ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು ಕೊವಿಡ್ ಪರೀಕ್ಷೆ- ವೈಟ್‌ಹೌಸ್

|
Google Oneindia Kannada News

ದೆಹಲಿ, ಜುಲೈ 17: ಅಮೆರಿಕ ಬಿಟ್ಟರೆ ಭಾರತದಲ್ಲೇ ಅತಿ ಹೆಚ್ಚು ಕೊವಿಡ್ ಪರೀಕ್ಷೆ ನಡೆದಿದೆ ಎಂದು ವೈಟ್‌ಹೌಸ್‌ ಹೇಳಿದೆ. ಹೆಚ್ಚು ಪರೀಕ್ಷೆ ಮಾಡಿದ ಪರಿಣಾಮ ಹೆಚ್ಚು ಸೋಂಕು ವರದಿಯಾಗುತ್ತಿದೆ ಎಂದು ಸಮರ್ಥಿಸಿಕೊಂಡಿರುವ ಯುಎಸ್ ಜಗತ್ತಿನಲ್ಲಿ ನಾವೇ ಹೆಚ್ಚು ಪರೀಕ್ಷೆ ಮಾಡಿರುವುದು ಎಂದು ಮತ್ತೊಮ್ಮೆ ತಿಳಿಸಿದೆ.

ಅಮೆರಿಕದಲ್ಲಿ ಇದುವರೆಗೂ 42 ಮಿಲಿಯನ್‌ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಭಾರತದಲ್ಲಿ 13 ಮಿಲಿಯನ್ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ಯುಎಸ್ ಮಾಹಿತಿ ನೀಡಿದೆ.

ಅಮೆರಿಕಾದಲ್ಲಿ ಒಂದೇ ದಿನ 68,428 ಮಂದಿಗೆ ಕೊರೊನಾವೈರಸ್ ಸೋಂಕು!ಅಮೆರಿಕಾದಲ್ಲಿ ಒಂದೇ ದಿನ 68,428 ಮಂದಿಗೆ ಕೊರೊನಾವೈರಸ್ ಸೋಂಕು!

'ನಾವು 42 ಮಿಲಿಯನ್‌ಗೂ ಹೆಚ್ಚಿನ ಪರೀಕ್ಷೆಗಳನ್ನು ಮಾಡಿದ್ದೇವೆ. ಭಾರತ ಎರಡನೇ ಅತಿ ಹೆಚ್ಚು ಪರೀಕ್ಷೆ (12 ಮಿಲಿಯನ್) ಮಾಡಿದೆ. ನಾವು ಕೊವಿಡ್ ಪರೀಕ್ಷೆಯಲ್ಲಿ ಜಗತ್ತನ್ನು ಮುನ್ನಡೆಸುತ್ತಿದ್ದೇವೆ' ಎಂದು ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

After America India done most Covid19 tests Says White House

ಪ್ರಸ್ತುತ ಅಮೆರಿಕದಲ್ಲಿ 3.5 ಮಿಲಿಯನ್ (3,695,302) ಜನರಿಗೆ ಕೊವಿಡ್ ತಗುಲಿದೆ. ಅದರಲ್ಲಿ 141,118 ಜನರು ಮೃತಪಟ್ಟಿದ್ದಾರೆ. 1.6 ಮಿಲಿಯನ್ (1,679,749) ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವೈಟ್‌ಹೌಸ್‌ ಮಾಹಿತಿ ನೀಡಿದೆ.

ಜುಲೈ 17ರ ಬೆಳಗ್ಗೆ ಕೇಂದ್ರ ಸರ್ಕಾರ ನೀಡಿದ ವರದಿ ಪ್ರಕಾರ ಭಾರತದಲ್ಲಿ 1,30,72,718 ಪರೀಕ್ಷೆ ಮಾಡಲಾಗಿದೆ. ಜುಲೈ 16ರಂದು ಒಂದೇ ದಿನ ದೇಶದಲ್ಲಿ 3,33,228 ಕೊವಿಡ್ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ಭಾರತದ ಒಟ್ಟು ಕೊರೊನಾ ಸೋಂಕಿತರ ಪ್ರಕರಣಗಳ ಪೈಕಿ 10,03,832ಕ್ಕೆ ಏರಿಕೆಯಾಗಿದೆ. ಇದರಲ್ಲಿ 6,35,757 ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 3,42,473 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈವರೆಗೂ 25,602 ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ.

English summary
After US, India has done most Covid-19 tests: White House After the US, which has carried out a record 42 million Covid-19 tests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X