ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಜಿ ಇಂದಿರಾ ಗಾಂಧಿ ಹೇರಿದ್ದ 'ತುರ್ತು ಪರಿಸ್ಥಿತಿ' ಖಂಡಿತವಾಗಿಯೂ ತಪ್ಪು ಎಂದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ,ಮಾರ್ಚ್ 03: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅಂದು ಹೇರಿದ್ದ 'ತುರ್ತು ಪರಿಸ್ಥಿತಿ' ತಪ್ಪು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತುರ್ತುಪರಿಸ್ಥಿತಿ ಜಾರಿಗೆ ತಂದಿದ್ದು ನಿಜವಾಗಿಯೂ ತಪ್ಪು. ನನ್ನ ಅಜ್ಜಿ ಆ ರೀತಿಯಲ್ಲಿ ಮಾಡಬಾರದಿತ್ತು ಎಂದು ಹೇಳಿದರು.

ಇಂದಿರಾ ಗಾಂಧಿ ಮಾಡಿದ 'ಆ ಎರಡು ಗಂಭೀರ ತಪ್ಪುಗಳು' ಯಾವುದು?ಇಂದಿರಾ ಗಾಂಧಿ ಮಾಡಿದ 'ಆ ಎರಡು ಗಂಭೀರ ತಪ್ಪುಗಳು' ಯಾವುದು?

ಕಾಂಗ್ರೆಸ್ ಯಾವುದೇ ಸಮಯದಲ್ಲಿ ದೇಶದ ಸಾಂಸ್ಥಿಕ ಚೌಕಟ್ಟನ್ನು ಸೆರೆ ಹಿಡಿಯಲು ಪ್ರಯತ್ನಿಸಲಿಲ್ಲ. ಆ ಅವಧಿಯಲ್ಲಿ ಏನಾಯಿತು ಎಂಬುದು ತಪ್ಪು. ಆದರೆ, ಅದು ಪ್ರಸ್ತುತ ಸನ್ನಿವೇಶಕ್ಕಿಂತ ಭಿನ್ನವಾಗಿತ್ತು ಎಂದರು.

Rahul Gandhi

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಅದು ನನಗೆ ಹಿಂಸೆಯನ್ನು ಅರ್ಥಮಾಡಿಕೊಟ್ಟಿದೆ ಎಂದರು.

ಇಂದಿರಾ ಗಾಂಧಿಯವರು ಅಂದು 1975 ರಿಂದ 77ರವರೆಗೆ 21 ತಿಂಗಳುಗಳ ಕಾಲ ತುರ್ತು ಪರಿಸ್ಥಿತಿ ಹೇರಿದ್ದರು.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯ ಕೊನೆಯಲ್ಲಿ ಚುನಾವಣೆಗಳನ್ನು ಘೋಷಿಸುವ ಬಗ್ಗೆ ಕೇಳಿದಾಗ ತುರ್ತುಪರಿಸ್ಥಿತಿ ವೇಳೆಯಲ್ಲಿ ಏನಾಯಿತು ಮತ್ತು ಈಗ ಏನಾಗುತ್ತಿದೆ ಎಂಬುದರ ನಡುವೆ ಮೂಲಭೂತ ವ್ಯತ್ಯಾಸವಿದೆ.

ಕಾಂಗ್ರೆಸ್ ಪಕ್ಷ ಯಾವುದೇ ಸಮಯದಲ್ಲಿ ದೇಶದ ಸಾಂಸ್ಥಿಕ ಚೌಕಟ್ಟನ್ನು ಸೆರೆಹಿಡಿಯಲು ಪ್ರಯತ್ನಿಸಲಿಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಆ ಸಾಮರ್ಥ್ಯವೂ ಇಲ್ಲ.

ನಮ್ಮ ಸೈದ್ಧಾಂತಿಕತೆಯೂ ಅದನ್ನು ಅನುಮತಿಸುವುದಿಲ್ಲ ಮತ್ತು ನಾವು ಬಯಸಿದರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಆರ್ ಎಸ್ ಎಸ್ ಮೂಲಭೂತ ವ್ಯತ್ಯಾಸ ತರುವಂತಹ ಕೆಲಸ ಮಾಡುತ್ತಿದೆ. ಅವರ ಜನರನ್ನು ದೇಶದ ಸಾಂಸ್ಥಿಕ ಸಂಸ್ಥೆಗಳಲ್ಲಿ ತುಂಬುತ್ತಿದೆ.

ಆದ್ದರಿಂದ ಬಿಜೆಪಿ ಚುನಾವಣೆಯಲ್ಲಿ ಸೋತರೂ, ಸಾಂಸ್ಥಿಕ ರಚನೆಯಲ್ಲಿ ನಾವು ಅವರ ಜನರನ್ನು ತಡೆಯಲು ಹೋಗುವುದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದರು.

English summary
The Emergency - imposed by the late former Prime Minister Indira Gandhi over 21 months from 1975 to '77 - was a "mistake" and what happened in that period was "wrong", Congress MP Rahul Gandhi said Tuesday in a conversation with renowned economist Kaushik Basu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X