• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಜನಪ್ರಿಯ ಉದ್ಯಮಿ, ಹೂಡಿಕೆದಾರ ರಾಕೇಶ್ ಇನ್ನಿಲ್ಲ

|
Google Oneindia Kannada News

ಮುಂಬೈ, ಆಗಸ್ಟ್ 14: ಭಾರತರ ಪ್ರಮುಖ ಉದ್ಯಮಿ, ಷೇರು ವ್ಯಾಪಾರಿ ಮತ್ತು ಹೂಡಿಕೆದಾರ ರಾಕೇಶ್ ಜುಂಜುನ್ ವಾಲ ನಿಧನರಾಗಿದ್ದಾರೆ. ಅವರಿಗೆ 62ವರ್ಷ ವಯಸ್ಸಾಗಿತ್ತು.

ಜುಲೈ 5, 1960 ರಂದು ಜನಿಸಿದ ಜುಂಜುನ್ ವಾಲ ರಾಜಸ್ಥಾನಿ ಕುಟುಂಬದಲ್ಲಿ ಬೆಳೆದರು, ಜುಂಜುನ್ ವಾಲ ತಂದೆ ಆದಾಯ ತೆರಿಗೆ ಆಯುಕ್ತರಾಗಿದ್ದರುರು. ಅವರು ಸಿಡೆನ್ ಹ್ಯಾಮ್ ಕಾಲೇಜಿನಿಂದ ಪದವಿ ಪಡೆದರು ಮತ್ತು ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಸೇರಿಕೊಂಡರು.

ಜುಂಜುನ್ ವಾಲ ಅಂದಾಜು $5.5 ಶತಕೋಟಿ ನಿವ್ವಳ ಮೌಲ್ಯದ ಆಸ್ತಿ ಹೊಂದಿದ್ದರು (ಜುಲೈ 2022 ರಂತೆ), ಭಾರತದಲ್ಲಿ 36 ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು.

ಸಕ್ರಿಯ ಹೂಡಿಕೆದಾರರಲ್ಲದೆ, ಜುಂಜುನ್‌ವಾಲಾ ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ನ ಅಧ್ಯಕ್ಷರಾಗಿದ್ದರು. ಲಿಮಿಟೆಡ್ ಮತ್ತು ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೋಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಲಿಮಿಟೆಡ್, ಟಾಪ್ಸ್ ಸೆಕ್ಯುರಿಟಿ ಲಿಮಿಟೆಡ್, ನಾಗಾರ್ಜುನಮಿಟ್ ಕಂಪನಿ ಲಿಮಿಟೆಡ್, ನಾಗಾರ್ಜುನಮಿಟ್ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿದೆ.

ಭಾರಿ ಪ್ರಮಾಣದ ಹೂಡಿಕೆ ಹಾಗೂ ತಮ್ಮ ಹೂಡಿಕೆ ಮೂಲಕ ಷೇರುಪೇಟೆಯಲ್ಲಿ ಸಂಚಲನ ಮೂಡಿಸುತ್ತಿದ್ದ ರಾಕೇಶ್ ರನ್ನು "ಬಿಗ್ ಬುಲ್ ಆಫ್ ಇಂಡಿಯಾ" ಮತ್ತು "ಕಿಂಗ್ ಆಫ್ ಬುಲ್ ಮಾರ್ಕೆಟ್" ಎಂದೇ ಮಾರುಕಟ್ಟೆಯಲ್ಲಿ ಕರೆಯಲಾಗುತ್ತಿತ್ತು. ಷೇರು ಮಾರುಕಟ್ಟೆ ಮುನ್ಸೂಚನೆಗಳು ಮತ್ತು ಬುಲಿಶ್ ದೃಷ್ಟಿಕೋನ, ಹೂಡಿಕೆದಾರರಿಗೆ ನೀಡುತ್ತಿದ್ದ ಸಲಹೆಗಳು ಹತ್ತು ಹಲವರ ಬದುಕು, ಸಂಸ್ಥೆಗಳ ಭವಿಷ್ಯ ಬದಲಿಸಿವೆ.

ಆಕಾಶ ಏರ್ ಎಂಬ ಕಡಿಮೆ ಬಜೆಟ್ ಪ್ರಯಾಣದ ವಿಮಾನ ಯಾನ ಸಂಸ್ಥೆಯನ್ನು ರಾಕೇಶ್ ಜುಂಜುನ್‌ವಾಲಾ ಮತ್ತು ಮಾಜಿ ಜೆಟ್ ಏರ್‌ವೇಸ್ ಸಿಇಒ ವಿನಯ್ ದುಬೆ ಸಹ-ಸ್ಥಾಪಿಸಿದರು.ಏರ್‌ಲೈನ್ ಪ್ರಸ್ತುತ 2 ವಿಮಾನಗಳನ್ನು ಹೊಂದಿದ್ದು, 70 ಹೆಚ್ಚಿನ ವಿಮಾನಗಳಿಗೆ ಹೆಚ್ಚುವರಿ ಆದೇಶವನ್ನು ಹೊಂದಿದೆ ಮತ್ತು 9 ಆಗಸ್ಟ್ 2022 ರಂತೆ 3 ನಗರಗಳಿಗೆ ಹಾರಾಟ ಶುರು ಮಾಡಿದೆ.

English summary
Ace investor Rakesh Jhunjhunwala, known as the 'Big Bull' of Dalal Street, has passed away at the age of 62.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X