ಮೋದಿ ನನ್ನ ತಂದೆ ಎಂದ ಕ್ಯಾಲೆಂಡರ್ ಗರ್ಲ್ ಅವನಿ!

Posted By:
Subscribe to Oneindia Kannada

ಮುಂಬೈ, ಮಾರ್ಚ್ 16: ಮಧುರ್ ಭಂಡಾರ್ಕರ್ ನಿರ್ದೇಶನದ 'ಕ್ಯಾಲೆಂಡರ್ ಗರ್ಲ್' ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ಮಾಡೆಲ್ ಕಮ್ ನಟಿ ಅವನಿ ಮೋದಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನನ್ನ ತಂದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಅವನಿ ನಂತರ ಯಾವ ಮಾಧ್ಯಮಕ್ಕೂ ಪ್ರತಿಕ್ರಿಯಿಸದೆ ಸುಮ್ಮನಾಗಿದ್ದರು. ಈಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಚಿತ್ರವೊಂದರ ಪ್ರಚಾರಕ್ಕೆ ಬೆಂಗ್ಗಳೂರಿಗೆ ಬಂದಿದ್ದ ಅವನಿ ಅವರು ಸುದ್ದಿಗೋಷ್ಟಿಯಲ್ಲಿ 'ಮೋದಿ ನನ್ನ ತಂದೆ' ಎಂದು ಬಾಂಬ್ ಸಿಡಿಸಿದರು. ಇದೇನು ಹೊಸ ಸುದ್ದಿ ಸಿಕ್ಕಿತ್ತಲ್ಲ ಎಂದು ಮಾಧ್ಯಮದವರು ಪ್ರಶ್ನೆಗಳ ಬಾಣ ಎಸೆದಿದ್ದಾರೆ. ನಿಮಗೂ ಮೋದಿ ಅವರಿಗೂ ಏನು ಸಂಬಂಧ? ಮೋದಿ ಕುಟುಂಬಕ್ಕೂ ನಿಮ್ಮ ಕುಟುಂಬಕ್ಕೂ ನಂಟು ಇದೆಯೇ? ಹೀಗೆ ಪ್ರಶ್ನೆಗಳು ತೂರಿ ಬಂದಿವೆ.[ಇದ್ಯಾರ್ರೀ ಜಯಲಲಿತಾರ ಹೊಸ ಮಗ, ಆಕೆ ಎಲ್ಲ ಆಸ್ತಿಯ ವಾರಸುದಾರ!]

Actress Avani Modi claims she is a daughter of PM Modi

ಗುಜರಾತಿ ರಂಗಭೂಮಿ, ತಮಿಳು ಚಿತ್ರರಂಗದಲ್ಲಿ ಹೆಸರು ಗಳಿಸಿರುವ 25 ವರ್ಷ ವಯಸ್ಸಿನ ಮಾಡೆಲ್ ಕಮ್ ನಟಿ ಅವನಿ ವಿಚಲಿತರಾಗದೆ, ಆತ್ಮವಿಶ್ವಾಸದಿಂದಲೇ ಪ್ರಶ್ನೆಗಳನ್ನು ಎದುರಿಸಿದ್ದಾರೆ. ನನ್ನ ಸರ್ ನೇಮ್, ಪ್ರಧಾನಿ ಅವರ ಸರ್ ನೇಮ್ ಒಂದೇ ಆಗಿದೆ. ನಾವಿಬ್ಬರೂ ಗುಜರಾತಿನವರು.

'ನಾನಷ್ಟೇ ಅಲ್ಲ, ಗುಜರಾತಿನ ಪ್ರತಿ ಯುವತಿ ಕೂಡಾ ಮೋದಿ ಅವರಲ್ಲಿ ತನ್ನ ತಂದೆಯನ್ನು ಕಾಣುತ್ತಾಳೆ.ಹೀಗಿರುವಾಗ ಅವರನ್ನು ನನ್ನ ತಂದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಮುಜುಗರ ಏನಿದೆ? ಇದರಲ್ಲಿ ಪ್ರಚಾರ ಗಿಟ್ಟಿಸುವ ಪ್ರಶ್ನೆ ಎಲ್ಲಿದೆ? ಇದು ಸಹಜವಾದ ಉತ್ತರ ಎಂದಿದ್ದಾರೆ.

ಅವನಿ ನೀಡಿದ ಜಾಣ್ಮೆಯ ಉತ್ತರ ಕೇಳಿ ಮಾಧ್ಯಮದವರು ಮುಖ ಮುಖ ನೋಡಿಕೊಂಡಿದ್ದಾರೆ. ಮೋದಿ ಎಂಬ ಸರ್ ನೇಮ್ ಇದ್ದರೆ ಕನೆಕ್ಷನ್ ಇದೆ ಎನ್ನುವುದಾದರೆ, ಡಾ. ಮೋದಿ, ಐಪಿಎಲ್ ಲಲಿತ್ ಮೋದಿ ಜತೆಗೆ ರಿಲೇಷನ್ ಇರಬೇಕಲ್ಲ ಎಂದು ನಗೆಯಾಡಿಕೊಂಡಿದ್ದು, ಅವನಿ ಕಿವಿಗೆ ಬಿದ್ದಿಲ್ಲ.

ತಮಿಳುನಾಡಿನಲ್ಲಿ ಜಯಲಲಿತಾ ಅವರ ಮಗ ಎಂದು ಈರೋಡ್ ಮೂಲದ ಕೃಷ್ಣಮೂರ್ತಿ ವ್ಯಕ್ತಿ ಮುಂದೆ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Avani Modi, a model-actor created a huge uproar when she said ‘I am Narendra Modi’s daughter’. Later Avani calrified that she is a daughter of PM Modi just like every girl in Gujarat is.
Please Wait while comments are loading...