• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ 24 ನಕಲಿ ವಿಶ್ವವಿದ್ಯಾಲಯಗಳನ್ನು ಘೋಷಿಸಿದ ಯುಜಿಸಿ

|
Google Oneindia Kannada News

ನವದೆಹಲಿ, ಆಗಸ್ಟ್ 3: ಭಾರತದಲ್ಲಿ ಶಿಕ್ಷಣ ಒದಗಿಸುವ ವಿಶ್ವವಿದ್ಯಾಲಯಗಳೂ ನಕಲಿ ಆಗಿ ಬಿಟ್ಟಿವೆ. ಉನ್ನತ ಶಿಕ್ಷಣ ಪ್ರಾಧಿಕಾರ ಮತ್ತು ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ)ವು ದೇಶದ 24 ನಕಲಿ/ಅನಧಿಕೃತ ವಿಶ್ವವಿದ್ಯಾಲಯನಗಳ ಪಟ್ಟಿಯನ್ನು ಪ್ರಕಟಿಸಿದೆ.

ಭಾರತದ ನಕಲಿ ವಿಶ್ವವಿದ್ಯಾಲಯಗಳ ಬಗ್ಗೆ ಸೋಮವಾರ ಲೋಕಸಭೆಯಲ್ಲಿ ಕೇಂದ್ರ ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಉತ್ತರ ನೀಡಿದರು. "ಈ ನಕಲಿ ವಿದ್ಯಾಸಂಸ್ಥೆಗಳು ಯುಜಿಸಿ ಕಾಯ್ದೆಗಳ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರವನ್ನು ನೀಡುವ ಅಧಿಕಾರ ಇವುಗಳಿಗೆ ಇರುವುದಿಲ್ಲ. ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಅಂದರೆ 8 ಮತ್ತು ನವದೆಹಲಿಯಲ್ಲಿ 7 ನಕಲಿ ವಿಶ್ವವಿದ್ಯಾಲಯಗಳಿವೆ," ಎಂದು ಮಾಹಿತಿ ನೀಡಿದ್ದಾರೆ.

 ಕೋವಿಡ್ ಹೆಚ್ಚಳ: ಯುಜಿಸಿ ನೆಟ್ 2021 ಪರೀಕ್ಷೆ ಮುಂದೂಡಿಕೆ ಕೋವಿಡ್ ಹೆಚ್ಚಳ: ಯುಜಿಸಿ ನೆಟ್ 2021 ಪರೀಕ್ಷೆ ಮುಂದೂಡಿಕೆ

ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಗೂ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಂದ ಬಂದ ದೂರುಗಳ ಆಧಾರದ ಮೇಲೆ ಯುಜಿಸಿ 24 ನಕಲಿ ವಿಶ್ವವಿದ್ಯಾಲಯಗಳನ್ನು ಘೋಷಿಸಿದೆ. ಹೀಗೆ ಮಾನ್ಯತೆ ಇಲ್ಲದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ನೀಡುವ ಪದವಿ ಪ್ರಮಾಣಪತ್ರಕ್ಕೆ ಯಾವುದೇ ಬೆಲೆ ಇರುವುದಿಲ್ಲ.

ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಕಾಯ್ದೆ 1956ರ ಸೆಕ್ಷನ್ 22(1) ರ ಅನ್ವಯ ಮಾನ್ಯತೆ ಪಡೆದ ಕೇಂದ್ರ/ರಾಜ್ಯ/ಸ್ವಯುತ್ತ ಸಂಸ್ಥೆಗಳು ಯುಜಿಸಿ ಕಾಯ್ದೆ ಸೆಕ್ಷನ್ 3 ಅನ್ವಯ ಪದವಿಯನ್ನು ಪ್ರದಾನ ಮಾಡಬಹುದಾಗಿದೆ. ಮಾನ್ಯತೆ ಪಡೆಯದೇ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ನಕಲಿ ವಿವಿಗಳ ಪಟ್ಟಿ ಇಲ್ಲಿದೆ ನೋಡಿ.

ನವದೆಹಲಿ

1) ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ದರಿಯಾಗಂಜ್, ದೆಹಲಿ.

2) ಯುನೈಟೆಡ್ ನೇಶನ್ಸ್ ಯೂನಿವರ್ಸಿಟಿ, ದೆಹಲಿ.

3) ವೋಕೇಶನಲ್ ಯೂನಿವರ್ಸಿಟಿ, ದೆಹಲಿ.

4) ADR- ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ, ರಾಜೇಂದ್ರ ಪ್ಲೇಸ್, ನವದೆಹಲಿ.

5) ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ನವದೆಹಲಿ.

6) ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ ಮೆಂಟ್, ದೆಹಲಿ.

7) ಆಧ್ಯಾತ್ಮಿಕ ವಿಶ್ವವಿದ್ಯಾಲಯ, ವಿಜಯ್ ವಿಹಾರ್, ರೋಹಿಣಿ, ದೆಹಲಿ.

ಕರ್ನಾಟಕ

8) ಬಡಗಾನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಷನ್ ಸೊಸೈಟಿ, ಗೋಕಾಕ್, ಬೆಳಗಾವಿ, ಕರ್ನಾಟಕ.

ಕೇರಳ

9) ಸೇಂಟ್ ಜಾನ್ಸ್ ಯೂನಿವರ್ಸಿಟಿ, ಕಿಶನಟ್ಟಂ, ಕೇರಳ.

ಮಹಾರಾಷ್ಟ್ರ

10) ರಾಜಾ ಅರೇಬಿಕ್ ಯೂನಿವರ್ಸಿಟಿ, ನಾಗ್ಪುರ್, ಮಹಾರಾಷ್ಟ್ರ.

ಪಶ್ಚಿಮ ಬಂಗಾಳ

11) ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಕೋಲ್ಕತ್ತಾ.

12) ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರೀಸರ್ಚ್, ಠಾಕೂರ್ಪುರ್ಕರ್, ಕೋಲ್ಕತ್ತಾ.

ಉತ್ತರ ಪ್ರದೇಶ

13) ವಾರಣಸೇಯ ಸಂಸ್ಕೃತ ವಿಶ್ವವಿದ್ಯಾನಿಲಯ, ವಾರಣಾಸಿ, ಉತ್ತರ ಪ್ರದೇಶ -ದೆಹಲಿ ವಿಭಾಗ.

14) ಮಹಿಳಾ ಗ್ರಾಮ್ ವಿದ್ಯಾಪೀಠ/ವಿಶ್ವವಿದ್ಯಾಲಯ, ಪ್ರಯಾಗ, ಅಲಹಾಬಾದ್, ಉತ್ತರ ಪ್ರದೇಶ.

15) ಗಾಂಧಿ ಹಿಂದಿ ವಿದ್ಯಾಪೀಠ, ಪ್ರಯಾಗ, ಅಲಹಾಬಾದ್, ಉತ್ತರ ಪ್ರದೇಶ.

16) ನೇತಾಜಿ ಸುಭಾಶ್ ಚಂದ್ರ ಬೋಸ್ ಯೂನಿವರ್ಸಿಟಿ (ಓಪನ್ ಯೂನಿವರ್ಸಿಟಿ), ಆಲಿಘರ್, ಉತ್ತರ ಪ್ರದೇಶ.

17) ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ಕಾನ್ಪುರ್, ಉತ್ತರ ಪ್ರದೇಶ.

18) ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಕೋಸಿ ಕಲ್ಯಾಣ್, ಮಥುರಾ, ಉತ್ತರ ಪ್ರದೇಶ.

19) ಮಹಾರಾಣ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವವಿದ್ಯಾಲಯ, ಪ್ರತಾಪ್ ಘರ್, ಉತ್ತರ ಪ್ರದೇಶ.

20) ಇಂದ್ರಪ್ರಸ್ಥ ಶಿಕ್ಷಾ ಪರಿಷದ್, ನೋಯ್ಡಾ, ಉತ್ತರ ಪ್ರದೇಶ. ಒಡಿಶಾ

21) ನಭಭಾರತ್ ಶಿಕ್ಷಾ ಪರಿಷದ್, ಶಕ್ತಿನಗರ್, ರೂರ್ಕೆಲಾ, ಒಡಿಶಾ.

22) ನಾರ್ತ್ ಒರಿಸ್ಸಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ, ಒಡಿಶಾ. ಪಾಂಡಿಚೇರಿ (ಪುದುಚೇರಿ)

23) ಶ್ರೀಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಥಿಲಸ್ ಪೇಠ್, ವಳತ್ತೂರ್ ರಸ್ತೆ, ಪಾಂಡಿಚೇರಿ ಮಹಾರಾಷ್ಟ್ರ

24) ರಾಜಾ ಅರಬೇಕ್ ವಿಶ್ವವಿದ್ಯಾಲಯ, ನಾಗ್ಪುರ್.

English summary
Across India 24 Fake Universities Declared by UGC; Uttar Pradesh Top in This List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X