ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

25 ವರ್ಷಗಳ ನಂತರ ಸಿಕ್ಕಿಂಗೆ ಸಿಕ್ಕಿದ ಹೊಸ ಸಿಎಂ; ವಾರದಲ್ಲಿ ಎರಡು ರಜಾ ಮೊದಲ ಘೋಷಣೆ

|
Google Oneindia Kannada News

ಇಪ್ಪತ್ತೈದು ವರ್ಷಗಳ ನಂತರ ಸಿಕ್ಕಿಂಗೆ ಮುಖ್ಯಮಂತ್ರಿ ಬದಲಾಗಿದ್ದಾರೆ. ಪ್ರೇಮ್ ಸಿಂಗ್ ತಮಾಂಗ್ ರನ್ನು ಪಿ.ಎಸ್.ಗೋಲೆ ಅಂತಲೂ ಕರೆಯುತ್ತಾರೆ. ಅವರು ಸಿಕ್ಕಿಂನ ಆರನೇ ಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ರಾಜಧಾನಿ ಗ್ಯಾಂಗ್ಟಕ್ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಗಂಗಾಪ್ರಸಾದ್ ಪ್ರಮಾಣ ವಚನ ಬೋಧಿಸಿದರು.

ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಕಳೆದ ಇಪ್ಪತ್ತೈದು ವರ್ಷದಿಂದ ಸಿಕ್ಕಿಂನಲ್ಲಿ ಜಯ ಗಳಿಸುತ್ತಿತ್ತು. ಪವನ್ ಚಾಮ್ಲಿಂಗ್ ಇಪ್ಪತ್ತೈದು ವರ್ಷದಿಂದ ಮುಖ್ಯಮಂತ್ರಿ ಆಗಿದ್ದರು. ಆ ಮೂಲಕ ಭಾರತದ ಯಾವುದೇ ರಾಜ್ಯದಲ್ಲಿ ಆತಿ ದೀರ್ಘಾವಧಿಗೆ, ಅಂದರೆ 8,932 ದಿನ ಅಧಿಕಾರದಲ್ಲಿ ಇದ್ದರು.

'ಸಿಕ್ಕಿಂ ಜನರ ಸರಾಸರಿ ಆಯುಷ್ಯ 100 ವರ್ಷ ತಲುಪಿಸಲು ಸರಕಾರ ಚಿಂತನೆ' 'ಸಿಕ್ಕಿಂ ಜನರ ಸರಾಸರಿ ಆಯುಷ್ಯ 100 ವರ್ಷ ತಲುಪಿಸಲು ಸರಕಾರ ಚಿಂತನೆ'

ಪ್ರೇಮ್ ಸಿಂಗ್ ಅಧಿಕಾರ ಸ್ವೀಕರಿಸಿದ ತಕ್ಷಣ ಸಿಕ್ಕಿನ ರಾಜ್ಯ ಸರಕಾರಿ ನೌಕರರಿಗೆ ವಾರಕ್ಕೆ ಐದು ದಿನಗಳ ಕೆಲಸ ಹಾಗೂ ಎರಡು ದಿನ (ಶನಿವಾರ ಹಾಗೂ ಭಾನುವಾರ) ರಜಾ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಪ್ರತಿ ತಿಂಗಳ ಎರಡನೇ ಶನಿವಾರ ಮಾತ್ರ ಸರಕಾರಿ ನೌಕರರಿಗೆ ರಜಾ ಇರುತ್ತಿತ್ತು.

After 25 years new CM to Sikkim, Prem Singh Tamang

ಮುಖ್ಯಮಂತ್ರಿಯೂ ಸೇರಿದ ಹಾಗೆ ಯಾರೂ ದುಬಾರಿ ವಾಹನದಲ್ಲಿ ಪ್ರಯಾಣ ಮಾಡುವುದಿಲ್ಲ. ಕೆಂಪು ದೀಪದ ಕಾರು ಬಳಸುವುದಿಲ್ಲ ಎಂದು ಹೊಸ ಮುಖ್ಯಮಂತ್ರಿ ಹೇಳಿದ್ದಾರೆ. ಮುಖ್ಯಮಂತ್ರಿ ಹೊರತುಪಡಿಸಿ ಹನ್ನೊಂದು ಸದಸ್ಯರು ಸಂಪುಟದಲ್ಲಿ ಇದ್ದಾರೆ. ಉದ್ಯೋಗ ಸೃಷ್ಟಿ, ಆರೋಗ್ಯ ವಲಯ, ಮೂಲಸೌಕರ್ಯ ಅಭಿವೃದ್ಧಿ ನಮ್ಮ ಸರಕಾರದ ಆದ್ಯತೆ ಎಂದು ಸಿಎಂ ತಿಳಿಸಿದ್ದಾರೆ.

ಮೇ 30ರ ಗುರುವಾರ ರಾತ್ರಿ 7ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ ವಚನಮೇ 30ರ ಗುರುವಾರ ರಾತ್ರಿ 7ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ

ಸಿಕ್ಕಿಂ ಕ್ರಾಂತಿ ಮೋರ್ಚಾ (ಎಸ್ ಕೆಎಂ) ಅಧ್ಯಕ್ಷರಾದ ಗೋಲೆ ಇನ್ನು ಆರು ತಿಂಗಳ ಒಳಗೆ ಎಂಎಲ್ ಎ ಆಗಿ ಆಯ್ಕೆ ಆದರಷ್ಟೇ ಮುಖ್ಯಮಂತ್ರಿ ಆಗಿ ಮುಂದುವರಿಯಲು ಸಾಧ್ಯ. ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಹಣಕಾಸು ದುರುಪಯೋಗ ಆರೋಪದಡಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಆಗಿತ್ತು. 1994 ಮತ್ತು 1999ರ ಆ ವೇಳೆ ಅವರು ಪವನ್ ಚಾಮ್ಲಿಂಗ್ ಸರಕಾರದಲ್ಲಿ ಮಂತ್ರಿ ಆಗಿದ್ದರು.

ಒಟ್ಟು 32 ಸದಸ್ಯ ಬಲದ ಸಿಕ್ಕಿಂ ವಿಧಾನ ಸಭೆಯಲ್ಲಿ ಎಸ್ ಕೆಎಂ 17 ಸ್ಥಾನ ಗಳಿಸಿದ್ದರೆ, ಎಸ್ ಡಿಎಫ್ 15 ಸ್ಥಾನದಲ್ಲಿ ಜಯಿಸಿದೆ.

English summary
After 25 years new CM to Sikkim, Prem Singh Tamang become 6th CM of Sikkim. Sikkim Democratic Front and Pawan Chamling continuously won for 25 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X