ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನದಲ್ಲಿ ಮೋದಿ, ಕರೀನಾ, ಸೂಪರ್ ಮ್ಯಾನ್ ಫೈಟ್

By Mahesh
|
Google Oneindia Kannada News

ಬೆಂಗಳೂರು, ಜ.10: ದೇಶದ ಹಲವೆಡೆ ಜನತೆ ಆಗಸದತ್ತ ಮುಖಮಾಡಿ ನೋಡುತ್ತಿರುತ್ತಾರೆ. ನರೇಂದ್ರ ಮೋದಿ, ಸೂಪರ್ ಮ್ಯಾನ್, ಕರೀನಾ ಕಪೂರ್, ಬಣ್ಣ ಬಣ್ಣದ ಚಿಟ್ಟೆ ಹೀಗೆ ವೈವಿಧ್ಯಮಯ ಗಾಳಿಪಟಗಳು ಹಾರಾಟ ನಡೆಸುತ್ತಿರುತ್ತವೆ. ಗಾಳಿಪಟ ಉತ್ಸವ ದೇಶದ ಹಲವೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಗುಜರಾತಿನಲ್ಲಿ 26ನೇ ವಾರ್ಷಿಕ ಅಂತಾರಾಷ್ಟ್ರೀಯ ಗಾಳಿಪಟ ಹಬ್ಬ ಜನವರಿ 7 ರಿಂದ ಜನವರಿ 14 ರವರೆಗೂ ವಿವಿಧ ಸ್ಥಳಗಳಲ್ಲಿ ಗಾಳಿಪಟ ಹಾರಿಸುವ ಹಬ್ಬ ಆಯೋಜನೆಗೊಂಡಿದೆ.ದೆಹಲಿ, ಮುಂಬೈ ಹಾಗೂ ಅಹಮದಾಬಾದಿನಲ್ಲಿ ಈ ಹಬ್ಬ ಆಚರಣೆಯಾಗಿದೆ. ಫ್ರಾನ್ಸ್, ರಷ್ಯಾ, ಉಕ್ರೇನ್, ಮಲೇಷಿಯಾ, ವಿಯೆಟ್ನಂ, ಎಸ್ಟೋನಿಯಾ ಅಲ್ಲದೆ ಭಾರತದ ಗಾಳಿಪಟ ಪ್ರವೀಣರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು 40 ಕ್ಕೂ ಅಧಿಕ ವೃತ್ತಿಪರ ಗಾಳಿ ಪಟ ಹಾರಾಟಗಾರರು ಈ ಬಾರಿ ಹಬ್ಬದಲ್ಲಿ ಭಾಗವಹಿಸಿದ್ದಾರೆ.

ಗುಜರಾತಿನಲ್ಲಿ ಸಬರಮರಿ ನದಿ ತಪ್ಪಲಿನಲ್ಲಿ ಮುಂಬೈನಲ್ಲಿ ಪ್ರಿಯದರ್ಶನಿ ಪಾರ್ಕ್, ಕ್ರೀಡಾ ಕಾಂಪ್ಲೆಕ್ಸ್, ಮಲಬಾರ್ ಹಿಲ್ಸ್ ನಲ್ಲಿ ಹಬ್ಬ ಆಚರಣೆ ಚಾಲ್ತಿಯಲ್ಲಿದೆ. ಚೀನಾದ ವೈಫಾಂಗ್ ಅಂತಾರಾಷ್ಟ್ರೀಯ ಗಾಳಿಪಟ ಸ್ಪರ್ಧೆಗೆ ಕೇರಳದ ತಂದ ಈ ಬಾರಿಯ ಆಕರ್ಷಣೆಯಾಗಿದೆ. ಕಥಕ್ಕಳಿ ಕಲಾವಿದನ ಮುಖ ಹೊತ್ತ 110 ಅಡಿ ಗಾಳಿಪಟ ಸೇರಿದಂತೆ ಮೋದಿ ಗಾಳಿಪಟ ಈ ಬಾರಿ ಜನರ ಗಮನ ಸೆಳೆಯುತ್ತಿದೆ. ದೇಶದ ವಿವಿಧೆಡೆಗಳಲ್ಲಿ ಕಂಡು ಬಂದ ಗಾಳಿಪಟಗಳು ಇಲ್ಲಿವೆ ನೋಡಿ...

ಗುಜರಾತಿನಲ್ಲಿ ಮೋದಿ ಪಟಕ್ಕೆ ಭಾರಿ ಬೇಡಿಕೆ

ಗುಜರಾತಿನಲ್ಲಿ ಮೋದಿ ಪಟಕ್ಕೆ ಭಾರಿ ಬೇಡಿಕೆ

ಗುಜರಾತಿನಲ್ಲಿ ಸಬರಮರಿ ನದಿ ತಪ್ಪಲಿನಲ್ಲಿ ಗಾಳಿಪಟ ಹಾರಿಸುವ ಹಬ್ಬ ನಡೆದಿದೆ

ಸೂಪರ್ ಮ್ಯಾನ್ ಗಾಳಿಯಲ್ಲಿ ತೇಲಾಡುತ್ತಾನೆ

ಸೂಪರ್ ಮ್ಯಾನ್ ಗಾಳಿಯಲ್ಲಿ ತೇಲಾಡುತ್ತಾನೆ

ಮಕ್ಕಳಿಗೆ ಸೂಪರ್ ಮ್ಯಾನ್, ಕಾರ್ಟೂನ್ ಇರುವ ಗಾಳಿಪಟಗಳು ಇಷ್ಟವಾಗುತ್ತಿದೆ

ಪಟ ಪಟ ನೋಡಿ ಗಾಳಿಪಟ

ಪಟ ಪಟ ನೋಡಿ ಗಾಳಿಪಟ

ಅಹಮದಾಬಾದಿನ ಅಂಗಡಿ ಸಾಲಿನಲ್ಲಿ ಪಟ ಪಟ ನೋಡಿ ಗಾಳಿಪಟ

ಕಾರ್ಟೂನ್ ಇರುವ ಗಾಳಿಪಟಗಳು

ಕಾರ್ಟೂನ್ ಇರುವ ಗಾಳಿಪಟಗಳು

ಮಿಕ್ಕಿ ಮೌಸ್, ಡೋನಾಲ್ಡ್ ಡಕ್, ಪಕ್ಷಿ, ಪ್ರಾಣಿಗಳ ಬೃಹತ್ ಗಾಳಿಪಟಗಳು ಕಣ್ಮನ ಸೆಳೆಯುತ್ತಿವೆ

ಹೈದರಾಬಾದಿನಲ್ಲಿ ಕಂಡ ಒಂದು ಗಾಳಿಪಟ

ಹೈದರಾಬಾದಿನಲ್ಲಿ ಕಂಡ ಒಂದು ಗಾಳಿಪಟ

ಹೈದರಾಬಾದಿನಲ್ಲಿ ಕಂಡ ಒಂದು ಗಾಳಿಪಟ ಹೀಗಿದೆ ನೋಡಿ

ಪಟ ಪಟ ನೋಡಿ ಗಾಳಿಪಟ

ಪಟ ಪಟ ನೋಡಿ ಗಾಳಿಪಟ

ಹೈದರಾಬಾದಿನಲ್ಲಿ ಪಟ ಪಟ ನೋಡಿ ಗಾಳಿಪಟ ಹಾರಿಸಲು ತಯಾರಿ

ಎಲ್ಲರ ಮೆಚ್ಚುಗೆ ಪಡೆಯುತ್ತಿರುವ ಗಾಳಿಪಟ ಹಬ್ಬ

ಎಲ್ಲರ ಮೆಚ್ಚುಗೆ ಪಡೆಯುತ್ತಿರುವ ಗಾಳಿಪಟ ಹಬ್ಬ

ವಿವಿಧ ವಯಸ್ಸಿನ ಸ್ಪರ್ಧಿಗಳು ಉತ್ಸಾಹಿಗಳು ಗಾಳಿಪಟ ಹಾರಿಸಲು ಮುಂದಾಗುತ್ತಿದ್ದಾರೆ

English summary
Kites soar high at International Kite Fest (Pics): This week, the skies in India's major cities just got brighter and more colourful. And tigers, penguins and even Kareena Kapoor grew wings and flew in the vast blueness!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X