ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿಗೆ ಪತ್ರ ಬರೆದು ಕ್ಷಮೆ ಕೋರಿದ ಅಧೀರ್ ರಂಜನ್ ಚೌಧರಿ

|
Google Oneindia Kannada News

ನವದೆಹಲಿ,ಜುಲೈ. 29: ಹೊಸದಾಗಿ ಚುನಾಯಿತರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು "ರಾಷ್ಟ್ರಪತ್ನಿ" ಎಂದು ಕರೆಯುವ ಮೂಲಕ ವಿವಾದವನ್ನು ಎಬ್ಬಿಸಿದ್ದ ಕಾಂಗ್ರೆಸ್ ಲೋಕಸಭಾ ಸಂಸದ ಅಧೀರ್ ರಂಜನ್ ಚೌಧರಿ ಅವರು ಶುಕ್ರವಾರ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.

ನೀವು ಹೊಂದಿರುವ ಸ್ಥಾನವನ್ನು ವಿವರಿಸಲು ತಪ್ಪು ಪದವನ್ನು ಬಳಸಿದ್ದಕ್ಕಾಗಿ ನನ್ನ ವಿಷಾದವನ್ನು ವ್ಯಕ್ತಪಡಿಸಲು ನಾನು ಪತ್ರ ಬರೆಯುತ್ತಿದ್ದೇನೆ. ಇದು ನಾಲಿಗೆ ಹೊರಳಿದ್ದರಿಂದ ಬಂದ ಹೇಳಿಕೆಯಾಗಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಈ ಪತ್ರವನ್ನು ತಾವು ಸ್ವೀಕರಿಸಲು ವಿನಂತಿಸುತ್ತೇನೆ ಎಂದು ಕಾಂಗ್ರೆಸ್ ಲೋಕಸಭಾ ಸಂಸದ ಅಧೀರ್ ರಂಜನ್ ಚೌಧರಿ ಬರೆದಿದ್ದಾರೆ.

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾದ ಚೌಧರಿ ಅವರು ಬುಧವಾರ ಟಿವಿ ಸಂದರ್ಶನವೊಂದರಲ್ಲಿ ಭಾರತದ ಮೊದಲ ಬುಡಕಟ್ಟು ಮತ್ತು ಎರಡನೇ ಮಹಿಳಾ ರಾಷ್ಟ್ರಪತಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಕರೆದಿದ್ದರು. ಇದು ಸಂಸತ್ತಿನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.

ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಮತ್ತು ಪಿಯೂಷ್ ಗೋಯಲ್ ಅವರು ಸಂಸದೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮ ಸಂಸದರ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಸೋನಿಯಾ ಅವರು ಚೌಧರಿ ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ ಎಂದು ಸೋನಿಯಾ ಗಾಂಧಿ ಹೇಳಿದ್ದರು.

Adhir Ranjan Chaudhary Writes Apology Letter to the President

ಸಂಸತ್ತಿನ ನಡೆಯುತ್ತಿರುವ ಮುಂಗಾರು ಅಧಿವೇಶನವು 'ರಾಷ್ಟ್ರಪತ್ನಿ' ಹೇಳಿಕೆಯಿಂದ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕೋಲಾಹಲ ಸೃಷ್ಟಿಸಿ ಸದನದ ಮುಂದೂಡಿಕೆಗೆ ಸಾಕ್ಷಿಯಾಗಿತ್ತು. ವಿವಾದಕ್ಕೆ ಸ್ಪಷ್ಟೀಕರಣವನ್ನು ನೀಡುತ್ತಾ ಚೌಧರಿ ಅವರು, ತಪ್ಪಾಗಿ ಹೇಳಿಕೆಯನ್ನು ಬಳಸಲಾಗಿದೆ. ರಾಷ್ಟ್ರಪತಿ ಮುರ್ಮು ಅವರಿಗೆ ಯಾವುದೇ ಅಗೌರವವನ್ನು ಉದ್ದೇಶ ಇದರಲ್ಲಿ ಇಲ್ಲ ಎಂದು ಹೇಳಿದರು.

ನಾನು ಅಚಾತುರ್ಯದಿಂದ 'ರಾಷ್ಟ್ರಪತ್ನಿ' ಎಂಬ ಪದವನ್ನು ಒಂದೇ ಬಾರಿ ಬಳಸಿದ್ದೇನೆ. ಅದು ನಾಲಿಗೆಯ ಸ್ಲಿಪ್ ಆಗಿತ್ತು. ನಾನು ಅಧ್ಯಕ್ಷರಿಗೆ ಯಾವತ್ತೂ ಅಗೌರವ ತೋರಿಲ್ಲ ಎಂದು ಚೌಧರಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದರು. ನಾನು ಏನು ಮಾಡಲಿ? ಆದರೆ ನಾನು ಅದನ್ನು ಹೇಳಿದೆ. ನಾನು ಆ ತಪ್ಪು ಪದವನ್ನು ಉಚ್ಚರಿಸಿದ್ದೇನೆ ಎಂದು ಅರಿತುಕೊಂಡಿದ್ದೇನೆ ಎಂದರು.

ನಾನು ಯಾರಿಗೆ ಇದನ್ನು ಹೇಳಿದ್ದೇನೆ ಎಂಬ ಬಗ್ಗೆ ಮಾಧ್ಯಮದ ವ್ಯಕ್ತಿಗಳನ್ನು ಕೇಳಿದೆ. ಆದಾಗ್ಯೂ, ನಾನು ಅವರನ್ನು ಹುಡುಕಲು ಸಾಧ್ಯವಾಗಲಿಲ್ಲ. ಕೆಲವು ಆಡಳಿತ ಪಕ್ಷದ ಸದಸ್ಯರು ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಂಜನ್ ಹೇಳಿದರು.

English summary
Congress Lok Sabha MP Adhir Ranjan Choudhary, who sparked controversy by calling the newly-elected President Draupadi Murmu a "countrywoman", has written an apology on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X