• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನ್ ಕೀ ಬಾತ್: ರಶೀದ್ ಖಾನ್, ಸ್ಕೈಡೈವರ್ ಗಳಿಗೆ ಪ್ರಧಾನಿ ಮೆಚ್ಚುಗೆ

By Sachhidananda Acharya
|

ನವದೆಹಲಿ, ಜೂನ್ 24: ತಮ್ಮ ಪಾಕ್ಷಿಕ ಬಾನುಲಿ ಭಾಷಣ 'ಮನ್ ಕೀ ಬಾತ್'ನ 45ನೇ ಕಾರ್ಯಕ್ರಮದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್ ಮತ್ತು ಆಕಾಶದಲ್ಲಿ ಯೋಗ ಮಾಡಿದ ಐಎಎಫ್ ಸ್ಕೈಡೈವರ್ ಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

"ಬೌಲರ್ ರಶೀದ್ ಖಾನ್ ಈ ವರ್ಷದ ಆರಂಭದಲ್ಲಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರು," ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿಯವರ ಟ್ಟೀಟನ್ನು ಉಲ್ಲೇಖಿಸಿದರು. ಅಫ್ಘಾನಿಸ್ತಾನಿಯರು ತಮ್ಮ ಹೀರೋ ರಶೀದ್ ಖಾನ್ ಬಗ್ಗೆ ತುಂಬಾ ಹೆಮ್ಮೆ ಹೊಂದಿದ್ದಾರೆ ಎಂದರು.

ಮೋದಿ ಬಾಯಲ್ಲಿ ಉಲಿದ ಆ ಹೆಸರು, ಕೊಳಗೇರಿ ಮಕ್ಕಳ ಬದುಕಿನ ಬೆಳಕು!

ಅಫ್ಘಾನಿಸ್ತಾನ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಿದ್ದನ್ನೂ ಪ್ರಧಾನಿ ಇದೇ ವೇಳೆ ಸ್ಮರಿಸಿದರು. ಟ್ರೋಫಿ ಸ್ವೀಕರಿಸುವ ವೇಳೆ ಅಫ್ಘಾನಿಸ್ತಾನದ ಆಟಗಾರರನ್ನೂ ಫೋಟೋಗೆ ಕರೆಯುವ ಮೂಲಕ ಭಾರತದ ತಂಡ ಇಡೀ ಜಗತ್ತಿಗೆ ಮಾದರಿ ಕೆಲಸ ಮಾಡಿದೆ ಎಂದು ಪ್ರಧಾನಿ ಶ್ಲಾಘಿಸಿದರು.

"ಈ ಘಟನೆಯು ಕ್ರೀಡೆಗಳ ಉತ್ಸಾಹವನ್ನು ವಿವರಿಸುತ್ತದೆ. ಸಮಾಜವನ್ನು ಒಟ್ಟುಗೂಡಿಸಲು ಮತ್ತು ನಮ್ಮ ಯೌವನದ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ಕ್ರೀಡೆಗಳು ಅತ್ಯುತ್ತಮ ಮಾರ್ಗವಾಗಿದೆ. ಭವಿಷ್ಯದಲ್ಲಿ ಕೂಡಾ ನಾವು ಅತ್ಯುತ್ತಮ ಕ್ರೀಡಾ ಸ್ಪೂರ್ಥಿಯೊಂದಿಗೆ ಪರಸ್ಪರ ಆಡುತ್ತೇವೆ ಮತ್ತು ಒಟ್ಟಿಗೆ ಸಾಧನೆ ಮಾಡುತ್ತೇವೆ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ," ಎಂದು ಪ್ರಧಾನಿ ಹೇಳಿದರು.

ತಮ್ಮ ಮಾತಿನ ನಡುವೆ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನವನ್ನೂ ಪ್ರಧಾನಿ ಸ್ಮರಿಸಿದರು.

ಆಕಾಶದಲ್ಲಿ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ ವಾಯುಸೇನೆಯ ಸ್ಕೈ ಡೈವರ್ ಗಳನ್ನು ಹೊಗಳಿದ ಮೋದಿ, "ಆಕಾಶದ ಮಧ್ಯದಲ್ಲಿ ಭೂಮಿಯಿಂದ ಸುಮಾರು 15,000 ಅಡಿ ಎತ್ತರದಲ್ಲಿ ಯೋಗಾಸನವನ್ನು ಪ್ರದರ್ಶಿಸುವ ಮೂಲಕ ಎಲ್ಲರಿಗೂ ದಿಗ್ಭ್ರಮೆ ಮೂಡಿಸಿದರು," ಎಂದರು.

ಅದ್ಭುತ ಏನೆಂದರೆ ಅವರು ಇಷ್ಟು ಎತ್ತರದಲ್ಲಿ ಇದನ್ನು ವಿಮಾನದ ಒಳಗೆ ಪ್ರದರ್ಶನ ಮಾಡಲಿಲ್ಲ, ಬದಲಿಗೆ ಗಾಳಿಯಲ್ಲಿ ತೇಲುತ್ತಾ ಯೋಗದ ಭಂಗಿಗಳನ್ನು ಪ್ರದರ್ಶಿಸಿದರು ಎಂಬುದಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.

English summary
Afghan bowler Rashid Khan and air force skydivers who performed yoga mid-air, today came in for praise by Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X