ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದ ಶಾಲಾ ಕಾಲೇಜುಗಳಲ್ಲಿ ಈಗ ಜೀನ್ಸ್, ಟೀ ಶರ್ಟ್ ಬ್ಯಾನ್!

ಕೇವಲ ವಿದ್ಯಾರ್ಥಿನಿಯರಿಗಷ್ಟೇ್ ಅಲ್ಲ, ಈ ವಿದ್ಯಾ ಸಂಸ್ಧೆಗಳಲ್ಲಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೂ ಈ ನಿಯಮ ಅನ್ವಯ ಆಗಲಿದೆ.

|
Google Oneindia Kannada News

ಲಕ್ನೋ, ಏಪ್ರಿಲ್ 5: ಉತ್ತರ ಪ್ರದೇಶದ ಶಾಲಾ ಕಾಲೇಜುಗಳಲ್ಲಿ ಯುವತಿಯರು ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಗಳನ್ನು ಧರಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ, ಶಾಲಾ ಕಾಲೇಜುಗಳಿಗೆ ಅಸಭ್ಯವಾಗಿ ಬಟ್ಟೆ ಹಾಕಿಕೊಂಡು ಬರುವುದನ್ನೂ ನಿಷೇಧಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಒಟ್ಟು 158 ಸರ್ಕಾರಿ ಶಾಲೆಗಳಿವೆ, 331 ಅನುದಾನಿತ ಶಾಲೆಗಳಿವೆ. ಈ ಶಾಲೆಗಳೂ ಸೇರಿದಂತೆ ರಾಜ್ಯದ ಎಲ್ಲಾ ಕಾಲೇಜಗಳು, ವಿಶ್ವ ವಿದ್ಯಾಲಯಗಳಿಗೆ ಈ ನಿಯಮ ಅನ್ವಯವಾಗಲಿದೆ.[ಮೊದಲ ಸಚಿವ ಸಂಪುಟ ಸಭೆಯಲ್ಲೇ ರೈತರ ಹೊರೆ ಇಳಿಸಿದ ಯೋಗಿ ಆದಿತ್ಯನಾಥ್]

After Cigarettes and Gutkha, UP Govt Bans Jeans and T-shirt in Colleges

ಕೇವಲ ವಿದ್ಯಾರ್ಥಿನಿಯರಿಗಷ್ಟೇ್ ಅಲ್ಲ, ಈ ವಿದ್ಯಾ ಸಂಸ್ಧೆಗಳಲ್ಲಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೂ ಈ ನಿಯಮ ಅನ್ವಯ ಆಗಲಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸರ್ಕಾರಿ ಕಚೇರಿಗಳಲ್ಲಿ ಸಿಗರೇಟು, ಗುಟ್ಕಾ ನಿಷೇಧವಾಗಿದ್ದವು. ಅಷ್ಟೇ ಅಲ್ಲದೆ, ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸಿದ್ದು, ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿದ್ದು, ರೈತರ ಸಾಲ ಮನ್ನಾ ಮಾಡಿದ್ದು ಮುಂತಾದ ನಿರ್ಧಾರಗಳು ಜನರ ಮನ ಗೆದ್ದಿದ್ದವು.[ಉತ್ತರ ಪ್ರದೇಶ: ಕೈಗಾರಿಕಾ ವಲಯದಲ್ಲಿ ಸ್ಥಳೀಯರಿಗೆ ಶೇ. 90ರಷ್ಟು ಮೀಸಲಾತಿ?]

ಆದರೆ, ಈಗ ಮಹಿಳೆಯರಿಗೆ ಜೀನ್ಸ್ ಪ್ಯಾಂಟ್, ಟೀ ಶರ್ಟ್ ನಿಷೇಧದ ನಿರ್ಧಾರ ವಿವಾದ ಹುಟ್ಟುಹಾಕಬಹುದು ಹಾಗೂ ವಿರೋಧ ಪಕ್ಷಗಳ ವಾಗ್ದಾಳಿಗೂ ಕಾರಣವಾಗಬಹುದು ಎಂದು ಹೇಳಲಾಗಿದೆ.

English summary
Teachers of 158 government colleges and 331 government-aided colleges in Uttar Pradesh have been instructed to dress up “modestly” and give up jeans and t-shirts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X