ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ ನಾಡಿನ ಮೇಲೆ ಮೋದಿ ಕಣ್ಣು

By Mahesh
|
Google Oneindia Kannada News

ತಿರುವನಂತಪುರಂ, ಮಾ.6: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರವನ್ನು ಕಾರ್ಯಗತಗೊಳಿಸುತ್ತಿವೆ. ಈ ನಡುವೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾರತ ಕಟ್ಟುವ ತಮ್ಮ ಕನಸಿಗೆ ಇಂಬು ನೀಡಬಲ್ಲ ಸಮರ್ಥರನ್ನು ಎಲ್ಲಾ ಕಡೆಗಳಿಂದ ಗುರುತಿಸುತ್ತಿದ್ದಾರೆ. ಸದ್ಯಕ್ಕೆ ಗುಜರಾತ್ ಮುಖ್ಯಮಂತ್ರಿಗಳ ಕಣ್ಣು ದೇವರ ನಾಡು ಕೇರಳ ಮೇಲಿದೆ.

ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಕರಾವಳಿ ಪ್ರದೇಶಗಳನ್ನು ಒಗ್ಗೂಡಿಸಿ ಬಂದರುಗಳ ಜಾಲ ನಿರ್ಮಾಣದ ಬಗ್ಗೆ ಮಾತನಾಡಿದ್ದರು. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮಲೆಯಾಳಂ ನಟ, ಗಾಯಕ, ನಿರೂಪಕ ಸುರೇಶ್ ಗೋಪಿ (ಕನ್ನಡದಲ್ಲಿ ಅಂಬರೀಶ್ ಅಭಿನಯದ ನ್ಯೂಡೆಲ್ಲಿ ಚಿತ್ರದಲ್ಲೂ ನಟಿಸಿದ್ದಾರೆ) ಅವರು ಮೋದಿ ಅವರನ್ನು ಭೇಟಿ ಮಾಡಿದ್ದಾರೆ.[ಮೋದಿ ಪರ ಪ್ರಚಾರಕ್ಕೆ ಸಲ್ಮಾನ್ ಸಿದ್ಧ]

ಮೋದಿ ಅವರು ಸುರೇಶ್ ಗೋಪಿ ಅವರೊಂದಿಗೆ ಭೇಟಿ ಬಗ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರ ಜತೆ ಕೇರಳ ಸಿನಿಮಾ ರಂಗ, ಸಾಂಸ್ಕೃತಿಕ ವೈರುಧ್ಯಗಳು, ಪ್ರತಿಭಾ ಪಲಾಯನ, ಯುವ ಭಾರತೀಯ ಸಮುದಾಯ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದು ನಂತರ ಮುಖ್ಯ ವಿಷಯಕ್ಕೆ ಬಂದಿದ್ದಾರೆ. ರಾಜಕಾರಣಿ ಅಲ್ಲದ, ರಾಜಕೀಯ ನನಗೆ ಬೇಡ ಎನ್ನುವ ನಾಯರ್ ಕುಟುಂಬದ ಸುರೇಶ್ ಗೋಪಿಗೆ ಮೋದಿ ಮಣೆ ಹಾಕಿರುವುದು ಮಲ್ಲೂ ನಾಡಲ್ಲಿ ಕುತೂಹಲ ಕೆರಳಿಸಿದೆ. ಮೋದಿ-ಗೋಪಿ ಭೇಟಿ ನಂತರ ಕೇರಳದ ಪಕ್ಷಗಳು ಬಿಜೆಪಿ ಪರ ನಿಲುವು ತಾಳಲು ಸಾಧ್ಯವೇ? ಇವರ ಭೇಟಿ ವಿವರ ಹಾಗೂ ಚಿತ್ರಗಳು ಮುಂದಿವೆ. [ಚಿತ್ರಗಳಲ್ಲಿ: ಮೋದಿ ಜೊತೆ 'ಕಿಲಾಡಿ' ಅಕ್ಷಯ್]

ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ

ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ

ಸುರೇಶ್ ಗೋಪಿ ಅವರು ಮೋದಿ ಅವರಿಗೆ ಸಾಂಪ್ರದಾಯಿಕವಾದ ಶಾಲು ಹೊದೆಸಿ ಸನ್ಮಾನಿಸಿದರು. ಇಬ್ಬರು ಸುಮಾರು ಒಂದು ಗಂಟೆಗಳ ಕಾಲ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಸಿದರು.

ಕೇರಳದ ರಾಜಕೀಯ ಚಿತ್ರಣ ವಿವರ

ಕೇರಳದ ರಾಜಕೀಯ ಚಿತ್ರಣ ವಿವರ

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲು ಸೂಕ್ತ ವ್ಯಕ್ತಿ ಎಂದಿರುವ ಸುರೇಶ್ ಗೋಪಿ ಅವರಿಂದ ಕೇರಳದ ಸದ್ಯದ ರಾಜಕೀಯ ಚಿತ್ರಣದ ಮಾಹಿತಿಯನ್ನು ಮೋದಿ ಅವರು ಪಡೆದುಕೊಂಡಿದ್ದಾರೆ.

ಕಲೆ, ಸಂಸ್ಕೃತಿ ಯುವಜನತೆ ಅಭಿವೃದ್ಧಿ

ಕಲೆ, ಸಂಸ್ಕೃತಿ ಯುವಜನತೆ ಅಭಿವೃದ್ಧಿ

ಕಲೆ, ಸಂಸ್ಕೃತಿ ಯುವಜನತೆ ಅಭಿವೃದ್ಧಿಗಾಗಿ ದೂರದರ್ಶನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆ ಗೋಪಿ ಹೇಳಿದರು. ದಕ್ಷಿಣ ಚಲನಚಿತ್ರ ಕ್ಷೇತ್ರದಲ್ಲಿರುವ ಸಮಸ್ಯೆಗಳು ಹಾಗೂ ಕಾರ್ಮಿಕರ ನೋವು ನಲಿವಿನ ಬಗ್ಗೆ ಮೋದಿ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.

ಕರಾವಳಿಯ ಬಂದರು ಯೋಜನೆ ಮಾಹಿತಿ

ಕರಾವಳಿಯ ಬಂದರು ಯೋಜನೆ ಮಾಹಿತಿ

ವಿಳಿಂಜಾಮ್ ಬಂದರು ಯೋಜನೆ, ತ್ರಿವೇಂಡ್ರಮ್ ನ ಹೈಕೋರ್ಟ್ ಬೆಂಚ್, ರೈಲ್ವೆ ಜಾಲ ನವೀಕರಣ ಮುಂತಾದ ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಮೋದಿ ಜತೆ ಗೋಪಿ ಗಂಭೀರವಾದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ನಟ ಸುರೇಶ್ ಗೋಪಿ ಭೇಟಿ ನಂತರ ಟ್ವೀಟ್

ನಟ ಸುರೇಶ್ ಗೋಪಿ ಭೇಟಿ ನಂತರ ಮೋದಿ ಅವರು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮೋದಿ ಅವರು ಟ್ವೀಟ್ ಮಾಡಿ ಹರ್ಷ

ನಟ ಸುರೇಶ್ ಗೋಪಿ ಭೇಟಿ ನಂತರ ಮೋದಿ ಅವರು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಗೋಪಿಗಿಲ್ಲ ರಾಜಕೀಯ ನಂಟು

ಗೋಪಿಗಿಲ್ಲ ರಾಜಕೀಯ ನಂಟು

ಸುರೇಶ್ ಗೋಪಿ ರಾಜಕೀಯ ಪ್ರವೇಶದ ಬಗ್ಗೆ ಕಳೆದ ಹತ್ತು ವರ್ಷದಿಂದ ಸುದ್ದಿ ಹಬ್ಬುತ್ತಲೇ ಇದೆ. ಆದರೆ, ಪಕ್ಷಕ್ಕಿಂತ ವ್ಯಕ್ತಿ ನೋಡಿಕೊಂಡು ಬೆಂಬಲಿಸುತ್ತಾ ಬಂದಿರುವ ಗೋಪಿ ಅವರು ಹಿಂದೊಮ್ಮೆ ಕಾಂಗ್ರೆಸ್ ನಾಯಕ ಕೆ ಕರುಣಾಕರನ್ ಬೆಂಬಲಿಸಿದ್ದರು ಎಂಬ ಸುದ್ದಿ ಹಬ್ಬಿತ್ತು ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಗೋಪಿ.. ಸುದ್ದಿ ನೈಜತೆ ಪ್ರೂವ್ ಮಾಡಿದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದಿದ್ದರು.

ನಂತರ ವಿ.ಎಚ್ ಅಚ್ಯುತಾನಂದನ್ ಪರ ಅಸೆಂಬ್ಲಿ ಚುನಾವಣೆಯಲ್ಲಿ ಪರ ನಿರತರಾಗಿದ್ದರು. ಮಮ್ಮೂಟಿ, ಮೋಹನ್ ಲಾಲ್ ನಂತರ ಜನಪ್ರಿಯ ನಟ ಎನಿಸಿರುವ ಗೋಪಿ ಅವರು ಮೋದಿ ಅವರ ಸಲಹೆ ಪಡೆದು ರಾಜಕೀಯ ರಂಗಕ್ಕೆ ಧುಮುಕುವ ಸಾಧ್ಯತೆಯಿದೆ ಎನ್ನಲಾಗಿದೆ.

English summary
Malayalam actor Suresh Gopi meets BJP's prime ministerial candidate Narendra Modi. The main agenda of the meeting is said to be Modi's strategy of meeting eminent people to understand the various walks of life and to understand their idea for the nation in groups as well as individual dignitaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X