ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ವಿಜಯ

By Mahesh
|
Google Oneindia Kannada News

ಬೆಂಗಳೂರು, ಮೇ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 4 ವರ್ಷವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಮತದಾರರ ಒಲವು ಯಾವ ಪಕ್ಷದ ಕಡೆಗಿದೆ ಎಂಬುದನ್ನು ಎಬಿಪಿ ನ್ಯೂಸ್ ಹಾಗೂ ಸಿಎಸ್ ಡಿಎಸ್ ಸಂಸ್ಥೆ ಸಮೀಕ್ಷೆ ನಡೆಸಿ ಫಲಿತಾಂಶ ಹೊರ ಹಾಕಿದೆ.ಇದರಂತೆ ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಮತದಾರರು ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ.

Mood of the Nation ಸಮೀಕ್ಷೆಯಂತೆ ಕಾಂಗ್ರೆಸ್ಸಿಗೆ ಶೇ 44ರಷ್ಟು ಮತಗಳು ಸಿಗಲಿದ್ದು, ಭಾರತೀಯ ಜನತಾ ಪಕ್ಷಕ್ಕೆ ಶೇ 39ರಷ್ಟು ಮತಗಳು ಮಾತ್ರ ಲಭಿಸಲಿದೆ. ಈ ಸಂದರ್ಭದಲ್ಲಿ 200 ಸ್ಥಾನಗಳುಳ್ಳ ರಾಜಸ್ಥಾನದ ಅಸೆಂಬ್ಲಿಗೆ ಚುನಾವಣೆ ನಡೆದರೆ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ.

ABP News CSDS Mood of the Nation poll survey In Rajasthan Congress leads

ಎಬಿಪಿ ಸಮೀಕ್ಷೆ: ಮಧ್ಯ ಪ್ರದೇಶದಲ್ಲಿ ಈ ಬಾರಿ ಅಧಿಕಾರದತ್ತ ಕಾಂಗ್ರೆಸ್ಎಬಿಪಿ ಸಮೀಕ್ಷೆ: ಮಧ್ಯ ಪ್ರದೇಶದಲ್ಲಿ ಈ ಬಾರಿ ಅಧಿಕಾರದತ್ತ ಕಾಂಗ್ರೆಸ್

ಈ ಬಾರಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್, ಮಯಾವತಿ ಅವರ ಬಹುಜನ ಸಮಾಜವಾದಿ ಪಕ್ಷ(ಬಿಎಸ್ ಪಿ) ಜತೆ ಮೈತ್ರಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ ಎಂದಿದ್ದಾರೆ.

2013ರಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ವಸುಂಧರಾ ರಾಜೇ ಯಶಸ್ವಿಯಾಗಿದ್ದರು. 163 ಸ್ಥಾನ ಗಳಿಸಿ ಅಭೂತಪೂರ್ವ ವಿಜಯ ದಾಖಲಿಸಿದ್ದರು, ಕೇವಲ 21 ಸ್ಥಾನಗಳಿಸಿ ಕಳಪೆ ಪ್ರದರ್ಶನ ನೀಡಿದ್ದ ಕಾಂಗ್ರೆಸ್ ಈಗ ಪುಟಿದೇಳುವ ಉತ್ಸಾಹದಲ್ಲಿದೆ.

ಎಬಿಪಿ ಸಮೀಕ್ಷೆ: ಮಧ್ಯ ಪ್ರದೇಶದಲ್ಲಿ ಈ ಬಾರಿ ಅಧಿಕಾರದತ್ತ ಕಾಂಗ್ರೆಸ್ ಎಬಿಪಿ ಸಮೀಕ್ಷೆ: ಮಧ್ಯ ಪ್ರದೇಶದಲ್ಲಿ ಈ ಬಾರಿ ಅಧಿಕಾರದತ್ತ ಕಾಂಗ್ರೆಸ್

2018ರಲ್ಲಿ ನಡೆದ ನಡೆದ ಆರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕರಲ್ಲಿ ಜಯ ಗಳಿಸಿದ್ದಲ್ಲದೆ, ಅಜ್ಮೇರ್, ಅಳ್ವಾರ್ ಸಂಸದೀಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲೂ ಗೆಲುವು ಸಾಧಿಸಿತ್ತು.

English summary
ABP News CSDS Mood of the Nation poll survey : The Congress is making substantial gains in Rajasthan as the BJP is lagging behind the grand old party by 5 per cent vote share, a survey conducted by ABP News and CSDS has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X