ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಿವಾರ ಧರಿಸುವ ನಿಮ್ಮ ಮನೆಯಲ್ಲಿ ಏಸುವಿನ ಶಿಲುಬೆ ಏಕೆ? ಮಾಧವನ್ ಖಡಕ್ ಉತ್ತರ ಹೀಗಿತ್ತು!

|
Google Oneindia Kannada News

ಬಹುಭಾಷಾ ನಟ ಮಾಧವನ್, ರಕ್ಷಾ ಬಂಧನದ (ಆಗಸ್ಟ್ 15) ದಿನದಂದು instagram ನಲ್ಲಿ ಹಾಕಿರುವ ಪೋಸ್ಟ್, ವ್ಯಾಪಕ ಪರವಿರೋಧ ಚರ್ಚೆಗೆ ಆಹಾರವಾಗಿದೆ. ಆ ಪೋಸ್ಟ್ ಅನ್ನು ಮಾಧವನ್ ಟ್ವಿಟ್ಟರ್ ನಲ್ಲಿಯೂ ಹಾಕಿದ್ದರು. ಈ ಬಗ್ಗೆ ಹರಿದುಬಂದ ಕಾಮೆಂಟುಗಳಿಗೆ ಮಾಧವನ್ ತನ್ನದೇ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ತಾನು ಹಾಕಿದ ಟ್ವೀಟಿಗೆ, ಅವರ ಹಿಂಬಾಲಕರೊಬ್ಬರು ಜಾತಿಯ ಬಣ್ಣ ಲೇಪಿಸುತ್ತಿದ್ದಂತೇ, ಖಡಕ್ ಉತ್ತರ ನೀಡಿದ ಮಾಧವನ್, "ನಿಮ್ಮ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದಷ್ಟು ಬೇಗ ನೀವೆಲ್ಲಾ ಸುಧಾರಿಸಿಕೊಳ್ಳುತ್ತೀರಿ ಎಂದು ಅಂದುಕೊಂಡಿದ್ದೇನೆ" ಎಂದು ಉತ್ತರ ನೀಡಿದ್ದಾರೆ.

ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ zomato ಕೊಟ್ಟ ಉತ್ತರಕ್ಕೆ ಫಿದಾ ಆಗಲೇಬೇಕು! ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ zomato ಕೊಟ್ಟ ಉತ್ತರಕ್ಕೆ ಫಿದಾ ಆಗಲೇಬೇಕು!

ರಕ್ಷಾಬಂಧನದ ದಿನದಂದು ಉಪಕರ್ಮವನ್ನೂ ಆಚರಿಸಲಾಗಿತ್ತು. ಬ್ರಾಹ್ಮಣ ಸಮುದಾಯದವರು ಅಂದು ಜನಿವಾರ ಬದಲಾಯಿಸಿಕೊಳ್ಳುವ ಪದ್ದತಿಯಿದೆ. ಮಾಧವನ್, ತನ್ನ ಮಗ ಮತ್ತು ತಂದೆಯ ಜೊತೆಗೆ ಜನಿವಾರ ಧರಿಸಿಕೊಂಡಿರುವ ಫೋಟೋ ಮತ್ತು ಕೈಗೆ ರಾಖಿ ಕಟ್ಟಿಕೊಳ್ಳುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

ಜನಿವಾರ ಹಾಕಿದ ಫೋಟೋದಲ್ಲಿ ಅವರ ಮನೆಯಲ್ಲಿರುವ ಏಸುವಿನ ಶಿಲುಬೆಯೂ ಕಾಣಿಸುತ್ತಿತ್ತು. ಬ್ರಾಹ್ಮಣರಾದ ನಿಮ್ಮ ಮನೆಯಲ್ಲಿ ಶಿಲುಬೆ ಏಕೆ ಎನ್ನುವ ಪ್ರಶ್ನೆಯನ್ನು ಮಾಧವನ್, ಫಾಲೋವರ್ಸ್ ಒಬ್ಬರು ಎತ್ತಿದ್ದರು. ಅದಕ್ಕೆ, ಮಾಧವನ್ ನೀಡಿದ ಉತ್ತರ ಹೀಗಿತ್ತು:

ನೀವು ಒಬ್ಬ ಹಿಂದೂ ಎಂದ ಮೇಲೆ ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಶಿಲುಬೆಯಾಕೆ

ನೀವು ಒಬ್ಬ ಹಿಂದೂ ಎಂದ ಮೇಲೆ ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಶಿಲುಬೆಯಾಕೆ

"ನೀವು ಒಬ್ಬ ಬ್ರಾಹ್ಮಣರು. ಹಿಂದೂ ಎಂದ ಮೇಲೆ ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಶಿಲುಬೆಯಾಕಿದೆ. ಚರ್ಚ್​ಗಳಲ್ಲಿ ಹಿಂದೂ ದೇವರ ಮೂರ್ತಿಯಾಗಲೀ, ಫೋಟೋ ಇರುವುದಾ. ನಿಮ್ಮ ಮೇಲಿನ ಗೌರವ ಕಳೆದುಹೋಯಿತು. ನಕಲಿ ಮುಖವನ್ನೇಕೆ ತೋರಿಸುತ್ತೀರಿ, ನಾಟಕ ಯಾಕೆ ಮಾಡುತ್ತೀರಿ" ಎಂದು ಮಾಧವನ್​ ಪೋಸ್ಟಿಗೆ ಅವರ ಫಾಲೋವರ್ಸ್ ಒಬ್ಬರು ಕಾಮೆಂಟ್ ಹಾಕಿದ್ದರು.

ಖಾರವಾಗಿ ಉತ್ತರಿಸಿದ ಮಾಧವನ್

ಖಾರವಾಗಿ ಉತ್ತರಿಸಿದ ಮಾಧವನ್

ಇದಕ್ಕೆ ಖಾರವಾಗಿ ಉತ್ತರಿಸಿದ ಮಾಧವನ್, "ನಿಮ್ಮಂತವರಿಂದ ಗೌರವ ತೆಗೆದುಕೊಳ್ಳಬೇಕೆಂದು ನನಗನಿಸುವುದಿಲ್ಲ. ನನ್ನ ಮನೆಯಲ್ಲಿರುವವರು ಎಲ್ಲಾ ಧರ್ಮದ ಮೇಲೆ ನಂಬಿಕೆಯನ್ನು ಇಟ್ಟವರು. ಎಲ್ಲಾ ಜಾತಿಧರ್ಮದ ಮೇಲೆ ಗೌರವವಿದೆ. ನಿಮ್ಮ ರೋಗಗ್ರಸ್ತ ಮನಸ್ಥಿತಿಗೆ ಶೀಘ್ರವೇ ಪರಿಹಾರ ಸಿಗಲಿ" ಎಂದು ಮಾಧವನ್ ಖಡಕ್ ಆಗಿ ಉತ್ತರಿಸಿದ್ದರು.

ಮುಸ್ಲಿಂ ಶಾಸಕನಿಗೆ ರಾಮಜಪ ಮಾಡಲು ಒತ್ತಾಯಿಸಿದ ಬಿಜೆಪಿ ಸಚಿವಮುಸ್ಲಿಂ ಶಾಸಕನಿಗೆ ರಾಮಜಪ ಮಾಡಲು ಒತ್ತಾಯಿಸಿದ ಬಿಜೆಪಿ ಸಚಿವ

ದರ್ಗಾಕ್ಕೂ ಹೋಗುತ್ತೇನೆ, ಚರ್ಚಿಗೂ ಹೋಗುತ್ತೇನೆ

ದರ್ಗಾಕ್ಕೂ ಹೋಗುತ್ತೇನೆ, ಚರ್ಚಿಗೂ ಹೋಗುತ್ತೇನೆ

"ನಾನು ದರ್ಗಾಕ್ಕೂ ಹೋಗುತ್ತೇನೆ, ಚರ್ಚಿಗೂ ಹೋಗುತ್ತೇನೆ, ಗುರುದ್ವಾರಕ್ಕೂ ಹೋಗುತ್ತೇನೆ. ನನ್ನ ಪೂಜಾ ಕೋಣೆಯಲ್ಲಿ ಗೋಲ್ಡನ್ ಟೆಂಪಲ್ ಕೂಡಾ ಇದೆ. ಅದನ್ನು ನೋಡಿ ಸಿಖ್ ಧರ್ಮಕ್ಕೆ ಮತಾಂತರಗೊಂಡಿದ್ದೀರಾ ಎನ್ನುವ ಪ್ರಶ್ನೆಯನ್ನು ಮಾಡುತ್ತಿದ್ದಿರೇನೋ" ಎಂದು ಮಾಧವನ್, ಪ್ರತ್ಯುತ್ತರ ನೀಡಿದ್ದಾರೆ.

ಎಲ್ಲಾ ಜಾತಿಯನ್ನು, ಧರ್ಮವನ್ನು ಗೌರವಿಸಬೇಕು

" ಎಲ್ಲಾ ಜಾತಿಯನ್ನು, ಧರ್ಮವನ್ನು ಗೌರವಿಸಬೇಕು ಎಂದು ನನ್ನ ಹಿರಿಯರಿಗೆ ನನಗೆ ಕಲಿಸಿ ಕೊಟ್ಟಿದ್ದು. ವಿಶ್ವದ ಎಲ್ಲಾ ಜಾತಿಧರ್ಮಗಳ ಆಶೀರ್ವಾದ ನನ್ನ ಮೇಲಿದೆ" ಎಂದು ಮಾಧವನ್ ಖಾರವಾಗಿ, ತನ್ನ ಹಿಂಬಾಲಕರಿಗೆ ತಿರುಗೇಟು ನೀಡಿದ್ದಾರೆ.

ನರೇಂದ್ರ ಮೋದಿಯವರನ್ನು ಬೆಂಬಲಿಸಿ ಎಂದು ಮಾಧವನ್ ಟ್ವೀಟ್

ನರೇಂದ್ರ ಮೋದಿಯವರನ್ನು ಬೆಂಬಲಿಸಿ ಎಂದು ಮಾಧವನ್ ಟ್ವೀಟ್

ಒಟ್ಟಿನಲ್ಲಿ ಮಾಧವನ್ ಮಾಡಿರುವ ಟ್ವೀಟ್ ಭಾರೀ ಸದ್ದನ್ನು ಮಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಎಂದು ಮಾಧವನ್ ಮಾಡಿದ್ದ ಟ್ವೀಟ್ ಭಾರೀ ಚರ್ಚೆಗೊಳಗಾಗಿತ್ತು.

English summary
Actor Madhavan Came Up With Terrific Reply Who Questioned Jesus Cross In His Residence.His follower questioned him, Why do they have a cross in the background?! Is that a Mandir?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X