ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅಂದಾಜು ಪ್ರಗತಿ ದರ ಕಡಿತಗೊಳಿಸಿದ ಐಎಂಎಫ್, ಹೊಸ ಸರಕಾರಕ್ಕೆ ಸವಾಲು

By ಅನಿಲ್ ಆಚಾರ್
|
Google Oneindia Kannada News

ನವದೆಹಲಿ, ಏಪ್ರಿಲ್ 10: ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು (ಐಎಂಎಫ್) ಮಂಗಳವಾರದಂದು 2019-20ನೇ ಸಾಲಿಗೆ ಭಾರತದ ಜಿಡಿಪಿ ಪ್ರಗತಿ ದರವನ್ನು ಕಡಿತಗೊಳಿಸಿದೆ. ಇದಕ್ಕೂ ಮುನ್ನ ಏಷ್ಯನ್ ಡೆವಲಪ್ ಮೆಂಟಲ್ ಬ್ಯಾಂಕ್ (ಎಡಿಬಿ) ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಜಿಡಿಪಿ ಪ್ರಗತಿ ದರವನ್ನು ಕಡಿತಗೊಳಿಸಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾರತದಲ್ಲಿ ಪ್ರಗತಿ ದರವು 2019ನೇ ಸಾಲಿಗೆ (2019-20) 7.3ಕ್ಕೆ ಏರಿಕೆ ಆಗಬಹುದು ಮತ್ತು 2020ನೇ ಇಸವಿಗೆ 7.5% ಆಗುವ ಅಂದಾಜಿತ್ತು. ಆರ್ಥಿಕ ನೀತಿಗಳು ಮತ್ತು ಅವುಗಳ ಮೂಲಕ ದೊರೆಯುವ ಉತ್ತೇಜನ, ಹೂಡಿಕೆ ಇತ್ಯಾದಿಗಳ ಬೆಂಬಲ ಸಿಗಬಹುದು ಎಂದು ವಿಶ್ವ ಆರ್ಥಿಕ ಹೊರನೋಟದ ವರದಿಯಲ್ಲಿ ಮಂಗಳವಾರ ತಿಳಿಸಿದೆ.

2018-19ರ ಆರ್ಥಿಕ ಪ್ರಗತಿ ದರ ಏರಿಕೆ ಶೇ 7.2: ಕೇಂದ್ರ ಸರ್ಕಾರ2018-19ರ ಆರ್ಥಿಕ ಪ್ರಗತಿ ದರ ಏರಿಕೆ ಶೇ 7.2: ಕೇಂದ್ರ ಸರ್ಕಾರ

2019-20 ಹಾಗೂ 2020-21ನೇ ಸಾಲಿಗೆ ಭಾರತದ ಪ್ರಗತಿ ದರವನ್ನು ತಲಾ 20 ಬೇಸಿಸ್ ಪಾಯಿಂಟ್ ಕಡಿತಗೊಳಿಸಿ ಜನವರಿಯಲ್ಲಿ ವರದಿ ಬಿಡುಗಡೆ ಮಾಡಲಾಗಿತ್ತು. ಈ ಬೇಸಿಸ್ ಪಾಯಿಂಟ್ ಮೇಲೆ ಹೇಳುವುದಾದರೆ ಇದು ಪರ್ಸೆಂಟೇಜ್ ಪಾಯಿಂಟ್ ನ ನೂರನೇ ಒಂದು ಭಾಗ.

ಐದು ತ್ರೈ ಮಾಸಿಕದಲ್ಲೇ ಅತ್ಯಂತ ಕನಿಷ್ಠವಾಗಿತ್ತು

ಐದು ತ್ರೈ ಮಾಸಿಕದಲ್ಲೇ ಅತ್ಯಂತ ಕನಿಷ್ಠವಾಗಿತ್ತು

ಎಡಿಬಿ ಹಾಗೂ ಆರ್ ಬಿಐ ಎರಡೂ 2019-20 ನೇ ಸಾಲಿನ ಅಂದಾಜು ಪ್ರಗತಿ ದರವನ್ನು 7.4%ನಿಂದ 7.2%ಗೆ ಇಳಿಸಿದ್ದವು. ಜಾಗತಿಕ ಮಟ್ಟದಲ್ಲಿ ಆರ್ಥಿಕ ಪ್ರಗತಿಯಲ್ಲಿನ ಅಪಾಯಗಳು ಹಾಗೂ ದೇಶೀಯವಾಗಿ ಹೂಡಿಕೆ ಚಟುವಟಿಕೆಗಳಲ್ಲಿನ ದುರ್ಬಲತೆಯನ್ನು ಇದಕ್ಕೆ ಕಾರಣವಾಗಿ ನೀಡಿದ್ದವು. ಡಿಸೆಂಬರ್ ತ್ರೈ ಮಾಸಿಕದಲ್ಲಿ ಭಾರತದ ಆರ್ಥಿಕತೆಯು 6.6% ಪ್ರಗತಿ ದರ ದಾಖಲಿಸಿತ್ತು. ಅದು ಅದಕ್ಕೂ ಮುಂಚಿನ ಐದು ತ್ರೈ ಮಾಸಿಕದಲ್ಲೇ ಅತ್ಯಂತ ಕನಿಷ್ಠವಾಗಿತ್ತು. ಆ ಕಾರಣಕ್ಕೆ ಕೇಂದ್ರ ದತ್ತಾಂಶ ಕಾಚೇರಿಯು 2018-19ರ ಫೆಬ್ರವರಿ ಅಂದಾಜನ್ನು 7.2%ನಿಂದ 7%ಗೆ ಇಳಿಕೆ ಮಾಡಿತ್ತು.

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸರಕಾರದ ಮುಂದೆ ಸವಾಲುಗಳು

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸರಕಾರದ ಮುಂದೆ ಸವಾಲುಗಳು

ಇದೀಗ ಕೇಂದ್ರದಲ್ಲಿ ಮುಂದೆ ಅಧಿಕಾರಕ್ಕೆ ಬರುವ ಪಕ್ಷದ ಮುಂದೆ ಮುಖ್ಯವಾದ ಸವಾಲಿದೆ. ಆರ್ಥಿಕ ವಲಯದಲ್ಲಿ ಸುಧಾರಣೆ ಹಾಗೂ ಅದರ ಸರಿಯಾದ ಜಾರಿ ಮಾಡುವುದು ಅತಿ ಮುಖ್ಯವಾಗಲಿದೆ. ಅದರಲ್ಲೂ ಸಾರ್ವಜನಿಕ ಸಾಲ ಇಳಿಕೆ ಮಾಡುವುದರಿಂದ ದೇಶದ ಆರ್ಥಿಕತೆಗೆ ನೆರವಾಗಲಿದೆ. ಸದ್ಯಕ್ಕೆ ಆರ್ಥಿಕತೆ ಬಲಗೊಳಿಸಿ, ಏರುತ್ತಿರುವ ಸಾರ್ವಜನಿಕ ಸಾಲದ ಹೊರೆ ಇಳಿಸುವುದು ಆದ್ಯತೆ ಆಗಬೇಕಿದೆ. ಜಿಎಸ್ ಟಿಗೆ ಬಲ ತುಂಬುವ ಮೂಲಕ ಈ ಕೆಲಸ ಆಗಬೇಕು. ಜತೆಗೆ ಈಗ ನೀಡುತ್ತಿರುವ ಸಬ್ಸಿಡಿಗಳನ್ನು ಕಡಿಮೆ ಮಾಡಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಹೇಳಿದೆ. ಎನ್ ಪಿಎ ಸಮಸ್ಯೆಗೆ ಪರಿಹಾರವಾಗಿ ಸರಕಾರ ಕಂಡುಕೊಂಡ ಸರಳ ಪರಿಹಾರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತದ GDP ದರ 7 ಪರ್ಸೆಂಟ್ ಅನ್ನೋದು ಅನುಮಾನ: ರಘುರಾಮ್ ರಾಜನ್ ಭಾರತದ GDP ದರ 7 ಪರ್ಸೆಂಟ್ ಅನ್ನೋದು ಅನುಮಾನ: ರಘುರಾಮ್ ರಾಜನ್

ಜಾಗತಿಕ ಪ್ರಗತಿ ದರದ ಅಂದಾಜನ್ನೂ ಕಡಿತಗೊಳಿಸಿದ ಐಎಂಎಫ್

ಜಾಗತಿಕ ಪ್ರಗತಿ ದರದ ಅಂದಾಜನ್ನೂ ಕಡಿತಗೊಳಿಸಿದ ಐಎಂಎಫ್

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು 2019ನೇ ಇಸವಿಗೆ ಜಾಗತಿಕ ಪ್ರಗತಿ ದರವನ್ನೂ 20 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ್ದು, 3.3% ತಲುಪಬಹುದು ಎಂದು ಅಂದಾಜು ಮಾಡಿದೆ. 2008ರ ಆರ್ಥಿಕ ಬಿಕ್ಕಟ್ಟಿನ ನಂತರದ ಅತ್ಯಂತ ಕನಿಷ್ಠ ಮಟ್ಟ ಇದು. ಅದಕ್ಕೆ ಕಾರಣ ಆಗಿರುವುದು ಆಮೆರಿಕ ಹಾಗೂ ಚೀನಾ ಮಧ್ಯದ ವಾಣಿಜ್ಯ ಸಮರ. ಇದರ ಜತೆಜತೆಗೆ ಯುರೋಪ್ ನಲ್ಲಿ ಚಲನಶೀಲತೆ ಕಳೆದುಕೊಂಡಿರುವುದು, ಬ್ರೆಕ್ಸಿಟ್ ಸುತ್ತ ಹಬ್ಬಿಕೊಂಡಿರುವ ಅನಿಶ್ಚಿತತೆ ಇವೆಲ್ಲವೂ ಕಾರಣ ಆಗಿವೆ. ಆದರೂ ಚೀನಾದ ಜಿಡಿಪಿ ಪ್ರಗತಿ ದರವನ್ನು 10 ಬೇಸಿಸ್ ಪಾಯಿಂಟ್ ಏರಿಸಲಾಗಿದೆ. 2019ನೇ ಇಸವಿಯಲ್ಲಿ 6.3% ಆಗಬಹುದು ಎನ್ನಲಾಗಿದೆ.

ಚೀನಾ, ಭಾರತದ ಆರ್ಥಿಕತೆಯ ಗಾತ್ರವು ಕಾರಣ ಆಗಲಿದೆ

ಚೀನಾ, ಭಾರತದ ಆರ್ಥಿಕತೆಯ ಗಾತ್ರವು ಕಾರಣ ಆಗಲಿದೆ

2020ರ ನಂತರ 3.6%ಗಿಂತ ಹೆಚ್ಚಿನ ಪ್ರಮಾಣದ ಅಭಿವೃದ್ಧಿಗೆ ಹೆಚ್ಚಳ ಆಗುತ್ತದೆ. ಅದಕ್ಕೆ ಚೀನಾ ಮತ್ತು ಭಾರತದಂಥ ಆರ್ಥಿಕತೆಯ ಗಾತ್ರ ಕಾರಣ ಆಗಲಿದೆ. ಇದು ಅಭಿವೃದ್ಧಿಗೆ ಪೂರಕ ಆಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ಮಧ್ಯಮಾವಧಿಯಲ್ಲಿ ಅಭಿವೃದ್ಧಿಯು 7.75%ಗಿಂತ ಸ್ವಲ್ಪ ಕಡಿಮೆಯಲ್ಲಿ ಸ್ಥಿರವಾಗಿರುವ ನಿರೀಕ್ಷೆ ಇದೆ. ನಿರಂತರವಾಗಿ ರಚನಾತ್ಮಕ ಸುಧಾರಣೆಗಳು ಹಾಗೂ ಮೂಲಸೌಕರ್ಯದಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡುವ ಮೂಲಕ ಪ್ರಗತಿಗೆ ಪೂರಕ ಆಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

English summary
The International Monetary Fund (IMF) on Tuesday cut India’s GDP growth forecast for 2019-20, following similar action by the Asian Development Bank and the Reserve Bank of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X