ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರ ಮನೆಗೆ ಎಲ್ಪಿಜಿ, ಉಜ್ವಲ ಯೋಜನೆಯ ಸಾಧನೆ

ಒಂದು ವರ್ಷದ ಹಿಂದೆ ಆರಂಭವಾದ ಈ ಯೋಜನೆ ಈಗಾಗಲೆ 694 ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ 2.2 ಕೋಟಿಗೂ ಹೆಚ್ಚು ಎಲ್ಪಿಜಿ ಸಂಪರ್ಕಗಳನ್ನು ಒದಗಿಸಿದೆ. ಕಳೆದ ಒಂದು ವರ್ಷದಿಂದ ಎಲ್ಪಿಜಿ ಹೊಂದಿದವರ ಸಂಖ್ಯೆ ಶೇ.10ರಷ್ಟು ಹೆಚ್ಚಾಗಿದೆ.

By ನಿತಿನ್ ಮೆಹ್ತಾ, ಪ್ರಣವ್ ಗುಪ್ತಾ
|
Google Oneindia Kannada News

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಮತ್ತೊಂದು ಯೋಜನೆ. 2016ರಲ್ಲಿ ಆರಂಭಿಸಲಾದ ಯೋಜನೆಯಡಿ, ಮುಂದಿನ ಮೂರು ವರ್ಷಗಳಲ್ಲಿ ಭಾರತದ 5 ಕೋಟಿ ಬಡ ಕುಟುಂಬಗಳಿಗೆ ಎಲ್ಪಿಪಿ ಸಂಪರ್ಕವನ್ನು ದೊರಕಿಸಿಕೊಡುವ ಉದ್ದೇಶ ಹೊಂದಿದೆ. ಇದು ಎಲ್ಲಿಯವರೆಗೆ ಪ್ರಗತಿ ಹೊಂದಿದೆ?

ಉಜ್ವಲ ಏಕೆ ಮಹತ್ವದ್ದು?
ಭಾರತದಲ್ಲಿ ಇಂದು ಕೂಡ ಲಕ್ಷಾಂತರ ಜನರು ದಿನನಿತ್ಯದ ಉರುವಲಿಗೆ ಮತ್ತು ಅಡುಗೆಗೆ ಸೀಮೆಎಣ್ಣೆ, ಕಟ್ಟಿಗೆ, ಕಲ್ಲಿದ್ದಲು, ಬೆರಣಿಯನ್ನು ಅವಲಂಬಿಸಿದ್ದಾರೆ. ಈ ಕಾರಣದಿಂದಾಗಿ ಎಲ್ಪಿಜಿ ಸೌಲಭ್ಯವಂಚಿತ ಜನರಿಗಾಗಿ ಅದನ್ನು ದೊರಕಿಸಿಕೊಡುವ ಈ ಯೋಜನೆ ಭಾರೀ ಮಹತ್ವ ಪಡೆದುಕೊಂಡಿದೆ.[ಲಾರಿ ಮುಷ್ಕರ: ಪೆಟ್ರೋಲ್-ಅಡುಗೆ ಅನಿಲಕ್ಕೂ ತಟ್ಟಲಿದೆಯೇ ಬಿಸಿ?]

ಮೊಟ್ಟಮೊದಲನೆಯದಾಗಿ, ಬಡಜನರು ಇಂದಿಗೂ ಉಪಯೋಗಿಸುವ ಮೇಲಿನ ಸಾಮಗ್ರಿಗಳಿಗಿಂತ ಎಲ್ಪಿಜಿ ದಿನನಿತ್ಯ ಬಳಸಿದರೆ ವಾತಾವರಣ ಹೆಚ್ಚು ಕಲುಷಿತವಾಗದು. ಅಲ್ಲದೆ, ಕಟ್ಟಿಗೆ, ಬೆರಣಿ, ಸೀಮೆಎಣ್ಣೆ ಉರಿಸುವುದರಿಂದ ಹೆಂಗಸು ಮತ್ತು ಮಕ್ಕಳು ಉಸಿರಾಟದ ತೊಂದರೆಗೂ ಒಳಗಾಗುತ್ತಿರುವುದು ಬೆಳಕಿಗೆ ಬಂದಿದೆ. ಇವುಗಳಿಂದ ಹೊರಹೊಮ್ಮುವ ಹೊಗೆ 400 ಸಿಗರೇಟು ಉರಿಸಿದ್ದಕ್ಕೆ ಸಮ ಎಂದು ಅಧ್ಯಯನವೊಂದು ಹೇಳಿದೆ. [ಮೋದಿಯವರ ಮುದ್ರಾ ಯೋಜನೆಯ ಯಶಸ್ಸಿನ ಜಾಡು]

Achieving Universal LPG Coverage? Tracking the Progress of Ujjwala under Modi Government

ಇಂಥ ಬಗೆಯ ಇಂಧನ ಬಳಸುತ್ತಿರುವುದರಿಂದ ಪ್ರತಿವರ್ಷ 5 ಲಕ್ಷ ಹೆಣ್ಣುಮಕ್ಕಳು ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂಕಿಸಂಖ್ಯೆಗಳು ತಿಳಿಸಿವೆ. ಅಡುಗೆ ಅನಿಲ ಬಳಸುವುದರಿಂದ ಮರಣದ ಪ್ರಮಾಣವನ್ನು ತಗ್ಗಿಸಬಹುದು. ಈ ಯೋಜನೆಯಡಿ ಮಹಿಳೆಯರ ಹೆಸರಿನಲ್ಲಿಯೇ ಅಡುಗೆ ಅನಿಲದ ಸಂಪರ್ಕವನ್ನು ನೀಡಲಾಗುತ್ತಿದೆ. ಸಬ್ಸಿಡಿ ಹಣವನ್ನು ಅವರ ಖಾತೆಗೆ ವರ್ಗಾಯಿಸುವುದರಿಂದ ಮಹಿಳೆಯರ ಸಬಲೀಕರಣಕ್ಕೂ ಅನುಕೂಲವಾಗುತ್ತದೆ.

ಈ ಯೋಜನೆ ಎಷ್ಟು ಪ್ರಗತಿ ಸಾಧಿಸಿದೆ?
ಸರಿಯಾಗಿ ಒಂದು ವರ್ಷದ ಹಿಂದೆ ಆರಂಭವಾದ ಈ ಯೋಜನೆ ಈಗಾಗಲೆ 694 ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ 2.2 ಕೋಟಿಗೂ ಹೆಚ್ಚು ಎಲ್ಪಿಜಿ ಸಂಪರ್ಕಗಳನ್ನು ಒದಗಿಸಿದೆ. ಕಳೆದ ಒಂದು ವರ್ಷದಿಂದ ಎಲ್ಪಿಜಿ ಹೊಂದಿದವರ ಸಂಖ್ಯೆ ಶೇ.10ರಷ್ಟು ಹೆಚ್ಚಾಗಿದೆ.[ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ]

ಈಗ ಭಾರತದಲ್ಲಿ 10ರಲ್ಲಿ 7 ಕುಟುಂಬಗಳಲ್ಲಿ ಅಡುಗೆ ಅನಿಲದ ಸಂಪರ್ಕವಿದೆ. ಉಜ್ವಲ ಮತ್ತು ಉಜ್ವಲ ಯೋಜನೆ ಹೊರತುಪಡಿಸಿ 3.25 ಕೋಟಿ ಸಂಪರ್ಕಗಳಿಗೆ 2016-17ರಲ್ಲಿ ನೋಂದಾವಣಿ ಮಾಡಲಾಗಿದೆ. ಇದು ಒಂದು ವರ್ಷದಲ್ಲಿ ಆಗಿರುವ ಹೊಸ ದಾಖಲೆ.

ಕೇಂದ್ರ ಸರಕಾರ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಈ ಯೋಜನೆಯಲ್ಲಿ ದಕ್ಕಿದೆ. ಇದಿಷ್ಟು ಮಾತ್ರವಲ್ಲ, ಯುಪಿಎ ಸರಕಾರದ ರಾಜೀವ್ ಗಾಂಧಿ ಗ್ರಾಮೀಣ ಎಲ್ಪಿಜಿ ವಿತರಣ ಯೋಜನೆಗಿಂತ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ ಎನ್ಡಿಎ ಸರಕಾರ.

ಹಣಕಾಸು ವಿನಿಯೋಗ
ರಾಜೀವ್ ಗಾಂಧಿ ಗ್ರಾಮೀಣ ಎಲ್ಪಿಜಿ ವಿತರಣ ಯೋಜನೆಗೆ ಹಲವಾರು ತೈಲ ಕಂಪನಿಗಳಿಂದ ಹಣಕಾಸು ಹರಿದುಬಂದಿತ್ತು. ಆದರೆ, ಉಜ್ವಲ ಯೋಜನೆಯೊಂದಕ್ಕೇ 8000 ಕೋಟಿ ಅನುದಾನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿಗದಿಪಡಿಸಿದೆ.

ಇದು ಕೇಂದ್ರ ಸರಕಾರದ ಬೊಕ್ಕಸಕ್ಕೆ ಅಂತಹ ಪೆಟ್ಟೇನೂ ನೀಡಿಲ್ಲ. ಏಕೆಂದರೆ, 10 ಲಕ್ಷ ರುಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು ಸ್ವಯಂಪ್ರೇರಿತರಾಗಿ ಸಬ್ಸಿಡಿಯನ್ನು ಬಿಟ್ಟುಕೊಡುವ ಮತ್ತು ಪಹಲ್ ಪ್ರೋಗ್ರಾಂನಿಂದಾಗಿ ಸರಕಾರಕ್ಕೂ ಸಾಕಷ್ಟು ಬಂಡವಾಳ ಹರಿದುಬಂದಿದೆ. ನರೇಂದ್ರ ಮೋದಿಯವರ ಕರೆಗೆ ಸುಮಾರು 1.05 ಕೋಟಿಯಷ್ಟು ಜನರು ಸ್ವಯಂಪ್ರೇರಿತರಾಗಿ ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ.

ಮುಂದಿನ ದಾರಿ ಹೇಗಿದೆ?
ಮೊದಲ ವರ್ಷದಲ್ಲಿ ಉಜ್ವಲ ಯೋಜನೆ ಸಾಕಷ್ಟು ಪ್ರಗತಿ ಕಂಡಿದೆ. ಆದರೆ, ಈ ಯೋಜನೆಯಡಿ ನೋಂದಾಯಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಸರಕಾರಕ್ಕೆ ಮುಂದೆ ಭಾರೀ ಸವಾಲು ಎದುರಾಗಲಿದೆ.

ಆದರೆ, ಇನ್ನೂ ಹಲವಾರು ಬಡ ಕುಟುಂಬಗಳು, ಎಲ್ಪಿಜಿ ಸಂಪರ್ಕವನ್ನು ನೀಡಲಾಗಿದ್ದರೂ, ಅಡುಗೆ ಮತ್ತಿತರ ಕಾರ್ಯಗಳಿಗೆ ಎಲ್ಪಿಜಿ ಬಳಕೆಗಿಂತ ಅಗ್ಗವಾಗಿರುವ ಹಳೆಯ ಉರುವಲುಗಳನ್ನೇ ಬಳಸುತ್ತಿರುವುದು ಸರಕಾರದ ಚಿಂತೆಗೆ ಕಾರಣವಾಗಿದೆ. ಎಲ್ಪಿಜಿ ಸಂಪರ್ಕ ಇನ್ನೂ ಕಡಿಮೆ ದರದಲ್ಲಿ ಜನರಿಗೆ ಸಿಗುವಂತಾಗಬೇಕು.

(ಪ್ರಣವ್ ಗುಪ್ತಾ ಅವರು ಸ್ವತಂತ್ರ ಸಂಶೋದಕರು. ನಿತಿನ್ ಮೆಹ್ತಾ ಅವರು ರಣ್‌ನೀತಿ ಕನ್ಸಲ್ಟಿಂಗ್ ಮತ್ತು ಸಂಶೋಧನೆ ಸಂಸ್ಥೆಯಲ್ಲಿ ಮ್ಯಾನೇಜಿಂಗ್ ಪಾರ್ಟನರ್ ಆಗಿದ್ದಾರೆ.)

{promotion-urls}

English summary
Pradhan Mantri Ujjwala Yojana (PMUY) is one of the flagship programmes of the Modi government. The scheme was launched in May 2016, with the aim of providing 5 crore LPG connections to BPL families over the next three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X