• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಬಿಪಿ ನ್ಯೂಸ್ ಸಮೀಕ್ಷೆ : 3 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ!

|

ನವದೆಹಲಿ, ಅಕ್ಟೋಬರ್ 06 : ಚುನಾವಣಾ ಆಯೋಗ 5 ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟಿಸುತ್ತಿದ್ದಂತೆ ಎಬಿಪಿ ನ್ಯೂಸ್ ನಡೆಸಿರುವ ಸಮೀಕ್ಷೆ ಭಾರತೀಯ ಜನತಾ ಪಕ್ಷಕ್ಕೆ ಅಹಿತಕರ ಸುದ್ದಿಯನ್ನು ನೀಡಿದೆ.

ಅದೇನೆಂದರೆ, ಆಡಳಿತಾರೂಢ ಬಿಜೆಪಿ ಮೂರು ರಾಜ್ಯಗಳಾದ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಅಧಿಕಾರ ಗದ್ದುಗೆಯಿಂದ ಕೆಳಗಿಳಿಯಲಿದ್ದು, ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಎಂಬುದು ಡಿಸೆಂಬರ್ 11ರಂದು ದೊರೆಯಲಿರುವ ಫಲಿತಾಂಶದಲ್ಲಿ ಸಿಗಲಿದೆ.

ಜಾತಕ ವಿಮರ್ಶೆ: ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಮೋದಿಗೆ ಕಷ್ಟ

ರಾಜಸ್ತಾನದಲ್ಲಿ ಕಳೆದ 5 ವರ್ಷಗಳಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಪರಿತಪಿಸುತ್ತಿದ್ದರೆ, ಮಧ್ಯಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರ ಮರಳಿಪಡೆಯಲು ತಹತಹಿಸುತ್ತಿದೆ. ಎಬಿಪಿ ನ್ಯೂಸ್ ನಡೆಸಿರುವ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

5 ರಾಜ್ಯಗಳ ವಿಧಾನಸಭಾ ಚುನಾವಣೆ: ಸವಿವರ ವೇಳಾಪಟ್ಟಿ

ರಾಜಸ್ತಾನದಲ್ಲಿ ಕಾಂಗ್ರೆಸ್ ವಿಜಯದುಂಧುಬಿ

ರಾಜಸ್ತಾನದಲ್ಲಿ ಕಾಂಗ್ರೆಸ್ ವಿಜಯದುಂಧುಬಿ

ಸಮೀಕ್ಷೆಯ ಪ್ರಕಾರ, 200 ವಿಧಾನಸಭಾ ಕ್ಷೇತ್ರಗಳಿರುವ ರಾಜಸ್ತಾನದಲ್ಲಿ, ಕಳೆದ ಬಾರಿ 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 163 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ, ಈಬಾರಿ ಕೇವಲ 56 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಲಿದೆ. ಕಳೆದ ಬಾರಿ ಕೇವಲ 21 ಸೀಟು ಗೆದ್ದಿದ್ದ ಕಾಂಗ್ರೆಸ್ ಈಬಾರಿ ತನಗೇ ಅಚ್ಚರಿ ಆಗುವಂತೆ 142 ಸೀಟುಗಳಲ್ಲಿ ಗೆದ್ದು ವಿಜಯದುಂಧುಬಿ ಮೆರೆಯಿಸಲಿದೆ. ಇನ್ನೆರಡು ಸ್ಥಾನಗಳು ಇತರ ಪಕ್ಷಗಳ ಪಾಲಾಗಲಿವೆ.

ಈಬಾರಿ ವಿಜಯರಾಜೇ ಸಿಂಧಿಯಾಗೆ ವಿಜಯವಿಲ್ಲ

ಈಬಾರಿ ವಿಜಯರಾಜೇ ಸಿಂಧಿಯಾಗೆ ವಿಜಯವಿಲ್ಲ

ಡಿಸೆಂಬರ್ 7ರಂದು ಒಂದೇ ಹಂತದಲ್ಲಿ ರಾಜಸ್ತಾನದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ನಾಯಕಿ ವಿಜಯರಾಜೇ ಸಿಂಧಿಯಾ ನೇತೃತ್ವದಲ್ಲಿ ಎರಡನೇ ಬಾರಿ ಮತ್ತೆ ಅಧಿಕಾರಕ್ಕೇರಲು ಹವಣಿಸುತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾಗುವ ಕೆಲವೇ ಗಂಟೆಗಳ ಮುನ್ನ ವಿಜಯರಾಜೇ ಸಿಂಧಿಯಾ ಅವರು ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದರು. ಈ ಘೋಷಣೆ ಮಾಡಲೆಂದೇ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ತಡವಾಗಿ ಆರಂಭಿಸಿತು ಎಂದು ಕಾಂಗ್ರೆಸ್ ಆರೋಪಿಸಿದೆ.

ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಳ್ಳುವುದೆ ಬಿಜೆಪಿ?

ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಳ್ಳುವುದೆ ಬಿಜೆಪಿ?

230 ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಜಿದ್ದಾಜಿದ್ದಿ ಕಾಳಗ ನಡೆಯಲಿದೆ. ಸಮೀಕ್ಷೆಯಂತೆ ನಾಲ್ಕನೇ ಬಾರಿ ಅಧಿಕಾರ ಗದ್ದುಗೆಯೇರಲು ಸಿದ್ಧರಾಗಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಆಘಾತ ಕಾದಿದ್ದು, ಬಿಜೆಪಿ ಕೇವಲ 108 ಸೀಟುಗಳಲ್ಲಿ ಜಯ ಸಾಧಿಸಲಿದ್ದರೆ, ಕಾಂಗ್ರೆಸ್ 122 ಸೀಟುಗಳನ್ನು ತನ್ನದಾಗಿಸಿಕೊಂಡು ಸ್ಪಷ್ಟ ಬಹುಮತ ಪಡೆಯಲಿದೆ. 2013ರಲ್ಲಿ ಬಿಜೆಪಿ 165ರಲ್ಲಿ ಗೆದ್ದು ಬೀಗಿದ್ದರೆ, ಕಾಂಗ್ರೆಸ್ ಕೇವಲ 58ರಲ್ಲಿ ಗೆದ್ದು ಬಾಗಿತ್ತು. ಈಗ ಎಲ್ಲವೂ ಉಲ್ಟಾಪುಲ್ಟಾ. ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಬಿಜೆಪಿ ಜಿದ್ದಾಜಿದ್ದಿ

ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಬಿಜೆಪಿ ಜಿದ್ದಾಜಿದ್ದಿ

ಛತ್ತೀಸ್ ಗಢದಲ್ಲಿ ಕೂಡ ಕಮಲ ಮುದುಡಲಿದ್ದು, ಕಾಂಗ್ರೆಸ್ ರಾಜ್ಯದ ಜನತೆಗೆ ಕೈಬೀಸಲಿದೆ. ಇಲ್ಲಿ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ನಡೆಯಲಿದ್ದು, 90 ಕ್ಷೇತ್ರಗಳಿರುವ ರಾಜ್ಯದಲ್ಲಿ ಕಾಂಗ್ರೆಸ್ 47 ಕ್ಷೇತ್ರಗಳಲ್ಲಿ ಗೆದ್ದು ಮೀಸೆ ತಿರುವಲಿದೆ, ಬಿಜೆಪಿಗೆ 40 ಮತ್ತು ಇತರ ಪಕ್ಷಗಳು 3 ಸ್ಥಾನಗಳನ್ನು ಪಡೆಯಲಿವೆ. 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 49ರಲ್ಲಿ ಜಯಭೇರಿ ಬಾರಿಸಿದ್ದರೆ, ಕಾಂಗ್ರೆಸ್ 39ರಲ್ಲಿ ಜಯಶಾಲಿಯಾಗಿತ್ತು.

ಈಗಲೂ ನರೇಂದ್ರ ಮೋದಿಯೇ ಬೆಸ್ಟ್

ಈಗಲೂ ನರೇಂದ್ರ ಮೋದಿಯೇ ಬೆಸ್ಟ್

ಈ ಸಮೀಕ್ಷೆಯ ಮತ್ತೊಂದು ಪ್ರಮುಖ ಸಂಗತಿಯೆಂದರೆ, ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೂ, ಲೋಕಸಭೆ ಚುನಾವಣೆಯಲ್ಲಿ ಮಾತ್ರ ಜನರ ನರೇಂದ್ರ ಮೋದಿಯವರಿಗೇ ಜೈಜೈಕಾರ ಮಾಡಲಿದ್ದಾರೆ. ಪ್ರಧಾನಿ ಪಟ್ಟಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವೆ ಯಾವುದೇ ತರಹದ ಸ್ಪರ್ಧೆ ಇಲ್ಲವೇ ಇಲ್ಲ. ಇದು ಮಾತ್ರ ಕಾಂಗ್ರೆಸ್ಸಿಗೆ ಕಹಿ ಸಂಗತಿ.

English summary
ABP News poll survey : BJP will have to relinquish power in 3 states Madhya Pradesh, Rajasthan and Chhattisgarh. ABP News conducted poll survey immediately after Election Commission announced polling dates in 5 states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X