ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಭಾವನೆಗಳಿಗೆ ಘಾಸಿ ಆರೋಪ: ಉತ್ತರ ಪ್ರದೇಶದಲ್ಲಿ ಹೆಚ್ಚು ಜನರ ಬಂಧನ

|
Google Oneindia Kannada News

ನವದೆಹಲಿ ಆಗಸ್ಟ್ 2: 2020ರಲ್ಲಿ "ಲಿಂಗ, ಜನಾಂಗ, ಜನ್ಮಸ್ಥಳದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ" ಅಪರಾಧಗಳಿಗಾಗಿ ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಜನರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಸಂಸತ್ತಿನಲ್ಲಿ ಗೃಹ ವ್ಯವಹಾರಗಳ ಸಚಿವಾಲಯ (MHA) ಮಂಡಿಸಿದ ದಾಖಲೆ ಬಹಿರಂಗಪಡಿಸಿದೆ.

2020 ರಲ್ಲಿ ಉತ್ತರ ಪ್ರದೇಶದಲ್ಲಿ ಉಲ್ಲೇಖಿಸಲಾದ ಅಪರಾಧಗಳ ಆಧಾರದ ಮೇಲೆ ಒಟ್ಟು 330 ಜನರನ್ನು ಬಂಧಿಸಲಾಗಿದೆ. 176 ಬಂಧನಗಳೊಂದಿಗೆ ತಮಿಳುನಾಡು ಎರಡನೇ ಸ್ಥಾನದಲ್ಲಿದ್ದರೆ, ಅಸ್ಸಾಂ ನಂತರದ ಸ್ಥಾನದಲ್ಲಿದೆ. ಒಡಿಶಾ ಮತ್ತು ಮಿಜೋರಾಂನಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿವೆ.

2018-2020 ರ ಡೇಟಾವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದಾಖಲಿಸಿದೆ. ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಪ್ರಯತ್ನಗಳನ್ನು ಸೂಚಿಸುವ ಪ್ರವೃತ್ತಿಯಲ್ಲಿ ಬಂಧಿಸಲಾಗಿದೆ ಎಂದು ಲೋಕಸಭೆಯಲ್ಲಿ MHA ಹೇಳಿದೆ.

Accused of hurting religious sentiments: Maximum number of people arrested in UP

ಪ್ರವಾದಿ ವಿರುದ್ಧ ಹೇಳಿಕೆ

ಇನ್ನೂ ಇತ್ತೀಚೆಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ವಿರೋಧಿಸಿ ಜೂನ್ 10 ರಂದು ನಡೆದ ಪ್ರತಿಭಟನೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಎಂಟು ಜಿಲ್ಲೆಗಳಿಂದ ಸುಮಾರು 337 ಜನರನ್ನು ಬಂಧಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜಿಲ್ಲೆಗಳಲ್ಲಿ 13 ಎಫ್‌ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಈ 337 ಜನರ ಪೈಕಿ ಪ್ರಯಾಗ್ ರಾಜ್ ನಿಂದ 92, ಶಹರನ್ ಪುರದಿಂದ 83, ಹರ್ತಾಸ್ ನಿಂದ 52, ಅಂಬೇಡ್ಕರ್ ನಗರದಿಂದ 41, ಮೊರಾದಾಬಾದ್ ನಿಂದ 40, ಫಿರೋಜ್ ಬಾದ್ ನಿಂದ 18, ಅಲಿಘಡದಿಂದ ಆರು, ಜಲೌನ್ ನಿಂದ ಐವರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Accused of hurting religious sentiments: Maximum number of people arrested in UP

ಅಗ್ನಿಪಥ್ ಪ್ರತಿಭಟನೆ

ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ 300 ಬಂಧಿಸಲಾಗಿತ್ತು. ಸೇನೆಯಲ್ಲಿ 15 ವರ್ಷ ಸೈನಿಕ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು. - 4 ವರ್ಷದ ಅಗ್ನಿಪಥ ಯೋಜನೆಯ ಘೋಷಣೆ ಸರಿಯಲ್ಲ. - ಕಳೆದ 2 ವರ್ಷಗಳಿಂದ ಸೇನೆಗೆ ಸೈನಿಕರ ನೇಮಕಾತಿಯೇ ನಡೆದಿಲ್ಲ. - ಶೀಘ್ರವಾಗಿ ಹಳೆ ಪದ್ದತಿಯಡಿ ಸೈನಿಕರ ನೇಮಕಾತಿಗೆ ಆಗ್ರಹ. - ಅಗ್ನಿಪಥ ಯೋಜನೆಯಿಂದ ಉಜ್ವಲ ಭವಿಷ್ಯ ಇಲ್ಲ. - ಅಗ್ನಿಪಥ ಯೋಜನೆಯಡಿ ಪಿಂಚಣಿ ವ್ಯವಸ್ಥೆ ಇಲ್ಲ. - ಸೇನೆಯಲ್ಲಿ ನಾಲ್ಕು ‌ವರ್ಷದ ಸೇವೆ ಬಳಿಕ ಮತ್ತೆ ನಿರುದ್ಯೋಗಿಗಳಾಗಬೇಕು. ಇಲ್ಲವೇ ಸೆಕ್ಯೂರಿಟಿ ಗಾರ್ಡ್ ಆಗಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಹೀಗಾಗಿ ಅಗ್ನಿಪಥ ಯೋಜನೆಗೆ ಯುವಕರ ತೀವ್ರ ವಿರೋಧ ಕೇಳಿಬಂದಿದೆ.

English summary
A record tabled by the Ministry of Home Affairs (MHA) in Parliament on Tuesday revealed that maximum number of people were arrested in Uttar Pradesh in 2020 for offenses of "inciting hatred between groups on the basis of sex, race, place of birth".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X