ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ ವೇಳೆಗೆ ಭಾರತಕ್ಕೆ 10 ಕೋಟಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ: ಆದರ್ ಪೂನಾವಾಲಾ

|
Google Oneindia Kannada News

ನವದೆಹಲಿ, ನವೆಂಬರ್ 23: ಜನವರಿ ವೇಳೆಗೆ 10 ಕೋಟಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಸಿದ್ಧವಿರಲಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್‌ ನ ಆದರ್ ಪೂನಾವಾಲಾ ತಿಳಿಸಿದ್ದಾರೆ.

ಆಕ್ಸ್‌ಫರ್ಡ್‌ನ ಆಸ್ಟ್ರಾಜೆನೆಕಾ ಲಸಿಕೆಯು ಶೇ.90ರಷ್ಟು ಪರಿಣಾಮಕಾರಿ ಎಂಬುದು ತಿಳಿದುಬಂದಿದ್ದು, ಈಗಾಗಲೇ ಲಸಿಕೆ ಉತ್ಪಾದನೆ ಆರಂಭವಾಗಿದೆ.

ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ: ಸೆರಂಆಕ್ಸ್‌ಫರ್ಡ್ ಕೊರೊನಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ: ಸೆರಂ

ಜನವರಿ ಅಂತ್ಯದೊಳಗೆ ಲಸಿಕೆ ಲಭ್ಯವಾಗಲಿದೆ. ಸೆರಂ ಇನ್‌ಸ್ಟಿಟ್ಯೂಟ್ ಕೊರೊನಾ ಲಸಿಕೆ ಉತ್ಪಾದನೆ ಕುರಿತು ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ.

Adar Poonawala Says 100 Million Doses By January 2021

ಈಗಾಗಲೇ 40 ಮಿಲಿಯನ್ ಕೊರೊನಾ ಲಸಿಕೆ ಉತ್ಪಾದಿಸಲಾಗಿದೆ. ಕೇಂದ್ರ ಸರ್ಕಾರದ ದೊಡ್ಡ ಮಟ್ಟದಲ್ಲಿ ಲಸಿಕೆಯನ್ನು ಖರೀದಿಸಿದರೆ 250 ರೂ ಅಥವಾ ಅದಕ್ಕೂ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

ಖಾಸಗಿ ಮಾರುಕಟ್ಟೆಯಲ್ಲಿ ಲಸಿಕೆಗೆ 500 ರಿಂದ 600ರೂ. ತೆಗೆದುಕೊಳ್ಳಲಾಗುತ್ತದೆ. ಇದರಿಂದ ವಿತರಕರು ಹಣ ಗಳಿಸಿಕೊಳ್ಳುತ್ತಾರೆ.

ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎಂದು ಸೆರಂ ಇನ್‌ಸ್ಟಿಟ್ಯೂಟ್ ಹೇಳಿದೆ.ಜೊತೆಗೆ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳೂ ಕಂಡು ಬಂದಿಲ್ಲ ಎಂದು ಕಂಪನಿ ತಿಳಿಸಿದೆ.

ಮೊದಲಿಗೆ ಒಂದು ಡೋಸ್‌ ನೀಡಿ ನಂತರ ಒಂದು ತಿಂಗಳ ಬಳಿಕ ಅರ್ಧ ಡೋಸ್‌ ನೀಡಿದಾಗ ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ಲಸಿಕೆಯು ಶೇ. 90ರಷ್ಟು ಯಶಸ್ವಿಯಾಗಿದೆ.

ಲಸಿಕೆಯ ಮಾನವರ ಮೇಲಿನ ಪರೀಕ್ಷೆಯ ಮಧ್ಯಂತರ ದತ್ತಾಂಶಗಳನ್ನು ಸಂಸ್ಥೆಯ ಸೋಮವಾರ ಬಿಡುಗಡೆ ಮಾಡಿದೆ. ಬ್ರಿಟನ್‌ ಮತ್ತು ಬ್ರೆಜಿನ್‌ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಇದು ಋಜುವಾತಾಗಿದೆ ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಪರಿಣಾಮಗಳೂ ಕಾಣಿಸಿಕೊಂಡಿಲ್ಲ ಎಂದು ಹೇಳಿದೆ.

ಕೊರೊನಾದ ವಿರುದ್ಧ ಲಸಿಕೆಯು ತುಂಬಾ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆಸ್ಟ್ರಾಝೆನಿಕಾ ಸಿಇಒ ಪಾಸ್ಕಲ್‌ ಸಾರಿಯಟ್‌ ಹೇಳಿದ್ದಾರೆ.

Recommended Video

ಪಬ್ ಜಿ ಆಟಗಾರರಿಗೆ 6 ಕೋಟಿ ಬಹುಮಾನ!! | Oneindia Kannada

English summary
A minimum of 100 million doses of Covishield - a vaccine that this morning was said by its manufacturer to be 90 per cent effective in protecting against the novel coronavirus - will be available by January.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X