ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ ಭೂಕಂಪ: ಸಾವಿರ ದಾಟಿದ ಸಾವಿನ ಸಂಖ್ಯೆ

|
Google Oneindia Kannada News

ಕಾಬೂಲ್, ಜೂನ್ 22: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳಲ್ಲಿ ಇಂದು ಬುಧವಾರ ಬೆಳಗ್ಗೆ (ಮಂಗಳವಾರ ರಾತ್ರಿ 2:24ಕ್ಕೆ) ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮಡಿದವರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಕೆಲ ವರದಿಗಳ ಪ್ರಕಾರ ಸಾವಿನ ಸಂಖ್ಯೆ ಒಂದು ಸಾವಿರ ಗಡಿ ದಾಟಿದೆ.

ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿರುವ ಭೂಕಂಪದಲ್ಲಿ 600ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಅಫ್ಘಾನಿಸ್ತಾನದ ಗುಡ್ಡಗಾಡು ಪ್ರದೇಶಗಳ ತೀವ್ರ ಬಾಧಿತವಾಗಿದ್ದು ಸಾವು ನೋವಿನ ಹೊಸ ಹೊಸ ವರದಿಗಳು ಬರುತ್ತಲೇ ಇವೆ. ಇದು ಕಳೆದ ಎರಡು ದಶಕದಲ್ಲೇ ಅಫ್ಘಾನಿಸ್ತಾನ ದೇಶದಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪ ಎನಿಸಿದೆ. ಸಾವಿನ ಸಂಖ್ಯೆ ದೃಷ್ಟಿಯಲ್ಲಿ ಭೂಕಂಪ ಹೆಚ್ಚು ಘೋರವಾಗಿದೆ.

ಅಫ್ಘಾನಿಸ್ತಾನದಲ್ಲಿ ಭೂಕಂಪ, 130 ಜನರ ಸಾವುಅಫ್ಘಾನಿಸ್ತಾನದಲ್ಲಿ ಭೂಕಂಪ, 130 ಜನರ ಸಾವು

ಪಕ್ಟಿಕಾ ಪ್ರಾಂತ್ಯದಲ್ಲಿ ಹೆಚ್ಚು ಸಾವು
ಅಫ್ಘಾನಿಸ್ತಾದ ಪಕ್ಟಿಕಾ ಪ್ರಾಂತ್ಯದಲ್ಲಿ ಹೆಚ್ಚು ಸಾವುಗಳಾಗಿರುವುದು ತಿಳಿದುಬಂದಿದೆ. ಇಲ್ಲಿ ನೂರಾರು ಮಂದಿ ಭೂಕಂಪಕ್ಕೆ ಬಲಿಯಾಗಿದ್ದಾರೆ. ಖೋಸ್ತ್, ನಂಗಾರ್‌ಹಾರ್ ಪ್ರಾಂತ್ಯಗಳಲ್ಲೂ ಸಾಕಷ್ಟು ಸಾವುಗಳಾಗಿವೆ ಎನ್ನಲಾಗಿದೆ.

Afghanistan, Pakistan Earthquake: Death toll Crosses Thousand

ಪಕ್ಟಿಕಾ ಪ್ರಾಂತ್ಯದಲ್ಲಿ ಸಾವು ನೋವಾದ ಜನರನ್ನು ಬೇರೆ ಸ್ಥಳಗಳಿಗೆ ಹೆಲಿಕಾಪ್ಟರ್‌ನಲ್ಲಿ ಸಾಗಿಸುತ್ತಿರುವ ದೃಶ್ಯಗಳಿರುವ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಕ್ಕಿವೆ. ನೂರಾರು ಮನೆಗಳು ಉರುಳಿಬಿದ್ದಿರುವ ದೃಶ್ಯದ ವಿಡಿಯೋ ಮತ್ತು ಫೋಟೋಗಳು ಇಂಟರ್ನೆಟ್‌ನಲ್ಲಿವೆ.

ತೈವಾನ್‌ನಲ್ಲಿ ಪ್ರಬಲ ಭೂಕಂಪತೈವಾನ್‌ನಲ್ಲಿ ಪ್ರಬಲ ಭೂಕಂಪ

ಭೂಕಂಪ ಎಲ್ಲೆಲ್ಲಿ?
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿರುವ ಖೋಸ್ತ್ ನಗರದಿಂದ 44 ಕಿಮೀ ದೂರದಲ್ಲಿ ಮತ್ತು ನೆಲದಿಂದ 51 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಇದ್ದದ್ದು ಗೊತ್ತಾಗಿದೆ. ಪಾಕಿಸ್ತಾನದ ಗಡಿಭಾಗದ ಬಳಿಯೇ ಭೂಕಂಪವಾದ ಹಿನ್ನೆಲೆಯಲ್ಲಿ ಆ ದೇಶದ ಹಲವೆಡೆ ಕಂಪನಗಳಾಗಿವೆ.

ಪಾಕಿಸ್ತಾನದ ಪಂಜಾಬ್ ಮತ್ತು ಖೈಬರ್ ಪಖ್ತುಂಕ್ವ ಪ್ರಾಂತ್ಯಗಳಲ್ಲಿ ದೊಡ್ಡ ಕಂಪನವಾಗಿದೆ. ಬಲೂಚಿಸ್ತಾನದಲ್ಲಿ 5.2 ತೀವ್ರತೆಯ ಭೂಕಂಪ ದಾಖಲಾಗಿದೆ. ಇಸ್ಲಾಮಾಬಾದ್, ಮುಲ್ತಾನ್, ಭಕರ್, ಫಾಲಿಯಾ, ಪೇಶಾವರ, ಮಲಕಂದ್, ಸ್ವಾತ್, ಮಿಯಾನ್‌ವಲಿ, ಪಕಪಟ್ಟಣ್, ಬುನೇರ್, ಲಾಹೋರ್, ಕ್ವೆಟ್ಟಾ, ಫೈಸಲಾಬಾದ್, ಅಬೋಟಾಬಾದ್, ಕೋಹತ್ ಮೊದಲಾದ ಪ್ರದೇಶಗಳಲ್ಲಿ ಕಂಪನಗಳಾಗಿವೆ. ಮಲೇಷ್ಯಾ ದೇಶದಲ್ಲಿ 5.1 ತೀವ್ರತೆಯ ಕಂಪನ ದಾಖಲಾಗಿದೆ.

Afghanistan, Pakistan Earthquake: Death toll Crosses Thousand

ಭಾರತದ ಜಮ್ಮು ಮತ್ತು ಕಾಶ್ಮೀರ ಮೊದಲಾದ ಕೆಲವೆಡೆ ಕಂಪನದ ಅನುಭವ ಆಗಿದೆ. ಆದರೆ, ಅಲ್ಪ ಮಟ್ಟದ ಕಂಪನವಾದ್ದರಿಂದ ಎಲ್ಲಿಯೂ ಸಾವು ನೋವಾಗಿಲ್ಲ.

ತಾಲಿಬಾನ್ ಸರಕಾರದ ಮನವಿ:
ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಅಫ್ಘಾನಿಸ್ತಾನಕ್ಕೆ ಅಂತಾರಾಷ್ಟ್ರೀಯ ನೆರವು ನಿಂತುಹೋಗಿದೆ. ಆರ್ಥಿಕವಾಗಿ ಈ ದೇಶ ಜರ್ಝರಿತವಾಗಿದೆ. ಇಂಥ ಹೊತ್ತಿನಲ್ಲೇ ಭೂಕಂಪ ಸಂಭವಿಸಿ ಅಫ್ಘಾನಿಸ್ತಾನ್ ತತ್ತರಿಸಿದೆ. ತಾಲಿಬಾನ್ ಸರಕಾರದ ಉಪ ವಕ್ತಾರ ಬಿಲಾಲ್ ಕರಿಮಿ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Earthquake with intensity of 6.1 hit Afghanistan and Pakistan on Wednesday morning causing the death of more than 1000 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X