ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಪಿಜಿ ನಂತರ, ಸೀಮೆ ಎಣ್ಣೆ ಮೇಲಿನ ಸಬ್ಸಿಡಿ ತೆರವಿಗೆ ನಿರ್ಧಾರ

ಸೀಮೆ ಎಣ್ಣೆ ಮೇಲಿನ ಸಹಾಯ ಧನ ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧಾರ. ಇದಕ್ಕೆ ಪೂರಕವಾಗಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಸೀಮೆ ಎಣ್ಣೆ ಬೆಲೆ ಏರಿಕೆ. ಪ್ರತಿ ಲೀಟರಿಗೆ 25 ಪೈಸೆಯಂತೆ ಹೆಚ್ಚಿಸಲು ನಿರ್ಧಾರ.

|
Google Oneindia Kannada News

ನವದೆಹಲಿ, ಆಗಸ್ಟ್ 3: ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಮೇಲಿನ ಸಬ್ಸಿಡಿಯನ್ನು ಶೀಘ್ರವೇ ಸಂಪೂರ್ಣವಾಗಿ ತೆಗೆದು ಹಾಕುವ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ, ಸೀಮೆ ಎಣ್ಣೆಯ ಮೇಲಿರುವ ಸಬ್ಸಿಡಿಯನ್ನೂ ತೆಗೆದು ಹಾಕಲು ನಿರ್ಧರಿಸಿದೆ.

ಇತ್ತೀಚಿನ ವರ್ಷಗಲ್ಲಿ ತೈಲೋದ್ಯಮದ ವ್ಯವಹಾರವು ಷೇರುಪೇಟೆಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವುದರಿಂದ, ಸಬ್ಸಿಡಿ ಹಾಗೂ ಇನ್ನಿತರ ಸವಲತ್ತುಗಳು ಈ ಕ್ಷೇತ್ರದ ಖಾಸಗಿ ಕಂಪನಿಗಳ ಸುಗಮ ವಹಿವಾಟಿಗೆ ತೊಂದರೆ ಉಂಟು ಮಾಡಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬರುವ ಆದಾಯವೂ ಸರಿಯಾಗಿ ಬರುತ್ತಿಲ್ಲವಾದ್ದರಿಂದ, ಸಬ್ಸಿಡಿಗಳನ್ನು ಹಂತ ಹಂತವಾಗಿ ತೆಗೆದುಹಾಕಲು ನಿರ್ಧರಿಸಲಾಗಿದೆ. ಇದಲ್ಲದೆ, ಜನರಿಗೆ ಈಗ ಅಡುಗೆ ಅನಿಲ ಸಿಲಿಂಡರ್ ಹಾಗೂ ಸೀಮೆ ಎಣ್ಣೆಗಳನ್ನು ಪೂರ್ತಿಯಾಗಿ ಸಬ್ಸಿಡಿ ರಹಿತ ದರಗಳಲ್ಲಿ ಕೊಳ್ಳುವ ಶಕ್ತಿಯೂ ಬಂದಿರುವುದರಿಂದ ಸಬ್ಸಿಡಿ ತೆಗೆದು ಹಾಕುವ ನಿರ್ಧಾರಕ್ಕೆ ಬಂದಿರುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ.

After diesel and LPG, government to now end subsidy on kerosene

ಸೀಮೆಎಣ್ಣೆಯ ಸಬ್ಸಿಡಿಯನ್ನು ಹಂತಹಂತವಾಗಿ ತೆಗೆಯುವ ಉದ್ದೇಶದಿಂದಲೇ ಇನ್ನು ಮುಂದೆ ಪ್ರತಿ 15 ದಿನಕ್ಕೊಮ್ಮೆ ಪ್ರತಿ ಲೀಟರ್ ಸೀಮೆ ಎಣ್ಣೆ ಬೆಲೆಯನ್ನು 25 ಪೈಸೆಯಂತೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

English summary
The government has taken further steps to gradually reduce subsidy on kerosene, says the sources. Recently, the government has expressed to eliminate the subsidy to LPG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X