾಹದ ಲಾಭ ಪಡೆದ ಮಿಷನರಿಗಳು: ಎಗ್ಗಿಲ್ಲದೆ ಸಾಗಿದೆ ಮತಾಂತರದ ಹಾವಳಿ

ಕೇರಳದ ಪೆರಿಯಾರ್, ಭಾರತ್‌ಪೂಜಾ, ಪಂಪಾ, ಕಬನಿ ಸೇರಿದಂತೆ ಹಲವು ನದಿಗಳು ಅತಿಯಾದ ಮಳೆಯಿಂದಾಗಿ ಕೆಲವು ದಿನಗಳ ಹಿಂದೆಯಷ್ಟೆ ರೌದ್ರಾವತಾರವಾಗಿ ಹರಿದಿದ್ದವು. ಆದರೆ ಏಕಾ-ಏಕಿ ಈಗ ಬತ್ತಿಹೋಗುತ್ತಿವೆ. ಇದು ಸರ್ಕಾರವನ್ನೇ ಗಾಬರಿಗೊಳಿಸಿದೆ.

English summary
Rivers and well dry up in Kerala. CM Pinarayi Vijayan has directed the State Council for Science, Technology & Environment to carry out studies on the phenomenon after floods across the state and suggest possible solutions to the problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X