ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಮಾತ್ರ ಚೆನ್ನೈ ನಗರವನ್ನು ಉಳಿಸಬಲ್ಲದು: ಬರಕ್ಕೆ ಮಿಡಿದ ಹಾಲಿವುಡ್ ನಟ ಡಿಕಾಪ್ರಿಯೋ

|
Google Oneindia Kannada News

ನವದೆಹಲಿ, ಜೂನ್ 26: ನೀರಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಚೆನ್ನೈ ನಗರದ ಪರಿಸ್ಥಿತಿ ಹಾಲಿವುಡ್ ನಟ, ಲಿಯನಾರ್ಡೊ ಡಿಕಾಪ್ರಿಯೋ ಅವರ ಗಮನ ಸೆಳೆದಿದ್ದಾರೆ. ಈ ಬರಗಾಲದ ಸನ್ನಿವೇಶ ಕಂಡು ಡಿಕಾಪ್ರಿಯೋ ಮರುಗಿದ್ದಾರೆ.

ಆಸ್ಕರ್ ವಿಜೇತ ನಟ ಡಿಕಾಪ್ರಿಯೋ ಪರಿಸರವಾದಿ ಕೂಡ ಹೌದು. ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಚೆನ್ನೈ ನೀರಿನ ಬವಣೆಗೆ ಪ್ರತಿಕ್ರಿಯಿಸಿದ್ದಾರೆ.

ಚೆನ್ನೈನಲ್ಲಿ ಹನಿ ನೀರಿಗೂ ಪರದಾಟ: ಐಟಿ ಕ್ಷೇತ್ರ ಕಂಗಾಲುಚೆನ್ನೈನಲ್ಲಿ ಹನಿ ನೀರಿಗೂ ಪರದಾಟ: ಐಟಿ ಕ್ಷೇತ್ರ ಕಂಗಾಲು

ಈ ಪರಿಸ್ಥಿತಿಯಿಂದ ಮಳೆ ಮಾತ್ರ ಚೆನ್ನೈಅನ್ನು ಕಾಪಾಡಬಲ್ಲದು ಎಂದು ಡಿಕಾಪ್ರಿಯೋ ಹೇಳಿದ್ದಾರೆ. 'ಒಂದು ಬಾವಿ ಸಂಪೂರ್ಣ ಒಣಗಿದೆ. ಒಂದು ನಗರ ನೀರಲ್ಲದೆ ಇದೆ' ಎಂದು ಮಹಿಳೆಯೊಬ್ಬರು ಬಾವಿಯೊಳಗಿಂದ ನೀರು ಸೇದಲು ಪ್ರಯತ್ನಿಸುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ.

actor leonardo dicaprio chennai water crisis

ಲಕ್ಷಾಂತರ ಲೀಟರ್ ನೀರು ಆಫರ್ ತಿರಸ್ಕರಿಸಿದ ತಮಿಳುನಾಡುಲಕ್ಷಾಂತರ ಲೀಟರ್ ನೀರು ಆಫರ್ ತಿರಸ್ಕರಿಸಿದ ತಮಿಳುನಾಡು

ದಕ್ಷಿಣ ಭಾರತದ ನಗರ ಚೆನ್ನೈ ಬಿಕ್ಕಟ್ಟಿನಲ್ಲಿದೆ. ಅದರ ನಾಲ್ಕು ಪ್ರಮುಖ ಜಲಾಶಯಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ನೀರಿನ ತೀವ್ರ ಕೊರತೆಗೆ ಸಿಲುಕಿರುವ ನಗರ ತುರ್ತು ಪರಿಹಾರಗಳಿಗೆ ನೋಡುತ್ತಿದೆ. ಸರ್ಕಾರಿ ಟ್ಯಾಂಕ್‌ಗಳಿಂದ ಸಿಗುವ ನೀರಿಗೆ ನಿವಾಸಿಗಳು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಚೆನ್ನೈನಲ್ಲಿ 'ನೀರಿಗಾಗಿ ಯುದ್ಧ' ಬಿಸಿಲಿನ ಬೇಗೆ, ಆತಂಕದಲ್ಲಿ ಜನತೆಚೆನ್ನೈನಲ್ಲಿ 'ನೀರಿಗಾಗಿ ಯುದ್ಧ' ಬಿಸಿಲಿನ ಬೇಗೆ, ಆತಂಕದಲ್ಲಿ ಜನತೆ

ನೀರಿನ ಮಟ್ಟ ಕುಸಿಯುತ್ತಿದ್ದಂತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ತಾತ್ಕಾಲಿಕವಾಗಿ ಮುಚ್ಚಲು ಆರಂಭಿಸಿದ್ದವು. ನಗರದ ಮೆಟ್ರೋದಲ್ಲಿ ಎಸಿಯನ್ನು ಬಂದ್ ಮಾಡಲಾಗಿದೆ. ನೀರಿನ ಪರ್ಯಾಯ ಮೂಲಗಳಿಗೆ ಹುಡುಕಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ, ಜನ ಸಮುದಾಯ ಮಳೆಗಾಗಿ ಪ್ರಾರ್ಥಿಸುತ್ತಿದೆ ಎಂದು ಅವರು ಬರೆದಿದ್ದಾರೆ.

English summary
Hollywood actor Leonardo Dicaprio said in his instagram post that, only rain can save Chennai from this situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X