ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಮತ್ತೆ ದಶಲಕ್ಷ ದಾಟಿದ ಕೊರೊನಾ ಸಕ್ರಿಯ ಪ್ರಕರಣ

|
Google Oneindia Kannada News

ನವದೆಹಲಿ, ಏಪ್ರಿಲ್ 10: ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದ್ದು, ಫೆಬ್ರವರಿ ನಂತರ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕೆಲವು ವಾರಗಳಿಂದೀಚೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ದಶಲಕ್ಷದ ಗಡಿ ದಾಟಿದೆ.

ಶುಕ್ರವಾರ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಏಳು ತಿಂಗಳ ನಂತರ ಒಂದು ಮಿಲಿಯನ್ ಗಡಿಯನ್ನು ದಾಟಿದೆ. ಗುರುವಾರ ರಾತ್ರಿಯವರೆಗೂ, ದೇಶದಲ್ಲಿ ಒಟ್ಟಾರೆ 1,046,303 ಸಕ್ರಿಯ ಪ್ರಕರಣಗಳು ದಾಖಲಾಗಿದ್ದವು. ಕಳೆದ ಮಾರ್ಚ್‌ನಿಂದಲೂ ಇದೇ ಮೊದಲ ಬಾರಿ ದಾಖಲೆಯ ಏರಿಕೆ ಕಂಡಿದೆ.

Active Cases Hit One Million First Time Since Last September

ಕಳೆದ ಹತ್ತು ದಿನಗಳಿಂದ ಸಕ್ರಿಯ ಪ್ರಕರಣಗಳಲ್ಲಿ ಶೇ 47ರಷ್ಟು ಏರಿಕೆಯಾಗಿದೆ. ಕಳೆದ ವಾರವೊಂದರಲ್ಲೇ ದೇಶದಲ್ಲಿ 55,205 ಪ್ರಕರಣಗಳು ಸಕ್ರಿಯ ಕೊರೊನಾ ಪ್ರಕರಣಗಳಿಗೆ ಸೇರ್ಪಡೆಯಾಗಿವೆ. ಶುಕ್ರವಾರ ಸಕ್ರಿಯ ಪ್ರಕರಣಗಳಲ್ಲಿ ಮತ್ತೊಂದು ದಾಖಲೆಯ ಏರಿಕೆಯಾಗಿದೆ. ಭಾರತದ ಒಟ್ಟಾರೆ ಕೊರೊನಾ ಪ್ರಕರಣಳು 13.2 ಮಿಲಿಯನ್ ದಾಟಿದ್ದು, ಅಮೆರಿಕ, ಬ್ರೆಜಿಲ್ ನಂತರ ಅತಿ ಹೆಚ್ಚು ಪ್ರಕರಣ ದಾಖಲಾಗಿರುವ ದೇಶ ಭಾರತ ಎನಿಸಿಕೊಂಡಿದೆ.

ಕೊವಿಡ್ 19: ಏಪ್ರಿಲ್ 9ರಂದು ವಿಶ್ವದಲ್ಲಿ ಎಷ್ಟು ಮಂದಿಗೆ ಸೋಂಕು?ಕೊವಿಡ್ 19: ಏಪ್ರಿಲ್ 9ರಂದು ವಿಶ್ವದಲ್ಲಿ ಎಷ್ಟು ಮಂದಿಗೆ ಸೋಂಕು?

ಕಳೆದ ಏಳು ದಿನಗಳಲ್ಲಿ ಸರಾಸರಿ 115,948 ಪ್ರಕರಣಗಳಿದ್ದು, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ದೇಶ ಎಂದು ಎನಿಸಿಕೊಂಡಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಒಂದು ಮಿಲಿಯನ್ ಸಕ್ರಿಯ ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಆನಂತರ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಆರು ತಿಂಗಳಿನಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿತ್ತು ಇದೀಗ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಈ ಮುಂಚಿನ ಎಲ್ಲಾ ದಾಖಲೆಗಳನ್ನು ಅಳಿಸಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಸಕ್ರಿಯ ಪ್ರಕರಣಗಳು ಇದ್ದು, 536,063 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಆನಂತರ ಛತ್ತೀಸ್‌ಗಡ, ಕರ್ನಾಟಕ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳಾಗಿವೆ.

English summary
Active cases hit 1 million first time since September in india. Nearly 47% of the active cases have been added to the country’s tally in the past 10 days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X