ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡಳಿತಾಧಿಕಾರಿ ಲಕ್ಷದ್ವೀಪ ಸಂಸ್ಕೃತಿ ಅರಿಯುವ ಕೆಲಸ ಎಂದಿಗೂ ಮಾಡಿಲ್ಲ: ಸಂಸದ

|
Google Oneindia Kannada News

ನವದೆಹಲಿ, ಮೇ 31: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡೆ ಪಟೇಲ್ ಎಂದಿಗೂ ಲಲಕ್ಷದ್ವೀಪದ ಸಂಸ್ಕೃತಿಯನ್ನು ಅರಿಯುವ ಕೆಲಸ ಎಂದಿಗೂ ಮಾಡಲೇ ಇಲ್ಲ ಎಂದು ಸಂಸದ ಮೊಹಮ್ಮದ್ ಫೈಜಲ್ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಲಕ್ಷದ್ವೀಪದ ಆಡಳಿತಾಧಿಕಾರಿಕಳೆದ ಐದು ತಿಂಗಳಿನಿಂದ 15-20 ದಿನವಷ್ಟೇ ಅಲ್ಲಿಗೆ ಭೇಟಿ ನೀಡಿದ್ದಾರೆ, ಸ್ಥಳೀಯ ಪರಿಸರ ಸಂಸ್ಕೃತಿಯನ್ನು ಅರಿಯುವ ಕೆಲಸ ಮಾಡಲೇ ಇಲ್ಲ.
ಆಡಳಿತಾಧಿಕಾರಿ ಸ್ಥಾನದಿಂದ ಪ್ರಫುಲ್ ಪಟೇಲ್ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿರುವ ಎನ್‌ಸಿಪಿ ಮುಖಂಡರೂ ಆದ ಫೈಜಲ್, ಕರಡು ಮಸೂದೆಗಳಿಗೆ ಎಲ್ಲಾ ಕ್ಷೇತ್ರಗಳಿಂದ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಬಿಜೆಪಿ ಮುಖಂಡರೂ ಅವರ ವಿರುದ್ಧ ಇದ್ದಾರೆ ಎಂದರು.

ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಉಚ್ಚಾಟನೆಗೆ ಕೇರಳ ವಿಧಾನಸಭೆ ನಿರ್ಣಯಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಉಚ್ಚಾಟನೆಗೆ ಕೇರಳ ವಿಧಾನಸಭೆ ನಿರ್ಣಯ

ಸ್ಥಳೀಯರು ಮತ್ತು ಮುಖಂಡರ ಅಭಿಪ್ರಾಯವನ್ನು ಪಡೆಯದೇ ಪಟೇಲ್ ಅವರು ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದ ಅವರು, ದಿನೇಶ್ವರ ಶರ್ಮಾ ಅವರ ನಿಧನದ ಬಳಿಕ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪಟೇಲ್ ಅವರಿಗೆ ಆಡಳಿತಾಧಿಕಾರಿ ಜವಾಬ್ದಾರಿ ನೀಡಲಾಗಿತ್ತು.

Administrator Never Tried To Understand Islanders Culture: Lakshadweep MP

ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಲಕ್ಷದ್ವೀಪ ಅಭಿವೃದ್ಧಿ ನಿಯಂತ್ರಣ ಪ್ರಾಧಿಕಾರ ಮತ್ತು ಲಕ್ಷದ್ವೀಪ ಸಮಾಜವಿರೋಧಿ ಚಟುವಟಿಕೆ ನಿಯಂತ್ರಣ ಕಾಯ್ದೆ ಕುರಿತಂತೆ ಸ್ಥಳೀಯವಾಗ ನಿವಾಸಿಗಳಲ್ಲಿಆತಂಕ ವ್ಯಕ್ತವಾಗಿದೆ ಎಂದರು.

ವಿವಾದಕ್ಕೆ ಕಾರಣವಾದ ಅಂಶಗಳು
-ಮುಸ್ಲಿಂ ಸಮುದಾಯ ಅಧಿಕವಾಗಿರುವ ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಜಾರಿಗೆ ತಂದಿರುವ ನೀತಿ ವಿವಾದಕ್ಕೆ ಕಾರಣವಾಗಿದೆ
-ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಗೋ ಮಾಂಸ ಮಾರಾಟ ನಿಷೇಧ
-ಅಪರಾಧ ಪ್ರಕರಣ ಕಡಿಮೆ ಇರುವ ದ್ವೀಪದಲ್ಲಿ ಗೂಂಡಾ ಕಾಯ್ದೆ ಜಾರಿ
-ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪಂಚಾಯತ್ ಆಕಾಂಕ್ಷಿಗಳಿಗೆ ಅನರ್ಹಗೊಳಿಸಬೇಕು
-ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಭೂಮಿ ವಶಪಡಿಸಿಕೊಳ್ಳಲು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ
-ಲಕ್ಷದ್ವೀಪಾಭಿವೃದ್ಧಿ ಪ್ರಾಧಿಕಾರ 2021 ರಚನೆ
-ಲಕ್ಷದ್ವೀಪದಲ್ಲಿ ಮದ್ಯ ಮಾರಾಟ ನಿಷೇಧ ತೆರವು
-ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧ.

English summary
Administrator Praful Patel has been to Lakshadweep for just 15-20 days in the past five months, and cared little to understand the islanders' culture and ecology, its MP Mohammed Faizal said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X