ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹದ ನಂತರ ಶಬರಿಮಲೆ ಓಪನ್: ಅಯ್ಯಪ್ಪ ಮಾಲಾಧಾರಿಗಳಿಗೆ ಮಹತ್ವದ ಟಿಪ್ಸ್

|
Google Oneindia Kannada News

ಕಂಡುಕೇಳರಿಯದ ಮಳೆ, ಪ್ರವಾಹ, ಭೂಕುಸಿತದಿಂದ ತತ್ತರಿಸಿ ಹೋಗಿದ್ದ ಕೇರಳ ಮತ್ತೆ ಸಹಜಸ್ಥಿತಿಗೆ ಮರಳುತ್ತಿದೆ. ಆಗಸ್ಟ್ ತಿಂಗಳಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಮುಚ್ಚಲಾಗಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವನ್ನು ಮತ್ತೆ ಭಾನುವಾರ (ಸೆ 16) ಸಂಜೆಯಿಂದ ತೆರೆಯಲಾಗಿದೆ.

ಪಶ್ಚಿಮ ಘಟ್ಟದಲ್ಲಿರುವ ಪುರಾಣಪ್ರಸಿದ್ದ ಶಬರಿಮಲೆ ದೇವಸ್ಥಾನವನ್ನು, ಮಲಯಾಳಂ ತಿಂಗಳ ಮೊದಲ ದಿನ ಕನ್ನಿಮಾಸ ಪೂಜೆಯನ್ನು, ದೇವಾಲಯದ ಪ್ರಧಾನ ಅರ್ಚಕ ಕಂಡರಾರು ರಾಜೀವಾರು ನೆರವೇರಿಸುವ ಮೂಲಕ, ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ

ಕೇರಳದ ನೈಸರ್ಗಿಕ ವಿಕೋಪಕ್ಕೆ ಅನರ್ಥ ಸಂಬಂಧ ಕಲ್ಪಿಸುತ್ತಿರುವ ವಿಘ್ನ ಸಂತೋಷಿಗಳು!ಕೇರಳದ ನೈಸರ್ಗಿಕ ವಿಕೋಪಕ್ಕೆ ಅನರ್ಥ ಸಂಬಂಧ ಕಲ್ಪಿಸುತ್ತಿರುವ ವಿಘ್ನ ಸಂತೋಷಿಗಳು!

ಸೋಮವಾರದಿಂದ ನೇವ್ಯಾಭಿಷೇಕಂ, ಉದಯಸ್ಥಾಮನ, ಪಡಿಪೂಜೆ ಸೇರಿದಂತೆ ದೈನಂದಿನ ಪೂಜಾ ಪದ್ದತಿ ಆರಂಭವಾಗಿದೆ. ದೇವಸ್ಥಾನದ ಸಂಪ್ರದಾಯದಂತೆ, ಶುಕ್ರವಾರದಿಂದ (ಸೆ 21) ಮತ್ತೆ ದೇವಾಲಯವನ್ನು ಮುಚ್ಚಲಾಗುವುದು.

ಆಗಸ್ಟ್ ತಿಂಗಳ ಮಧ್ಯಭಾಗದಿಂದ ಸೆಪ್ಟಂಬರ್ 16ನೇ ತಾರೀಕಿನವರೆಗೆ, ಭಾರೀ ಮಳೆ ಮತ್ತು ಅದರಿಂದಾದ ತೊಂದರೆಯಿಂದಾಗಿ, ದೇವಸ್ಥಾನದಲ್ಲಿ ದೈನಂದಿನ ಪೂಜೆಗಳು ನಡೆದಿರಲಿಲ್ಲ. ಭಕ್ತರಿಗೆ ಕೆಲವೊಂದು ಪ್ರಮುಖ ಮಾಹಿತಿಯಿಂತಿದೆ:

After August floods famours Sabarimala temple reopened on September 16

> ಭಾರೀ ಮಳೆಯಿಂದ ತ್ರಿವೇಣಿ ಸೇತುವೆ ಕೊಚ್ಚಿ ಹೋಗಿರುವುದರಿಂದ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ.
> ಮನ್ನಾರಕುಳಂಜಿ- ಪಂಪಾ ರಸ್ತೆಯ ಸುಮಾರು ಏಳು ಕಡೆ ಭೂಕುಸಿತ ಮುಂದುವರಿದಿದ್ದು, ದುರಸ್ಥಿ ಕಾಮಗಾರಿ ನಡೆಯುತ್ತಿದೆ.
> ಚಾಳಕಾಯಂ - ಪಂಪಾ ನಡುವೆ ಎರಡು ಕಡೆ ರಸ್ತೆ ತೀರಾ ಹದೆಗೆಟ್ಟಿದ್ದು, ಈ ಭಾಗದಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸಲು ಸೂಚಿಸಲಾಗಿದೆ.

ಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿ

>
ಪಂಪಾ ಬಳಿಯ ವಾಹನ ಪಾರ್ಕಿಂಗ್ ಸ್ಥಳದ ಬಲಭಾಗದಲ್ಲಿ ಆಗಾಗ ಭೂಕುಸಿತ ಇನ್ನೂ ಮುಂದುವರಿದ್ದು, ಆ ಜಾಗದಲ್ಲಿ ಪಾರ್ಕಿಂಗ್ ಮಾಡದಂತೆ ಸೂಚಿಸಲಾಗಿದೆ.
> ಭಕ್ತರಿಗೆ ತ್ರಿವೇಣಿ ಸೇತುವೆಯ ಮೂಲಕ ಆಗಮಿಸಿ, ನಿಲಯಕ್ಕಲ್ ವರೆಗೆ ವಾಹನ ಪಾರ್ಕಿಂಗಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಕೇರಳ ಸಾರಿಗೆ ಬಸ್ ವ್ಯವಸ್ಥೆಯಿದೆ.
> ಸನ್ನಿಧಾನಕ್ಕೆ ತ್ರಿವೇಣಿ ಸೇತುವೆಯ ಮೂಲಕ ಹೋಗಬೇಕಾಗಿದ್ದು, ಮಳೆಯಿಂದ ಪಂಪಾ ನದಿಯಿಂದ ಬಂದ ಮರಳುಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ.

ಪ್ರವಾಹಕ್ಕೆ ಕಾರಣವಾದ ಸೋಮಾಲಿ ಜೆಟ್‌ ಚಂಡ ಮಾರುತ ಎಂದರೇನು?ಪ್ರವಾಹಕ್ಕೆ ಕಾರಣವಾದ ಸೋಮಾಲಿ ಜೆಟ್‌ ಚಂಡ ಮಾರುತ ಎಂದರೇನು?

> ಪಂಪಾ ನದಿಯ ಬಳಿ ಯಾವುದೇ ಅಂಗಡಿ ಮುಂಗಟ್ಟುಗಳು ಇನ್ನೂ ತೆರೆಯಲು ಅನುಮತಿ ನೀಡಿಲ್ಲ. ಭಕ್ತರು ಕುಡಿಯುವ ನೀರು, ಆಹಾರದ ವ್ಯವಸ್ಥೆಯನ್ನು ಮಾಡಿಕೊಂಡು ಬರಬೇಕು.
> ಯಾವುದೇ ಕಾರಣಕ್ಕೆ ಪಂಪಾನದಿಯಲ್ಲಿ ಭಕ್ತರು ಸ್ನಾನ ಮಾಡುವಂತಿಲ್ಲ.

English summary
The famed Hindu temple in Western Ghat Sabarimala Ayyappa Swamy temple reopened on September 16, after August floods. Here is the few important tips for Ayyappa devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X