ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಐಐಟಿ ಕ್ಯಾಂಪಸ್ಸಿನಲ್ಲಿ ನಡೀತು ಬೀಫ್ ಫೆಸ್ಟ್!

ಕೇಂದ್ರ ಸರ್ಕಾರವು ಇತ್ತೀಚೆಗೆ ಕಸಾಯಿ ಖಾನೆಗೆ ಗೋವುಗಳನ್ನು ಮಾರುವುದನ್ನು ನಿಷೇಧಿಸಿದೆ. ಅಲ್ಲದೆ, ಗೋ ಮಾಂಸ ಮಾರಾಟವನ್ನೂ ನಿಷೇಧಿಸಿದ್ದನ್ನು ವಿರೋಧಿಸಿ ವಿದ್ಯಾಸಂಸ್ಥೆಯ ಪ್ರೋಗ್ರೆಸಿವ್ ಸ್ಟೂಡೆಂಟ್ಸ್ ಎಂಬ ಸಂಘಟನೆಯು ವಿರೋಧ ವ್ಯಕ್ತಪಡಿಸಿದೆ.

|
Google Oneindia Kannada News

ಚೆನ್ನೈ, ಮೇ 29: ಇಲ್ಲಿನ ಐಐಟಿಯಲ್ಲಿನ ಒಂದು ಗುಂಪಿಗೆ ಸೇರಿದ ವಿದ್ಯಾರ್ಥಿ ವೃಂದವೊಂದು ಕೇಂದ್ರ ಸರ್ಕಾರದ ಗೋ ಮಾರಾಟ ನಿಷೇಧ ಕಾನೂನನ್ನು ಖಂಡಿಸಿದ್ದಾರೆ. ಇದನ್ನು ಸಾಂಕೇತಿಕವಾಗಿ ತೋರ್ಪಡಿಸಲು, ಅವರು ಭಾನುವಾರ (ಮೇ 28) ರಾತ್ರಿ ತಮ್ಮ ವಿದ್ಯಾಸಂಸ್ಥೆಯ ಕ್ಯಾಂಪಸ್ ನಲ್ಲಿ ಬೀಫ್ ಫೆಸ್ಟ್ ಆಚರಿಸಿದ್ದಾರೆ.

ಕೇಂದ್ರ ಸರ್ಕಾರವು ಇತ್ತೀಚೆಗೆ ಕಸಾಯಿ ಖಾನೆಗೆ ಗೋವುಗಳನ್ನು ಮಾರುವುದನ್ನು ನಿಷೇಧಿಸಿದೆ. ಅಲ್ಲದೆ, ಗೋ ಮಾಂಸ ಮಾರಾಟವನ್ನೂ ನಿಷೇಧಿಸಿದೆ.[ಬೀಫ್ ಫೆಸ್ಟಿವಲ್ ಗೆ ಅನುಮತಿ ನೀಡಿಲ್ಲ: ಬೆಂಗಳೂರು ಪೊಲೀಸ್]

After Ban On Sale Of Cattle For Slaughter, IIT Students Hold 'Beef Fest'

ಗೋವು ಮಾಂಸವನ್ನು ನಿಷೇಧಿಸಲಾಗಿರುವ ಕೇಂದ್ರದ ಕ್ರಮವನ್ನು ಚೆನ್ನೈ ಐಐಟಿಯ ಪ್ರೋಗ್ರೆಸಿವ್ ಸ್ಟೂಡೆಂಟ್ಸ್ ಎಂಬ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಈ ಫೆಸ್ಟ್ ಆಯೋಜಿಸಿದ್ದರು. ಇದರಲ್ಲಿ ಸುಮಾರು 80 ವಿದ್ಯಾರ್ಥಿಗಳು ಭಾಗವಹಿಸಿದ್ದರು.[ಗೋಮಾಂಸ ಭಕ್ಷಕರ ವಿರುದ್ಧ ಟ್ವಿಟ್ಟಿಗರ ತೀವ್ರ ಆಕ್ಷೇಪ]

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಸಂಘಟನೆಯ ಹೆಸರನ್ನೇಳಲು ಇಚ್ಛಿಸದ ಮುಖ್ಯಸ್ಥ, ''ಕೇಂದ್ರ ಸರ್ಕಾರವು ತನ್ನ ಕೋಮುವಾದಿ ಧೋರಣೆಗಳನ್ನು ಜನರ ಮೇಲೆ ಹೇರುತ್ತಿದೆ'' ಎಂದು ಹೇಳಿದ್ದಾರೆ.

English summary
Around 80 students participated in a beef fest at the IIT (Indian Institute of Technology) Madras last night, where they also discussed the Central government's recent ban on sale of cattle for slaughter at cattle markets. There is no ban on beef in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X