ನಟಿ ಮೇಲೆ ಲೈಂಗಿಕ ದೌರ್ಜನ್ಯ: ನಟ ದಿಲೀಪ್ ಗೆ ಜೈಲೇ ಗತಿ

By: ಅನುಷಾ ರವಿ
Subscribe to Oneindia Kannada

ತಿರುವನಂತಪುರಂ, ಸೆ. 18: ಕೇರಳ ಮೂಲದ ಬಹುಭಾಷಾ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಜನಪ್ರಿಯ ನಟ ದಿಲೀಪ್ ಅವರು ಇನ್ನಷ್ಟು ಕಾಲ ಜೈಲಿನಲ್ಲೇ ನೆಲೆಸಬೇಕಾಗುತ್ತದೆ. ಅಂಗಮಲೆ ಜೆಎಂಎಫ್ ನ್ಯಾಯಾಲಯವು ದಿಲೀಪ್ ಅವರ ಜಾಮೀನು ಅರ್ಜಿಯನ್ನು ಸೋಮವಾರ(ಸೆ. 18) ದಂದು ತಿರಸ್ಕರಿಸಿದೆ.

ಕಲಾಭವನ್ ಮಣಿ ಸಾವಿನ ಹಿಂದೆ ದಿಲೀಪ್ ಕೈವಾಡ?

ನಟ ದಿಲೀಪ್ ಅವರ ಜಾಮೀನು ಅರ್ಜಿಯು ನಾಲ್ಕನೇ ಬಾರಿಗೆ ತಿರಸ್ಕೃತಗೊಂಡಿದೆ. ಅಂಗಮಲೆ ಕೋರ್ಟ್ ಅಲ್ಲದೆ, ಕೇರಳ ಹೈಕೋರ್ಟ್ ಕೂಡಾ ಎರಡು ಬಾರಿ ಅರ್ಜಿಯನ್ನು ತಿರಸ್ಕರಿಸಿದೆ.

Actress molestation case: Dileep's bail plea rejected for the fourth time

ಫೆಬ್ರವರಿ 17ರ ನಟಿ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10ರಂದು ಕೇರಳ ಪೊಲೀಸರು, ಮಲೆಯಾಳಂ ನಟ ದಿಲೀಪ್ ನನ್ನು ಬಂಧಿಸಿ, ಆಳುವ ಉಪ ಕಾರಾಗೃಹದಲ್ಲಿರಿಸಲಾಗಿದೆ.

ಕಾವ್ಯಾ ಮಾಧವನ್ ಸುತ್ತ ದೌರ್ಜನ್ಯದ ಉರುಳು!

ಬಂಧನದ ನಂತರ ದಿಲೀಪ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಕೇಸಿನ ಸಾಕ್ಷಿಗಳ ಮೇಲೆ ನಟ ಪ್ರಭಾವ ಬೀರಿರುವ ಸಾಧ್ಯತೆಯಿದೆ ಎಂದು ದಿಲೀಪ್​ಗೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.

ನಟಿ ಅಪಹರಣ, ಲೈಂಗಿಕ ಕಿರುಕುಳದ ಸಂಚು ರೂಪಿಸಿದ್ದು, ಪಲ್ಸರ್ ಸುನಿ ಎಂಬಾತನನ್ನು ಬಳಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಿದ ಆರೋಪ ನಟ ದಿಲೀಪ್ ಮೇಲಿದೆ. ಕಳೆದ 60 ದಿನಗಳಲ್ಲಿ ಒಮ್ಮೆ ಮಾತ್ರ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜೈಲಿನಿಂದ ದಿಲೀಪ್ ಹೊರಕ್ಕೆ ಬಂದಿದ್ದರು.

ಈ ನಡುವೆ ದಿಲೀಪ್ ಅವರ ಪತ್ನಿ ನಟಿ ಕಾವ್ಯ ಮಾಧವನ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದಾರೆ. ಅರ್ಜಿ ವಿಚಾರಣೆ ಜಾರಿಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Dileep's bail plea rejected
English summary
The Angamaly judicial magistrate court on Monday rejected actor Dileep's bail plea for the fourth time. The actor has been charged with conspiracy in the February 17 actress molestation case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ