ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral Story: 5 ವರ್ಷದ ಹೋರಾಟಕ್ಕೆ ಭಾರತೀಯ ರೈಲ್ವೆ ನೀಡಿದ್ದು 35 ರೂಪಾಯಿ!

|
Google Oneindia Kannada News

ನವದೆಹಲಿ, ಮೇ 31: ಇದು ಭಾರತೀಯ ರೈಲ್ವೆ ವಿರುದ್ಧ ಸುದೀರ್ಘ 5 ವರ್ಷಗಳ ಹೋರಾಟ. ಕೋಟಾ ಮೂಲದ ವ್ಯಕ್ತಿಯೊಬ್ಬ ನಡೆಸಿದ ನಿರಂತರ ಹೋರಾಟದಲ್ಲಿ ಕೊನೆಗೂ ಗೆಲುವು ಸಾಧಿಸಿದ್ದಾರೆ. ಇಂಡಿಯನ್ ರೈಲ್ವೆ ವಿರುದ್ಧ ಸೆಣಸಾಡಿ ಗೆದ್ದ ವ್ಯಕ್ತಿಗೆ ದಕ್ಕಿದ್ದು ಬರೋಬ್ಬರಿ 35 ರೂಪಾಯಿ.

ಕೋಟಾ ಮೂಲದ ವ್ಯಕ್ತಿಯೊಬ್ಬರು ರೈಲ್ವೆಯಿಂದ 35 ರೂಪಾಯಿ ಮರುಪಾವತಿ ಪಡೆಯುವ ಐದು ವರ್ಷಗಳ ಹೋರಾಟವನ್ನು ಗೆದ್ದಿದ್ದಾರೆ. ಅದಲ್ಲದೇ ಅದೇ ರೀತಿಯ ಪರಿಸ್ಥಿತಿಯಲ್ಲಿದ್ದ ಸುಮಾರು 3 ಲಕ್ಷ ಜನರಿಗೆ ಈ ಪ್ರಕ್ರಿಯೆಯಲ್ಲಿ ಸಹಾಯ ಮಾಡಿದ್ದಾರೆ.

ಪ್ರಯಾಣಿಕರ ಗಮನಕ್ಕೆ; ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ರೈಲುಪ್ರಯಾಣಿಕರ ಗಮನಕ್ಕೆ; ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ರೈಲು

ಅಚ್ಚರಿ ಎನಿಸಿದರೂ ಇದೊಂದು ಪ್ರಕರಣದಿಂದ ಬರೋಬ್ಬರಿ 3 ಲಕ್ಷ ಜನರಿಗೆ ಸಹಾಯವಾಗಿದೆ. ಈ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇಡೀ ಪ್ರಕರಣದ ಹಿನ್ನೆಲೆ ಏನು?, 35 ರೂಪಾಯಿಗಾಗಿ 5 ವರ್ಷಗಳ ಹೋರಾಟದ ಅಗತ್ಯವಿತ್ತೇ?, 35 ರೂಪಾಯಿ ಗೆಲುವಿನಿಂದ 3 ಲಕ್ಷ ಜನರಿಗೆ ಸಹಾಯವಾಗಿದ್ದು ಹೇಗೆ ಎನ್ನುವುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಭಾರತೀಯ ರೈಲ್ವೆಯಿಂದ 2.98 ಲಕ್ಷ ರೂ. ಮರುಪಾವತಿ

ಭಾರತೀಯ ರೈಲ್ವೆಯಿಂದ 2.98 ಲಕ್ಷ ರೂ. ಮರುಪಾವತಿ

ಭಾರತೀಯ ರೈಲ್ವೆಯು ಬರೋಬ್ಬರಿ 2.98 ಲಕ್ಷ ಬಳಕೆದಾರರಿಗೆ ಒಟ್ಟು 2.43 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡುವುದಕ್ಕೆ ಅನುಮೋದನೆ ನೀಡಿದೆ ಎಂದು ಕೋಟಾ ಮೂಲದ ಎಂಜಿನಿಯರ್ ಸುಜೀತ್ ಸ್ವಾಮಿ ಆರ್‌ಟಿಐ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ. ಜಿಎಸ್‌ಟಿ ಜಾರಿಯಾಗುವ ಮುನ್ನ ತಮ್ಮ ಟಿಕೆಟ್ ರದ್ದುಗೊಳಿಸಿದ್ದರೂ ಸೇವಾ ತೆರಿಗೆಯಾಗಿ ವಿಧಿಸಲಾಗಿದ್ದ 35 ರೂಪಾಯಿಗಳನ್ನು ವಾಪಸ್ ಪಡೆಯುವ ಹೋರಾಟದಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಈ ಸಂಬಂಧ ಸುಮಾರು 50 ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗಳನ್ನು ಸಲ್ಲಿಸಿದ ಅವರು ನಾಲ್ಕು ಸರ್ಕಾರಿ ಇಲಾಖೆಗಳಿಗೆ ಪತ್ರಗಳನ್ನು ಬರೆದಿರುವುದಾಗಿ ಹೇಳಿದ್ದಾರೆ.

ಒಟ್ಟು 2.43 ಪ್ರಯಾಣಿಕರಿಗೆ 35 ರೂಪಾಯಿ ಮರುಪಾವತಿ

ಒಟ್ಟು 2.43 ಪ್ರಯಾಣಿಕರಿಗೆ 35 ರೂಪಾಯಿ ಮರುಪಾವತಿ

ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ತಮ್ಮ ಆರ್‌ಟಿಐ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ 2.98 ಲಕ್ಷ ಬಳಕೆದಾರರಿಗೆ ಹಣ ಮರುಪಾವತಿ ಬಗ್ಗೆ ಉಲ್ಲೇಖಿಸಿದೆ. ಅವರಲ್ಲಿ ಅನೇಕರು ಒಂದಕ್ಕಿಂತ ಹೆಚ್ಚು ಟಿಕೆಟ್‌ಗಳನ್ನು ಪಡೆದುಕೊಂಡಿದ್ದರೂ, ಪ್ರತಿ ಟಿಕೆಟ್‌ಗೆ 35 ರೂಪಾಯಿಯಂತೆ ಒಟ್ಟು 2.43 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡುತ್ತಾರೆ ಎಂದು ಸ್ವಾಮಿ ಹೇಳಿದ್ದಾರೆ. 2.98 ಲಕ್ಷ ಬಳಕೆದಾರರ 35 ರೂಪಾಯಿ ಹಣವನ್ನು ಮರುಪಾವತಿ ಅನುಮೋದಿಸುವಂತೆ ಪ್ರಧಾನ ಮಂತ್ರಿ, ರೈಲ್ವೆ ಸಚಿವರು, ಕೇಂದ್ರ ಸಚಿವ ಅನುರಾಗ್ ಠಾಕೂರ್, ಜಿಎಸ್‌ಟಿ ಕೌನ್ಸಿಲ್ ಮತ್ತು ಹಣಕಾಸು ಸಚಿವರು ಪ್ರಮುಖ ಪಾತ್ರ ವಹಿಸಿದ್ದು, ಮರುಪಾವತಿಗೆ ಒತ್ತಾಯಿಸಲು ನಾನು ಪದೇ ಪದೇ ಟ್ವೀಟ್ ಮಾಡಿದ್ದೇನೆ ಎಂದು ಸ್ವಾಮಿ ಪಿಟಿಐಗೆ ತಿಳಿಸಿದ್ದಾರೆ.

35 ರೂಪಾಯಿ ಮರುಪಾವತಿ ಪ್ರಕರಣದ ಹಿನ್ನೆಲೆ ಏನು?

35 ರೂಪಾಯಿ ಮರುಪಾವತಿ ಪ್ರಕರಣದ ಹಿನ್ನೆಲೆ ಏನು?

30 ವರ್ಷ ವಯಸ್ಸಿನ ಇಂಜಿನಿಯರ್ ಹೊಸ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ಒಂದು ದಿನದ ನಂತರ ಅಂದರೆ ಜುಲೈ 2ರಂದು ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡಿದ್ದರು. ಅದಕ್ಕಾಗಿ ಏಪ್ರಿಲ್ 2017ರಲ್ಲಿ ಗೋಲ್ಡನ್ ಟೆಂಪಲ್ ಮೇಲ್‌ನಲ್ಲಿ ತನ್ನ ನಗರದಿಂದ ನವದೆಹಲಿಗೆ ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದರು. ಆದಾಗ್ಯೂ, ಅವರು 765 ರೂ ಬೆಲೆಯ ಟಿಕೆಟ್ ಅನ್ನು ರದ್ದುಗೊಳಿಸಿದರು, ನಂತರ ಅವರು ರದ್ದುಗೊಳಿಸುವಿಕೆಗಾಗ 65 ರೂಪಾಯಿ ಬದಲಿಗೆ 100 ರೂಪಾಯಿ ಹಣವನ್ನು ಕಡಿತಗೊಳಿಸಲಾಗಿದ್ದು, ಬಾಕಿ ಉಳಿದ 665 ರೂಪಾಯಿ ಅನ್ನು ಮರುಪಾವತಿ ಮಾಡಲಾಗಿತ್ತು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಮುನ್ನ ಟಿಕೆಟ್ ರದ್ದುಗೊಳಿಸಿದ್ದರೂ ಹೆಚ್ಚುವರಿಯಾಗಿ 35 ರೂ.ಗಳನ್ನು ಸೇವಾ ತೆರಿಗೆಯಾಗಿ ವಿಧಿಸಲಾಗಿದೆ ಎನ್ನುವುದು ಸುಜೀತ್ ಸ್ವಾಮಿ ವಾದವಾಗಿತ್ತು. ಅಲ್ಲಿಂದ 35 ರೂಪಾಯಿ ಹೋರಾಟ ಶುರುವಾಯಿತು.

35 ರೂಪಾಯಿ ಮರುಪಾವತಿ ಹೋರಾಟದ ಪ್ರಕ್ರಿಯೆ

35 ರೂಪಾಯಿ ಮರುಪಾವತಿ ಹೋರಾಟದ ಪ್ರಕ್ರಿಯೆ

ರೈಲ್ವೇ ಮತ್ತು ಹಣಕಾಸು ಸಚಿವಾಲಯಕ್ಕೆ ಸ್ವತಃ ಸುಜೀತ್ ಸ್ವಾಮಿ RTI ಪ್ರಶ್ನೆಗಳನ್ನು ಕಳುಹಿಸುವ ಮೂಲಕ 35 ರೂಪಾಯಿಗಳ ಮರುಪಾವತಿಯನ್ನು ಪಡೆಯಲು ತಮ್ಮ ಹೋರಾಟವನ್ನು ಪ್ರಾರಂಭಿಸಿದರು. RTI ಉತ್ತರದ ಪ್ರಕಾರ, ಭಾರತೀಯ ರೈಲ್ವೇ ಸಚಿವಾಲಯದ ವಾಣಿಜ್ಯ ಸುತ್ತೋಲೆ ಸಂಖ್ಯೆ 43 ಅನ್ನು ಉಲ್ಲೇಖಿಸಿ, GST ಅನುಷ್ಠಾನದ ಮೊದಲು ಬುಕ್ ಮಾಡಿದ ಮತ್ತು ಅನುಷ್ಠಾನದ ನಂತರ ರದ್ದುಗೊಳಿಸಿದ ಟಿಕೆಟ್‌ಗಳಿಗೆ ಬುಕಿಂಗ್ ಸಮಯದಲ್ಲಿ ವಿಧಿಸಲಾದ ಸೇವಾ ತೆರಿಗೆಯನ್ನು ಮರುಪಾವತಿಸಲಾಗುವುದಿಲ್ಲ ಎಂದು ಹೇಳಿದೆ. ಆದರೆ, ರದ್ದುಗೊಳಿಸಲಾದ ಟಿಕೆಟ್‌ಗೆ ಗುಪ್ತ ಶುಲ್ಕವಾಗಿ 65 ರೂ. ಸೇವಾ ತೆರಿಗೆಯಾಗಿ 35 ರೂ. ಸೇರಿದಂತೆ ಒಟ್ಟು 100 ರೂಪಾಯಿ ವಿಧಿಸಲಾಗಿದೆ ಎಂದು ಅದು ಹೇಳಿತ್ತು.

ಸುದೀರ್ಘ ಹೋರಾಟದಿಂದ ಸಿಕ್ಕ ಫಲವೇ 2 ರೂ.

ಸುದೀರ್ಘ ಹೋರಾಟದಿಂದ ಸಿಕ್ಕ ಫಲವೇ 2 ರೂ.

ಕಳೆದ ಜುಲೈ 1, 2017ರ ಮೊದಲು ಬುಕ್ ಮಾಡಲಾದ ಮತ್ತು ರದ್ದುಗೊಳಿಸಲಾದ ಟಿಕೆಟ್‌ಗಳಿಗೆ ಬುಕಿಂಗ್ ಸಮಯದಲ್ಲಿ ವಿಧಿಸಲಾದ ಸೇವಾ ತೆರಿಗೆಯ ಒಟ್ಟು ಮೊತ್ತವನ್ನು ಮರುಪಾವತಿಸಲಾಗುತ್ತದೆ ಎಂದು ನಂತರ ನಿರ್ಧರಿಸಲಾಯಿತು ಎಂದು ಆರ್‌ಟಿಐ ಉತ್ತರ ತಿಳಿಸಿರುವ ಬಗ್ಗೆ ಸ್ವಾಮಿ ಹೇಳಿದರು. "ಆದ್ದರಿಂದ, 35 ರೂ ಮೊತ್ತವನ್ನು ಮರುಪಾವತಿಸಲಾಗುವುದು" ಎಂದು ಆರ್‌ಟಿಐ ಪ್ರಶ್ನೆಗೆ ಐಆರ್‌ಸಿಟಿಸಿ ಉತ್ತರ ನೀಡಿತ್ತು. "ಆದಾಗ್ಯೂ, ನಾನು ಮೇ 1, 2019ರಂದು ನನ್ನ ಬ್ಯಾಂಕ್ ಖಾತೆಯಲ್ಲಿ 33 ರೂಪಾಯಿ ಅನ್ನು ಸ್ವೀಕರಿಸಿದೆ. 35 ರೂಪಾಯಿ ಸೇವಾ ತೆರಿಗೆಯ ರೌಂಡ್ಡ್ ಆಫ್ ಮೌಲ್ಯದಂತೆ 2 ರೂಪಾಯಿ ಕಡಿತಗೊಳಿಸಲಾಗಿತ್ತು," ಎಂದು ಸ್ವಾಮಿ ಹೇಳಿದರು. ತದನಂತರ 2 ರೂಪಾಯಿ ಮರಳಿ ಪಡೆಯಲು ಮುಂದಿನ ಮೂರು ವರ್ಷಗಳ ಕಾಲ ಸ್ವಾಮಿ ತಮ್ಮ ಹೋರಾಟ ಮುಂದುವರೆಸಿದರು, ಅದು ಅಂತಿಮವಾಗಿ ಕಳೆದ ಶುಕ್ರವಾರ ಫಲ ನೀಡಿತು.

ಸ್ವಾಮಿ ಪ್ರಕಾರ, ಹಿರಿಯ ಐಆರ್‌ಸಿಟಿಸಿ ಅಧಿಕಾರಿಯೊಬ್ಬರು "ರೈಲ್ವೆ ಮಂಡಳಿಯು ಎಲ್ಲಾ ಬಳಕೆದಾರರಿಗೆ (2.98 ಲಕ್ಷಗಳು) ಮರುಪಾವತಿಯನ್ನು (ರೂ. 35) ಅನುಮೋದಿಸಿದೆ, ಏಕೆಂದರೆ ಮರುಪಾವತಿಯನ್ನು ಠೇವಣಿ ಮಾಡುವ ಪ್ರಕ್ರಿಯೆಯು ನಡೆಯುತ್ತಿದೆ ಮತ್ತು ಎಲ್ಲಾ ಪ್ರಯಾಣಿಕರು ಕ್ರಮೇಣ ತಮ್ಮ ಮರುಪಾವತಿಯನ್ನು ಸ್ವೀಕರಿಸುತ್ತಾರೆ. ತರುವಾಯ, ಅದೇ ದಿನ, ಬ್ಯಾಂಕ್ ಖಾತೆಯ ಪರಿಶೀಲನೆಯನ್ನು ಕೋರಿದ ರೂ. 2 ಮರುಪಾವತಿಗೆ ಸಂಬಂಧಿಸಿದಂತೆ IRCTC ಯಿಂದ ನನಗೆ ಮೇಲ್ ಬಂದಿದೆ," ಎಂದು ಅವರು ಹೇಳಿದರು.

English summary
After 5-year fight A man gets 35 rupees refund from indian Railways. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X