ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಿಗೆ ಕೊಟ್ಟ ಮಾತು ಉಳಿಸಿಕೊಂಡ ಮೋದಿ!

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 22: ಮಲೆಯಾಳಂ ನಟ, ಗಾಯಕ, ನಿರೂಪಕ, 'ಐ' ಚಿತ್ರದ ಮುಖ್ಯ ವಿಲನ್ ಸುರೇಶ್ ಗೋಪಿ ಅವರಿಗೆ ಕೊಟ್ಟ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಉಳಿಸಿಕೊಂಡಿದ್ದಾರೆ. ಗೋಪಿ ಅವರಿಗೆ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್ ಲಭಿಸಿದೆ.

ನ್ಯಾಷನಲ್ ಫಿಲಂ ಡೆವಲ್ಪ್ ಮೆಂಟ್ ಕಾರ್ಪೊರೇಷನ್ (ಎನ್ಎಫ್ ಡಿಸಿ) ಚೇರ್ಮನ್ ಆಗಿ ಸುರೇಶ್ ಗೋಪಿ ನೇಮಕ ಮಾಡುವ ಸುದ್ದಿ ಬಂದಿತ್ತು. ಮೇಲೆ ಈಗ ಸುರೇಶ್‌ ಗೋಪಿ ಅವರನ್ನು ರಾಜ್ಯಸಭೆಗೆ ಮೋದಿ ಅವರು ಶಿಫಾರಸು ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆ 2014ರ ಸಂದರ್ಭದಲ್ಲಿ ಗೋಪಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿದೆ. [ದೇವರ ನಾಡಿನ ಮೇಲೆ ಮೋದಿ ಕಣ್ಣು]

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಇದೆಯಾದರೂ ಸದ್ಯಕ್ಕೆ ಈ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಕ್ರಿಕೆಟಿಗ ಶ್ರೀಶಾಂತ್‌ ಸ್ಪರ್ಧೆ ಬಗ್ಗೆ ಮಾತ್ರ ಕೇರಳ ಬಿಜೆಪಿ ಉತ್ಸುಕವಾಗಿದೆ. [ಕೋಲ್ಕತ್ತಾ ನಂತರ ಕೇರಳದತ್ತ ಮೋದಿ,ಶಾ ಚಿತ್ತ]

ಕೇರಳದಲ್ಲಿ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಖಾತೆ ತೆರೆಯಬೇಕೆಂಬ ಹಟದಲ್ಲಿ ಬಿಜೆಪಿ ಇದೆ. ಈ ಬಾರಿ ಚುನಾವಣೆಯಲ್ಲಿ ಗೋಪಿ ಅವರು ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಸುರೇಶ್‌ಗೋಪಿ ಸೇರಿದಂತೆ ಸುಬ್ರಮಣ್ಯ ಸ್ವಾಮಿ, ಮೇರಿ ಕೋಮ್ ಅವರನ್ನು ರಾಜ್ಯಸಭೆಗೆ ಸೇರಿಸಲಾಗಿದೆ. ಸುರೇಶ್ ಗೋಪಿ ಆಯ್ಕೆ, ಕೇರಳ ಬಿಜೆಪಿ ಕನಸು, ಅಸೆಂಬ್ಲಿ ಚುನಾವಣೆ ಬಗ್ಗೆ ಇನ್ನಷ್ಟು ವಿವರ ಮುಂದಿದೆ...

ಕೇರಳ ಅಭಿವೃದ್ಧಿಗಾಗಿ ನಾನು ಶ್ರಮಿಸುವೆ: ಗೋಪಿ

ಕೇರಳ ಅಭಿವೃದ್ಧಿಗಾಗಿ ನಾನು ಶ್ರಮಿಸುವೆ: ಗೋಪಿ

ರಾಜ್ಯಸಭಾ ಸದಸ್ಯನಾಗಿ ನಾನು ಕೇರಳದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವೆ. ಮೋದಿ ಅವರು ಹಾಕಿಕೊಟ್ಟ ಯೋಜನೆಯಂತೆ ಮೊದಲಿಗೆ ಅಭಿವೃದ್ಧಿ ಕಾರ್ಯವನ್ನು ತಿರುವನಂತಪುರಂನಿಂದ ಆರಂಭಿಸುವೆ ಎಂದು ಸುರೇಶ್ ಗೋಪಿ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ಗೋಪಿ ಜತೆಗೆ ಇನ್ನಷ್ಟು ಮಂದಿ ರಾಜ್ಯಸಭೆಗೆ

ಗೋಪಿ ಜತೆಗೆ ಇನ್ನಷ್ಟು ಮಂದಿ ರಾಜ್ಯಸಭೆಗೆ

ಗೋಪಿ ಜತೆಗೆ ಇನ್ನಷ್ಟು ಮಂದಿಯನ್ನು ರಾಜ್ಯಸಭೆಗೆ ಶಿಫಾರಸು ಮಾಡಲಾಗಿದೆ. ಇವರಲ್ಲಿ ಮಾಜಿ ಪತ್ರಕರ್ತ ಸ್ವಪನ್ ದಾಸ್ ಗುಪ್ತಾ, ಆರ್ಥಿಕ ತಜ್ಞ ನರೇಂದ್ರ ಜಾಧವ್, ಬಾಕ್ಸರ್ ಮೇರಿ ಕೋಮ್, ಸುಬ್ರಮಣಿಯನ್ ಸ್ವಾಮಿ ಪ್ರಮುಖರು. ಕೊನೆ ಕ್ಷಣದಲ್ಲಿ ಮಾಜಿ ಕ್ರಿಕೆಟರ್, ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಹೆಸರು ಸೇರ್ಪಡೆಗೊಳ್ಳುವ ಸಾಧ್ಯತೆಯೂ ಕಂಡು ಬಂದಿದೆ.ಇದಲ್ಲದೆ ಏಳನೇ ಹೆಸರಾಗಿ ನಟ ಅನುಪಮ್ ಖೇರ್ ಅಥವಾ ಪತ್ರಕರ್ತ ರಜತ್ ಶರ್ಮ ಹೆಸರು ಸೇರಬಹುದು.

ಮೇಲ್ಮನೆಗೆ ಸದಸ್ಯರ ಶಿಫಾರಸು ಏಕೆ?

ಮೇಲ್ಮನೆಗೆ ಸದಸ್ಯರ ಶಿಫಾರಸು ಏಕೆ?

ಮಾರ್ಚ್ 21ರಂದು ಮೇಲ್ಮನೆಯ ಐವರು ಸದಸ್ಯರ ಅವಧಿ ಮುಕ್ತಾಯವಾಯಿತು. ಕಾಂಗ್ರೆಸ್ ನಾಯಕ ಮಣಿಶಂಕರ್ ಆಯ್ಯರ್, ಸಾಹಿತಿ ಜಾವೇದ್ ಅಖ್ತರ್, ರಂಗಕರ್ಮಿ ಬಿ ಜಯಶ್ರೀ, ಶಿಕ್ಷಣ ಕ್ಷೇತ್ರದ ಮೃನಾಲ್ ಮಿರಿ, ಆರ್ಥಿಕ ತಜ್ಞ ಬಾಲಚಂದ್ರ ಮುಂಗೇಕರ್ ಅಲ್ಲದೆ ಉದ್ಯಮಿ ಅಶೋಕ್ ಗಂಗೂಲಿ ಹಾಗೂ ಪತ್ರಕರ್ತ ಎಚ್ ಕೆ ದುವಾ ಜಾಗಕ್ಕೆ ಹೊಸಬರನ್ನು ಆರಿಸಿ ಕಳಿಸಬೇಕಿದೆ.

ಬಿಜೆಪಿ, ಸುರೇಶ್ ಗೋಪಿ ಅರಿಸಿದ್ದು ಏಕೆ?

ಬಿಜೆಪಿ, ಸುರೇಶ್ ಗೋಪಿ ಅರಿಸಿದ್ದು ಏಕೆ?

ಮಲೆಯಾಳಂ ಚಿತ್ರರಂಗದ ಟಾಪ್ ನಟರಾದ ಮಮ್ಮೂಟಿ, ಮೋಹನ್ ಲಾಲ್, ದಿಲೀಪ್ ಸಮಾನಾಂತರವಾಗಿ ಸುರೇಶ್ ಗೋಪಿ ಕೇರಳದಲ್ಲಿ ಪ್ರಭಾವ ಹೊಂದಿದ್ದಾರೆ. ನಾಯರ್ ಕುಟುಂಬದ ಗೋಪಿ ಅವರು ಈ ಹಿಂದೆಬಿಜೆಪಿ ಸೇರಿಸಿಕೊಳ್ಳುವ ಯತ್ನ ಯಾಕೋ ಸಫಲವಾಗಲಿಲ್ಲ. ಆದರೆ, ಮೋದಿ ಅವರನ್ನು ಭೇಟಿ ಮಾಡಿದ ಮೇಲೆ ಅವರ ತಾರಾ ಮೌಲ್ಯ ಹೆಚ್ಚಿದೆ. 'ಕೋಟ್ಯಧಿಪತಿ' ಕಾರ್ಯಕ್ರಮದ ಮಲೆಯಾಳಂ ಆವೃತ್ತಿಯ ನಿರೂಪಕರಾಗಿ ಮನೆ ಮಾತಾಗಿದ್ದಾರೆ ಕೂಡಾ. ಕನ್ನಡಿಗರಿಗೆ ನ್ಯೂಡೆಲ್ಲಿ ಚಿತ್ರದ ಮೂಲಕ ಪರಿಚಯ.

ಮೋದಿ ಅವರಿಂದ ಮೆಚ್ಚುಗೆ ಪಡೆದ ನಟ ಗೋಪಿ

ಮೋದಿ ಅವರಿಂದ ಮೆಚ್ಚುಗೆ ಪಡೆದ ನಟ ಗೋಪಿ

ವಿಳಿಂಜಾಮ್ ಬಂದರು ಯೋಜನೆ, ತ್ರಿವೇಂಡ್ರಮ್ ನ ಹೈಕೋರ್ಟ್ ಬೆಂಚ್, ರೈಲ್ವೆ ಜಾಲ ನವೀಕರಣ ಮುಂತಾದ ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಮೋದಿ ಜತೆ ಗೋಪಿ ಗಂಭೀರವಾದ ಚರ್ಚೆ ನಡೆಸಿದ್ದರು. ಮೊದಲ ಭೇಟಿ ನಂತರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲೂ ಗೋಪಿ ಹಾಜರಿದ್ದರು. ಹೀಗಾಗಿ ಬಿಜೆಪಿ ಪರ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕೇರಳ ಬಿಜೆಪಿಗೆ ಹೊಸ ಇತಿಹಾಸ ಕನಸು

ಕೇರಳ ಬಿಜೆಪಿಗೆ ಹೊಸ ಇತಿಹಾಸ ಕನಸು

ಐ ಚಿತ್ರದ ಜನಪ್ರಿಯತೆ, ಮೋದಿ ಬೆಂಬಲದ ನಂತರ ಕೇರಳ ಬಿಜೆಪಿ ಅಸೆಂಬ್ಲಿಯಲ್ಲಿ ಖಾತೆ ತೆರೆಯುವ ಕನಸು ಕಾಣುತ್ತಿದೆ. ಈ ಹಿಂದೆ ವಿ.ಎಚ್ ಅಚ್ಯುತಾನಂದನ್ ಪರ ಅಸೆಂಬ್ಲಿ ಚುನಾವಣೆಯಲ್ಲಿ ಪರ ನಿರತರಾಗಿದ್ದು ಬಿಟ್ಟರೆ ಮೋದಿ ಅವರನ್ನು ಮಾತ್ರ ಗೋಪಿ ಮೆಚ್ಚಿಕೊಂಡಿದ್ದಾರೆ. ಪಕ್ಷಕ್ಕಿಂತ ವ್ಯಕ್ತಿ ನೋಡಿಕೊಂಡು ಬೆಂಬಲಿಸುತ್ತಾ ಬಂದಿರುವ ಗೋಪಿ ಅವರು ಬಿಜೆಪಿ ಸೇರಿದಂತೆ ಕೇರಳ ರಾಜಕೀಯದಲ್ಲಿ ಹೊಸ ಇತಿಹಾಸ ನಿರ್ಮಿಸುವ ನಿರೀಕ್ಷೆ ಹೊಂದಿದ್ದಾರೆ.

English summary
Actor Suresh Gopi(56) has been BJP’s star campaigner ever since he turned down a candidature for the state Assembly elections. On thursday (April 21) confirmed that he had been nominated by the Centre as a Rajya Sabha member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X