ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಲಸಿಕೆಗಳಿಗೆ ಒಪ್ಪಿಗೆ ನೀಡಿ ಇಲ್ಲವೇ ಕಡ್ಡಾಯ ಕ್ವಾರಂಟೈನ್ ಅನುಭವಿಸಿ; ಭಾರತದ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜುಲೈ 01: ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್, ಕೋವಿಶೀಲ್ಡ್‌ ಲಸಿಕೆಗಳಿಗೆ "ವ್ಯಾಕ್ಸಿನೇಷನ್ ಪಾಸ್‌ಪೋರ್ಟ್" ನೀಡಲು ಯುರೋಪಿಯನ್ ಒಕ್ಕೂಟ ಹಿಂಜರಿಯುತ್ತಿದ್ದು, ಇದಕ್ಕೆ ಭಾರತ ತಿರುಗುತ್ತರ ನೀಡಿದೆ.

Recommended Video

ಭಾರತೀಯ ಲಸಿಕೆಗಳಿಗೆ ಯೂರೋಪ್ ರಾಷ್ಟ್ರಗಳಲ್ಲಿ ಅನುಮೋದನೆ ಇಲ್ಲ | Oneindia Kannada

ಯುರೋಪ್ ದೇಶಗಳಿಂದ ಬರುವವರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡುವ ವಿಷಯದಲ್ಲಿ ಭಾರತ ಕೂಡ ಇದೇ ನೀತಿ ಅನುಸರಿಸಲು ಪ್ರಾರಂಭಿಸುತ್ತದೆ ಎಂದು ಹೇಳಿರುವುದಾಗಿ ವಿದೇಶಾಂಗ ಸಚಿವಾಲಯ ಮೂಲಗಳು ತಿಳಿಸಿವೆ.

ಯುರೋಪಿಯನ್ ಒಕ್ಕೂಟಗಳು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ ಪ್ರಮಾಣಪತ್ರಗಳನ್ನು ಸ್ವೀಕರಿಸಿದ ಹೊರತು, ಯುರೋಪಿಯನ್ ಒಕ್ಕೂಟದ ಜನರು ಭಾರತಕ್ಕೆ ಬಂದರೆ ಅವರಿಗೂ ಕಡ್ಡಾಯವಾಗಿ ಕ್ವಾರಂಟೈನ್ ವಿಧಿಸಲಾಗುವುದು ಎಂದು ಎಚ್ಚರಿಸಿರುವುದಾಗಿ ತಿಳಿದುಬಂದಿದೆ.

Accept Indian Vaccines Or Face Mandatory Quarantine India Tells EU

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯು ಡಿಜಿಟಲ್ ಕೋವಿಡ್ ಪ್ರಮಾಣಪತ್ರ ಹೊಂದಿರಬೇಕು ಎಂದಿರುವ ಯುರೋಪಿಯನ್ ಒಕ್ಕೂಟಗಳು, ಹೊಸ "ಗ್ರೀನ್ ಪಾಸ್" ಯೋಜನೆಯಡಿ ಕೋವಿಶೀಲ್ಡ್ ಲಸಿಕೆ ಪಡೆದ ಜನರಿಗೆ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಿಸಲು ಅನುಮತಿ ನೀಡಿಲ್ಲ.

ಯುರೋಪಿಯನ್ ಮೆಡಿಸನ್ಸ್ ಏಜೆನ್ಸಿ ಅನುಮೋದಿಸಿದ ಲಸಿಕೆಗಳಿಗೆ ಮಾತ್ರ ಅಲ್ಲಿ ವ್ಯಾಕ್ಸಿನ್ ಪಾಸ್‌ಪೋರ್ಟ್‌ ನೀಡಲಾಗಿದೆ. ಫೈಜರ್, ಮಾಡೆರ್ನಾ, ಆಸ್ಟ್ರಾಜೆನೆಕಾ ಹಾಗೂ ಜಾನ್ಸನ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆದರೆ ಆಸ್ಟ್ರಾಜೆನೆಕಾದ ಭಾರತೀಯ ಆವೃತ್ತಿಯಾಗಿರುವ ಕೋವಿಶೀಲ್ಡ್‌ಗೂ ಅನುಮತಿ ನೀಡಿಲ್ಲ.

ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ನೇರವಾಗಿ ಲಸಿಕೆ ಖರೀದಿಸುವಂತಿಲ್ಲಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ನೇರವಾಗಿ ಲಸಿಕೆ ಖರೀದಿಸುವಂತಿಲ್ಲ

ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಇಯು ಉನ್ನತ ಅಧಿಕಾರಿಗಳೊಂದಿಗೆ ಕೋವಿಶೀಲ್ಡ್ ಲಸಿಕೆಯನ್ನು ವ್ಯಾಕ್ಸಿನೇಷನ್ ಪಾಸ್‌ಪೋರ್ಟ್‌ಗೆ ಸೇರಿಸುವ ವಿಷಯದ ಕುರಿತು ಪ್ರಸ್ತಾಪಿಸುವುದಾಗಿ ತಿಳಿಸಿದ್ದರು. ಲಸಿಕೆಗೆ ಅನುಮತಿ ನೀಡುವ ಕುರಿತು ಚರ್ಚಿಸಲಾಗಿದೆ. ಯುರೋಪಿಗೆ ಪ್ರಯಾಣಿಸಲು ಕೋವಿಶೀಲ್ಡ್ ಅನುಮತಿ ಪಡೆಯಲಿದೆ ಎಂದು ಟ್ವೀಟ್ ಮಾಡಿದ್ದರು.

ಇಎಂಎ ಅನುಮೋದನೆ ಇಲ್ಲದೇ ಕೋವಿಶೀಲ್ಡ್ ಆಮದು ಮಾಡಿಕೊಳ್ಳುವ ರಾಷ್ಟ್ರಗಳು ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭಾರತದ ಕೋವ್ಯಾಕ್ಸಿನ್ ಕೂಡ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆಗಾಗಿ ಕಾಯುತ್ತಿದೆ.

English summary
European Union's reluctance in accepting Indian-made vaccines for its 'vaccination passport' has triggered a face-off with india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X