ಬಂಧನ ಭೀತಿ, ನಟ ದಿಲೀಪ್ ಪತ್ನಿ ಕಾವ್ಯಾ ನಿರೀಕ್ಷಣಾ ಜಾಮೀನಿಗೆ ಅರ್ಜಿ

Posted By:
Subscribe to Oneindia Kannada

ನಟಿ ಹಾಗೂ ಮಲಯಾಳಂ ನಟ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ನಿರೀಕ್ಷಣಾ ಜಾಮೀನಿಗಾಗಿ ಕೇರಳ ಹೈ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಾರೆ. ಬಹುಭಾಷಾ ನಟಿಯ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ದಿಲೀಪ್ ನನ್ನು ಬಂಧಿಸಿದ್ದು, ಅದೇ ವಿಚಾರವಾಗಿ ತನಿಖಾ ತಂಡವು ಕಾವ್ಯಾರನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಸುಳಿವಿನ ಮೇರೆಗೆ ಜಾಮೀನಿಗೆ ಅರ್ಜಿ ಹಾಕಿಕೊಂಡಿದ್ದಾರೆ.

ಈ ಮುಂಚೆ ಪೊಲೀಸರು ಕಾವ್ಯಾರ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಆಕೆ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ಕಾವ್ಯಾಗೆ ಈ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಚಾಲಕನಾಗಿದ್ದ ಎಂದು ಪೊಲೀಸರು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂಬುದು ಆಕೆಯ ಆರೋಪವಾಗಿದೆ.

ಜಾಮೀನು ನಿರಾಕರಿಸಿದ ಕೋರ್ಟ್, ನಟ ದಿಲೀಪ್​ಗೆ ಜೈಲೇ ಗತಿ

ಪಲ್ಸರ್ ಸುನಿಯ ಹೇಳಿಕೆ ಆಧಾರದಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಆದರೆ ತನಿಖಾ ತಂಡವು ಪಲ್ಸರ್ ಸುನಿಯ ಹೇಳಿಕೆಗಳನ್ನು ತಿರುಚಿ, ಹಲವು ಕಥೆಗಳನ್ನು ಸೃಷ್ಟಿಸಿದೆ. ಅದನ್ನೇ ಮುಂದು ಮಾಡಿಕೊಂಡು ನನ್ನನ್ನು ಬಂಧಿಸಲು ಮುಂದಾಗುತ್ತಿದ್ದಾರೆ ಎಂದು ನಟ ದಿಲೀಪ್ ರ ಪತ್ನಿ ಕಾವ್ಯಾ ಮಾಧವನ್ ಆರೋಪಿಸಿದ್ದಾರೆ.

ಮೂರು ಬಾರಿ ದಿಲೀಪ್ ಜಾಮೀನು ಅರ್ಜಿ ತಿರಸ್ಕೃತ

ಮೂರು ಬಾರಿ ದಿಲೀಪ್ ಜಾಮೀನು ಅರ್ಜಿ ತಿರಸ್ಕೃತ

ಇನ್ನು ನಟ ದಿಲೀಪ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನಿಗಾಗಿ ಆತ ಮೂರು ಬಾರಿ ಅರ್ಜಿ ಹಾಕಿಕೊಂಡಾಗಲೂ ಕೋರ್ಟ್ ನಿರಾಕರಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಬಹುಭಾಷಾ ನಟಿಯ ಅಪಹರಣ ಹಾಗೂ ದೌರ್ಜನ್ಯ ಪ್ರಕರಣ ಮಾಸ್ಟರ್ ಮೈಂಡ್ ನಟ ದಿಲೀಪ್ ಎಂಬ ಆರೋಪವಿದೆ.

ಕಾವ್ಯಾ ಮಾಧವನ್ ಕಚೇರಿ ಮೇಲೂ ದಾಳಿ

ಕಾವ್ಯಾ ಮಾಧವನ್ ಕಚೇರಿ ಮೇಲೂ ದಾಳಿ

ದಿಲೀಪ್ ಬಂಧನದ ನಂತರ ಆತನ ಪತ್ನಿ ಕಾವ್ಯಾ ಮಾಧವನ್ ಗೆ ಸೇರಿದ ಆನ್ ಲೈನ್ ಬೋಟಿಕ್ ಮೇಲೂ ಪೊಲೀಸರು ಕಳೆದ ಮೇ ಕೊನೆಗೆ ದಾಳಿ ಮಾಡಿದ್ದರು. ಕಕ್ಕನಾಡಿನಲ್ಲಿರುವ ಕಾವ್ಯಾ ಮಾಧವನ್ ಗೆ ಸೇರಿದ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿ ಬಹುಭಾಷಾ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಡಿಯೋಗಾಗಿ ಹುಡುಕಾಟ ನಡೆಸಿದ್ದರು.

ಮಲಯಾಳಂ ನಟಿ ದೌರ್ಜನ್ಯದ ವಿಡಿಯೋ ಕಾವ್ಯಾ ಬಳಿ?

ಪಲ್ಸರ್ ಸುನಿಯಿಂದ ಹಣ ಪಡೆದ ಪ್ರಸ್ತಾವ

ಪಲ್ಸರ್ ಸುನಿಯಿಂದ ಹಣ ಪಡೆದ ಪ್ರಸ್ತಾವ

ಅಪಹರಣ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಕಕ್ಕನಾಡ್ ನಲ್ಲಿರುವ ಈ ಬೋಟಿಕ್ ಗೆ ಭೇಟಿ ನೀಡಿದ್ದ. ಅದರೆ ಪೊಲೀಸರಿಗೆ ಯಾವುದೇ ಮೆಮೋರಿ ಕಾರ್ಡ್ ದೊರೆತಿರಲಿಲ್ಲ. ಈ ಪ್ರಕರಣದಲ್ಲಿ ಪಲ್ಸರ್ ಸುನಿ "ಮೇಡಂ' ಎಂದು ಹಲವು ಬಾರಿ ಪ್ರಸ್ತಾವ ಮಾಡಿದ್ದಾನೆ. ಆಕೆ ತನಗೆ ಹಣ ನೀಡಿದ್ದಾಗಿಯೂ, ಆದರೆ ಈ ಪ್ರಕರಣದಲ್ಲಿ ಆಕೆಯದೇನೂ ಮಹತ್ವದ ಪಾತ್ರ ಇಲ್ಲ ಅಂತಲೂ ತಿಳಿಸಿದ್ದಾನೆ.

ಮೇಡಂ ಅಂದರೆ ಕಾವ್ಯಾ ಮಾಧವನ್

ಮೇಡಂ ಅಂದರೆ ಕಾವ್ಯಾ ಮಾಧವನ್

ಆ ನಂತರ ತಾನು ಮೇಡಂ ಎಂದು ಹೇಳುತ್ತಿದ್ದದ್ದು ಕಾವ್ಯಾ ಮಾಧವನ್ ಬಗ್ಗೆಯೇ ಎಂದು ಕೂಡ ಪಲ್ಸರ್ ಸುನಿ ಆಗಸ್ಟ್ ನಲ್ಲಿ ಹೇಳಿದ್ದ. ದಿಲೀಪ್ ನ ನಾಲ್ಕನೇ ಜಾಮೀನು ಅರ್ಜಿಯು ಶನಿವಾರ ಕೋರ್ಟ್ ಮುಂದೆ ಬಂದಿದೆ.

ಕಾವ್ಯಾನೇ ನನ್ನ 'ಮೇಡಂ' ಅಂದ ಸುನಿ ಹಾಕಿದ ಬಾಂಬ್!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Kavya Madhavan, who is married to Dileep, has applied for anticipatory bail to the Kerala High Court. Kavya has reportedly approached the court because the team investigating the Malayalam actor abduction and assault case has plans of arresting her.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ