ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿನಂದನ್ 'ಸಾಮಾಜಿಕ' ಖಾತೆ ಬಗ್ಗೆ ಸ್ಪಷ್ಟನೆ ಕೊಟ್ಟ ವಾಯು ಸೇನೆ

|
Google Oneindia Kannada News

ನವದೆಹಲಿ, ಮಾರ್ಚ್ 06: ಭಾರತೀಯ ವಾಯು ಸೇನೆಯ ವಿಂಗ್​ಕಮಾಂಡರ್​ ಅಭಿನಂದನ್​ವರ್ಧಮಾನ್​ಅವರ ಸಾಮಾಜಿಕ ಜಾಲತಾಣ ಖಾತೆಗಳ ಬಗ್ಗೆ ವಾಯುಸೇನೆಯ ಅಧಿಕೃತ ಟ್ವಿಟ್ಟರ್ ನಲ್ಲಿ ಬುಧವಾರದಂದು ಸ್ಪಷ್ಟನೆ ನೀಡಲಾಗಿದೆ.

ಅಭಿನಂದನ್ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಖಾತೆಗಳೆಲ್ಲವೂ ನಕಲಿ, ಆ ಖಾತೆಗಳನ್ನು ಹಿಂಬಾಲಿಸಿ, ತಪ್ಪು ಮಾಹಿತಿ ಹರಡುವವರನ್ನು ಬೆಂಬಲಿಸಬೇಡಿ ಎಂದು ಭಾರತೀಯ ವಾಯುಪಡೆ ಸ್ಪಷ್ಟನೆ ನೀಡಿದೆ.

ಪೈಲಟ್ ಅಭಿನಂದನ್ ವರ್ಧಮಾನ್ ಹೆಸರಲ್ಲಿ 'ನಕಲಿ' ಟ್ವಿಟ್ಟರ್ ಖಾತೆಪೈಲಟ್ ಅಭಿನಂದನ್ ವರ್ಧಮಾನ್ ಹೆಸರಲ್ಲಿ 'ನಕಲಿ' ಟ್ವಿಟ್ಟರ್ ಖಾತೆ

ಮಿಗ್ 21 ನಲ್ಲಿದ್ದ ಅಭಿನಂದನ್​ಅವರು ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿ ವಾಪಸ್ ಬಂದ ನಂತರ ಅವರ ಹೆಸರಿನಲ್ಲಿ ಟ್ರೆಂಡ್ ಹೆಚ್ಚಾಗಿದೆ. ಅಭಿನಂದನ್ ಹೆಸರಿನ ಜನಪ್ರಿಯತೆಯನ್ನು ಬಳಸಿಕೊಳ್ಳಲು ಅವರ ಹೆಸರಿನಲ್ಲಿ ಟ್ವಿಟ್ಟರ್, ಫೇಸ್​ಬುಕ್, ಇನ್​ಸ್ಟಾಗ್ರಾಂ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಆರಂಭಿಸಲಾಗಿದೆ. ಅಭಿನಂದನ್ ಕುರ್ತ ಮಾಹಿತಿಗಳನ್ನು ಹಾಕಲಾಗಿದ್ದು, ಇದೇ ಅವರ ಟ್ವಿಟ್ಟರ್ ಖಾತೆ ಎಂದು ಬಿಂಬಿಸಲಾಗುತ್ತಿದೆ. ಅನೇಕ ಮಂದಿ ಇದು ಅಭಿನಂದನ್ ಅವರದ್ದೇ ಖಾತೆಗಳು ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ, ಈ ಖಾತೆಗಳನ್ನು ಬಳಸಿಕೊಂಡು ಹಲವು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದು ಕಂಡು ಬಂದಿದೆ.

Abhinandan Varthaman has no social media accounts : IAF

ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ವಾಯುಪಡೆ, ಅಭಿನಂದನ್​ ಹೆಸರಿನಲ್ಲಿರುವ ನಕಲಿ ಖಾತೆಗಳನ್ನು ಫಾಲೋ ಮಾಡಬೇಡಿ, ಅಭಿನಂದನ್ ಅವರ ನಕಲಿ ಖಾತೆ ತೆರೆಯಲಾಗಿದ್ದು, ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ, ಅವರು ಯಾವುದೇ ಖಾತೆಯನ್ನು ಹೊಂದಿಲ್ಲ ಎಂದು ಹೇಳಿದ್ದು, ಅಭಿನಂದನ್​ಅವರ ಹೆಸರಿನಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವ 6 ನಕಲಿ ಖಾತೆಗಳ ಐಡಿಗಳನ್ನು ಹಾಕಿ ಟ್ವೀಟ್ ಮಾಡಲಾಗಿದೆ.

ಮಂಗಳೂರಲ್ಲೂ ಅಭಿನಂದನ್ ಮೀಸೆಯ ಸ್ಟೈಲ್ ಕ್ರೇಜ್ ಶುರುಮಂಗಳೂರಲ್ಲೂ ಅಭಿನಂದನ್ ಮೀಸೆಯ ಸ್ಟೈಲ್ ಕ್ರೇಜ್ ಶುರು

ಭಾರತೀಯ ವಾಯುಸೇನೆಯ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಾರ್ವಜನಿಕರು ಟ್ವೀಟ್ ಮಾಡಿದ್ದಾರೆ.

English summary
The Indian Air Force(IAF) on Wednesday said that Indian Airforce pilot Abhinandan Varthaman does not have a social media account dispelling all rumours circulating around Wing Commander's social media accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X