ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗೂಲಿ ಇದ್ದ ಫಾರ್ಚ್ಯೂನ್ ಎಣ್ಣೆ ಜಾಹೀರಾತು ತೆರವುಗೊಳಿಸಿದ ಅದಾನಿ ವಿಲ್ಮರ್

|
Google Oneindia Kannada News

ನವದೆಹಲಿ, ಜನವರಿ 5: ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಲಘು ಹೃದಯಾಘಾತಕ್ಕೆ ಒಳಗಾದ ಬಳಿಕ ತೀವ್ರ ಚರ್ಚೆಗೆ ಒಳಗಾಗಿದ್ದ ಫಾರ್ಚ್ಯೂನ್ ರೈಸ್ ಬ್ರಾನ್ ಅಡುಗೆ ಅನಿಲದ ಜಾಹೀರಾತುಗಳನ್ನು ಅದಾನಿ ವಿಲ್ಮರ್ ಎಲ್ಲ ವೇದಿಕೆಗಳಿಂದಲೂ ತೆರವುಗೊಳಿಸಿದೆ ಎಂದು ವರದಿಯಾಗಿದೆ.

ಫಾರ್ಚ್ಯೂನ್ ರೈಸ್ ಬ್ರಾನ್ ಅಡುಗೆ ಅನಿಲದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಸೌರವ್ ಗಂಗೂಲಿ ಅವರು, ಈ ಎಣ್ಣೆ ಹೃದಯಕ್ಕೆ ಒಳಿತು ಎಂಬ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ ಅವರೇ ಹೃದಯಾಘಾತಕ್ಕೆ ಒಳಗಾಗಿದ್ದು ಟೀಕೆಗೆ ಗುರಿಯಾಗಿದೆ.

ರಾಜಕೀಯಕ್ಕೆ ಬರುವಂತೆ ಗಂಗೂಲಿ ಮೇಲೆ ಒತ್ತಡ: ಸಿಪಿಎಂ ಮುಖಂಡ ಆರೋಪರಾಜಕೀಯಕ್ಕೆ ಬರುವಂತೆ ಗಂಗೂಲಿ ಮೇಲೆ ಒತ್ತಡ: ಸಿಪಿಎಂ ಮುಖಂಡ ಆರೋಪ

ಹೃದಯದ ಆರೋಗ್ಯದ ಕುರಿತು ಸೌರವ್ ಗಂಗೂಲಿ ಪ್ರಚಾರ ಮಾಡುವ ಜಾಹೀರಾತನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ತೀವ್ರವಾಗಿ ಟ್ರೋಲ್ ಮಾಡಿದ್ದರು. ಹೀಗಾಗಿ ಅಡುಗೆ ಎಣ್ಣೆಯ ಪ್ರಚಾರ ಮಾಡಿದ್ದ ಕ್ರಿಕೆಟಿಗನೇ ಹೃದಯ ಸಮಸ್ಯೆಗೆ ಒಳಗಾಗಿರುವುದರಿಂದ ಫಾರ್ಚ್ಯೂನ್ ತೈಲದ ಜಾಹೀರಾತನ್ನು ನೆಟ್ಟಿಗರು ಪ್ರಶ್ನಿಸಿದ್ದರು. ಮುಂದೆ ಓದಿ.

ಜಾಹೀರಾತು ವಾಪಸ್

ಜಾಹೀರಾತು ವಾಪಸ್

ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಫಾರ್ಚ್ಯೂನ್ ಆಯಿಲ್‌ನ ಪೋಷಕ ಕಂಪೆನಿ ಅದಾನಿ ವಿಲ್ಮರ್, ಸೌರವ್ ಗಂಗೂಲಿ ಅವರು ಇರುವ ಎಲ್ಲ ಜಾಹೀರಾತುಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ಬ್ರ್ಯಾಂಡ್‌ನ ಕ್ರಿಯೇಟಿವ್ ಸಂಸ್ಥೆಯು ಹೊಸದಾಗಿ ಪ್ರಚಾರ ಕಾರ್ಯ ಆರಂಭಿಸಲಿದೆ ಎಂದು ವರದಿಗಳು ತಿಳಿಸಿವೆ.

ಗಂಗೂಲಿಯನ್ನು ಪರೀಕ್ಷಿಸಿದ ಡಾ.ದೇವಿ ಶೆಟ್ಟಿ, ಬುಧವಾರ ದಾದಾ ಆಸ್ಪತ್ರೆಯಿಂದ ಡಿಶ್ಚಾರ್ಜ್

ಹೊಸ ಜಾಹೀರಾತಿಗೆ ಸಿದ್ಧತೆ

ಹೊಸ ಜಾಹೀರಾತಿಗೆ ಸಿದ್ಧತೆ

ಬ್ರ್ಯಾಂಡ್‌ನ ಕ್ರಿಯೇಟಿವ್ ಸಂಸ್ಥೆ ಒಗಿಲ್ವಿ ಆಂಡ್ ಮದರ್ ಹೊಸ ಬಗೆಯ ಜಾಹೀರಾತು ನೀಡಲು ಸಿದ್ಧತೆ ನಡೆಸಿದೆ. ಗಂಗೂಲಿ ಅವರನ್ನು ಒಳಗೊಂಡ ಜಾಹೀರಾತುಗಳನ್ನು ಎಲ್ಲ ವೇದಿಕೆಗಳಿಂದಲೂ ತೆರವುಗೊಳಿಸಲಾಗಿದೆ ಎಂದು ಜಾಹೀರಾತಿನ ತಂಡದಲ್ಲಿದ್ದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಕೀರ್ತಿ ಆಜಾದ್ ಟೀಕೆ

ಕೀರ್ತಿ ಆಜಾದ್ ಟೀಕೆ

ಸೌರವ್ ಗಂಗೂಲಿ ಅವರು ಫಾರ್ಚ್ಯೂನ್ ಎಣ್ಣೆ ಜಾಹೀರಾತಿನಲ್ಲಿದ್ದ ಚಿತ್ರವನ್ನು ಹಂಚಿಕೊಂಡಿದ್ದ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಕೀರ್ತಿ ಆಜಾದ್, 'ಯಾವಾಗಲೂ ಪರೀಕ್ಷಿಸಿದ ಮತ್ತು ಪ್ರಯತ್ನಿಸಿದ ಉತ್ಪನ್ನಗಳನ್ನೇ ಪ್ರಚಾರ ಮಾಡಿ. ಸ್ವಯಂ ಜಾಗ್ರತೆ ಮತ್ತು ಎಚ್ಚರಿಕೆಯಿಂದ ಇರಿ' ಎಂದು ಸೌರವ್ ಗಂಗೂಲಿ ಕಾಳೆಯುವ ಮೂಲಕ ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದರು.

ಸೌರವ್ ಗಂಗೂಲಿ ಕಾಲೆಳೆದ ಮಾಜಿ ಕ್ರಿಕೆಟರ್ ಕೀರ್ತಿ ಅಝಾದ್

ನಾಳೆ ಬಿಡುಗಡೆ ಸಾಧ್ಯತೆ

ನಾಳೆ ಬಿಡುಗಡೆ ಸಾಧ್ಯತೆ

ಲಘು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿರುವ ಸೌರವ್ ಗಂಗೂಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಗಂಗೂಲಿ ಅವರಿಗೆ ಎರಡನೆಯ ಆಂಜಿಯೋಪ್ಲಾಸ್ಟಿ ಮಾಡಬೇಕಿದ್ದು, ಅದನ್ನು ನಂತರದ ಹಂತದಲ್ಲಿ ಮಾಡಬಹುದು ಎಂದು ವೈದ್ಯರ ತಂಡ ಸಭೆಯ ಬಳಿಕ ಹೇಳಿದೆ. ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ಅವರು ದೆಹಲಿಗೆ ತೆರಳಿದ್ದು, ಗಂಗೂಲಿ ಅವರ ಮುಂದಿನ ಚಿಕಿತ್ಸೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

English summary
Adani Wilmer has reportedly removed all ads of its Fortune Rice Bran cooking oil featuring BCCI president Sourav Ganguly across plotform after he suffered a mild cardiac arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X