ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಗುರಿ ಮುಟ್ಟಿದ್ದೇನೆ, ನೀವು? ಯುವಕರಿಗೆ ಕಲಾಂ ಪ್ರಶ್ನೆ

By ಡಾ. ಆರ್.ಅನಂತ ಕೃಷ್ಣನ್
|
Google Oneindia Kannada News

ವಿಜ್ಞಾನಿ, ಯುವಕರ ಆದರ್ಶ, ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ ಬುಧವಾರ ತಮ್ಮ 83ನೇ ವಸಂತಕ್ಕೆ ಕಾಲಿರಿಸಿದರು. 'ನಾನು ನನ್ನ ಜೀವನದ 84ನೇ ಕಕ್ಷೆಗೆ ಕಾಲಿರಿಸಿದ್ದೇನೆ. ಭಾರತದ ರಾಷ್ಟ್ರಪತಿಯಾದ ನಂತರವೂ ನನ್ನ ಜೀವನದಲ್ಲಿ ಯಾವ ಬದಲಾವಣೆಯಾಗಿಲ್ಲ. ಇವತ್ತಿಗೂ ನಾನು ಸಾಕಷ್ಟು ಪುಸ್ತಕಗಳನ್ನು ಓದುತ್ತಿದ್ದೇನೆ ಅಲ್ಲದೇ ಅಭಿಮಾನಿಗಳಿಗೆ, ಅವರ ಪತ್ರಕ್ಕೆ, ಮೇಲ್‌ಗೆ ಉತ್ತರಿಸುತ್ತಿದ್ದೇನೆ' ಇದು ಮಾಜಿ ರಾಷ್ಟ್ರಪತಿಗಳ ಸ್ಫೂರ್ತಿದಾಯಕ ಮಾತು.

ಮಧ್ಯರಾತ್ರಿ 1 ಗಂಟೆವರೆಗೂ ಕಲಾಂ ಅಧ್ಯಯನ ನಿರಂತರ. ದೆಹಲಿಯಲ್ಲಿ ವಾಸವಾಗಿರುವ ಅವರನ್ನು 'ಒನ್ ಇಂಡಿಯಾ' ಸಂದರ್ಶನ ಮಾಡಿದಾಗ ಅನೇಕ ಚಿಂತಾನಶೀಲ ವಿಚಾರಗಳನ್ನು ಹರಿಯಬಿಟ್ಟರು. ತಮ್ಮ ಜೀವನದ ಗುರಿ, ಸಾಧಿಸಲಾಗದ ಕಾರ್ಯಕ್ರಮಗಳು ಎಲ್ಲವನ್ನೂ ಬಿಚ್ಚಟಿಟ್ಟರು.[ಅಣುಶಕ್ತಿ, ಜ್ಞಾನಶಕ್ತಿ, ಮತದಾನ ಬಗ್ಗೆ ಕಲಾಂ ಪಾಠ]

kalam

ಚಿಕ್ಕ ಚಿಕ್ಕ ಸಂಗತಿಗಳು ನನಗೆ ಮುಖ್ಯವಾಗುತ್ತದೆ. ಪ್ರತಿ ವರ್ಷದ ಜನವರಿ 1ರಂದೇ ಇಡೀ ವರ್ಷದ ಗುರಿ ಮುತ್ತು ಧ್ಯೇಯಗಳನ್ನು ನಾನು ನಿರ್ಧರಿಸಿರುತ್ತೇವೆ. ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ ನಾನು ಇಟ್ಟುಕೊಂಡ ಗುರಿಯಲ್ಲಿ ಶೇ.60 ರಿಂದ 70ನ್ನು ಸಾಧಿಸಿದ್ದೇನೆ. ಯಾವತ್ತೂ ನನ್ನ ಗುರಿಯಿಂದ ಹಿಂದಕ್ಕೆ ಸರಿದಿಲ್ಲ ಎಂದು ಕಲಾಂ ಜೀವನದ ಪಾಠ ಹೇಳಿದರು.

ಭಾರತದ ವಾಯು ಸೇನೆಗೆ ಸೇರುವ ಅವಕಾಶ ತಪ್ಪಿಸಿಕೊಂಡ ಬಗ್ಗೆ ಕೇಳಿದಾಗ ಅದರ ಬಗ್ಗೆ ಖಂಡಿತ ಪಶ್ಚಾತಾಪವಿದೆ ಎಂದು ಹೇಳಿದರು. ರಾಷ್ಟ್ರಪತಿ ಭವನದಲ್ಲಿ ಸೋಲಾರ್‌ ಘಟಕ ಸ್ಥಾಪಿಸಬೇಕೆಂಬ ಕನಸು ಹಾಗೇ ಉಳಿಯಿತು. ನನ್ನ ಆಳ್ವಿಕೆಯ ಕೊನೆ ಅವಧಿಯಲ್ಲಿ 5 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲಾಂಟ್‌ ಸ್ಥಾಪಿಸಬೇಕು ಎಂದುಕೊಂಡಿದ್ದೆ. ಹಣಕಾಸು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಇತಿಹಾಸ ಪ್ರಸಿದ್ಧ ಮೊಘಲ್ ಉದ್ಯಾನವನಕ್ಕೆ ತೊಂದರೆಯಾಗುತ್ತದೆ ಎಂದು ಕಾರ್ಯಕ್ರಮಕ್ಕೆ ಹಿನ್ನಡೆಯಾಯಿತು. ಇದೊಂದು ಗುರಿ ಮುಟ್ಟಲು ನನ್ನಿಂದ ಸಾಧ್ಯವಾಗಲಿಲ್ಲ ಎಂದರು ಭಾರತದ ಕ್ಷಿಪಣಿ ತಯಾರಿಕೆ ರೂವಾರಿ.

ಬ್ಯಾಚುಲರ್ ಜೀವನವೇ ಖುಷಿ
ನಾನು ಮದುವೆಯಾಗದಿರುವ ಬಗ್ಗೆ ಮೊದಲು ಪ್ರಶ್ನೆ ಎದುರಾಗಿದ್ದು ಸಿಂಗಪುರದಲ್ಲಿ. ರಾಷ್ಟ್ರಪತಿಯಾಗಿದ್ದ ಸಂದರ್ಭ ಅಲ್ಲಿಗೆ ಭೇಟಿ ನೀಡಿದ್ದೆ. ವಿದ್ಯಾರ್ಥಿಯೊಬ್ಬ ನನ್ನ ಹೆಂಡತಿ ಬಗ್ಗೆ ಪ್ರಶ್ನಿಸಿದ್ದ. ಅದಕ್ಕೆ ಮುಗುಳ್ನಗೆಯೊಂದೇ ನನ್ನ ಉತ್ತರರವಾಗಿತ್ತು. ಆ ಪ್ರಶ್ನೆ 50 ವರ್ಷಗಳ ಹಿಂದೆ ಕೇಳಿದ್ದರೆ ಪ್ರಸ್ತುತವಾಗಿರುತ್ತಿತ್ತು ಬಿಡಿ! ಭಾರತ ಮತ್ತು ವಿದೇಶಗಳಲ್ಲಿ ಈ ಬಗ್ಗೆ ಅನೇಕ ಸಾರಿ ಪ್ರಶ್ನೆಗಳು ಎದುರಾದವು. ಇದಕ್ಕೆಲ್ಲ ನನ್ನ ಉತ್ತರ ನಗು, ಅದನ್ನು ಬಿಟ್ಟರೆ ನಾನು ದೊಡ್ಡ ಕುಟುಂಬದಿಂದ ಬಂದಿದ್ದು, ನನ್ನ ಅಣ್ಣ ತಮ್ಮಂದಿರಿಗೆ ಮಕ್ಕಳಿದ್ದಾರೆ. ಯಾರೋ ಒಬ್ಬ ಮದುವೆಯಾಗದಿದ್ದರೆ ಅದನ್ನು ಇಷ್ಟು ದೊಡ್ಡ ಸಂಗತಿಯನ್ನಾಗಿ ಯಾಕೆ ಮಾಡಿಕೊಳ್ಳುತ್ತಾರೋ? ಎಂಬುದು ತಮ್ಮ ಬ್ಯಾಚುಲರ್ ಜೀವನದ ಕುರಿತಾಗಿ ಕಲಾಂ ಸ್ಪಷ್ಟನೆ.

ಯುವ ಶಕ್ತಿ
ಕೊನೆಯ ಎರಡು ದಶಕಗಳ ಅವಧಿಯಲ್ಲಿ ಸುಮಾರು 16 ಮಿಲಿಯನ್ ಯುವಕರನ್ನು ದೇಶದ ಮೂಲೆ ಮೂಲೆಯಲ್ಲಿ ಭೇಟಿ ಮಾಡಿದ್ದೇನೆ. ಅವರಿಗೆ ನಿಜವಾಗಿಯೂ ಭಾರತದ ಭವಿಷ್ಯದ ಬಗ್ಗೆ ಕಲ್ಪನೆಗಳಿವೆ. ಸುರಕ್ಷಿತ ಮತ್ತು ಶಾಂತ ಭಾರತ ಅವರಿಗೆ ಬೇಕಿದೆ. ಪ್ರತಿಯೊಬ್ಬ ಭಾರತೀಯ ಯುವಕನಲ್ಲಿ ಹುದುಗಿರುವ ಪ್ರಶ್ನೆ ಒಂದೇ ಅದು 'ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಲ್ಲಿ ನೋಡಲು ಎಂದು? ಇವರಿಗೆ ಮಾರ್ಗದರ್ಶನ ನೀಡುವುದು ದೊಡ್ಡ ಸವಾಲಾದರೂ ಅದರಲ್ಲೇ ಸಂಭ್ರಮಿಸಿದ್ದೇನೆ ಎಂದು ಕಲಾಂ ತಿಳಿಸಿದರು.

ಅಭಿವೃದ್ಧಿ ಹೊಂದಿದ ಭಾರತ
ಭಾರತವನ್ನು 2020ರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಲ್ಲಿ ನೋಡಲೇಬೇಕು. ಒಗ್ಗಟ್ಟಿನಿಂದ ದುಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಈ ಬಗ್ಗೆ ಸಂಸತ್ತಿನಲ್ಲೇ ಕಾನೂನೊಂದು ಜಾರಿಯಾದರೆ ಒಳಿತು. ಆರ್ಥಿಕ ಅಭಿವೃದ್ಧಿಯೊಂದೇ ಗುರಿಯಲ್ಲ ಆದರೆ ಇದು ಸಹ 2020ಕ್ಕೆ ಸಾಧ್ಯವಾಗಬೇಕು. ನಾವು ಭಾರತವನ್ನು ಅಭಿವೃದ್ಧಿ ಮಾಡಲು ಯಾವ ಕ್ರಮ ತೆಗೆದುಕೊಂಡಿದ್ದೇವೆ ಎಂಬುದು ಸಾಮಾಜಿಕ ಚರ್ಚೆಯಾಗಬೇಕು ಎಂದು ಹೇಳಿದರು.

ಗ್ರಾಮೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ನಮ್ಮ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗಬೇಕು. ಸರಿಯಾದ ಮೌಲ್ಯ ದೊರೆತರೆ ಆರ್ಥಿಕಾಭಿವೃದ್ಧಿ ತನ್ನಿಂದ ತಾನೇ ಸಾಧ್ಯ. ಈ ಬಗ್ಗೆ ಎಲ್ಲರೂ ಗಮನ ಹರಿಸಬೇಕಿದೆ ಎಂದು ಮನವಿ ಮಾಡಿದರು.[ಕರಾವಳಿ ವಿದ್ಯಾರ್ಥಿಗಳ ಜತೆ ಕಲಾಂ ಸಂವಾದ]

ಹಣ್ಣು ಮತ್ತು ತರಕಾರಿ ಉತ್ಪನ್ನಗಳಲ್ಲಿ ನಾವು ಎಲ್ಲರಿಗಿಂತ ಮುಂದಿದ್ದೇವೆ. ಆದರೆ ಅವುಗಳ ಸದ್ಬಳಕೆ ಮಾಡಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಜ್ಯೂಸ್‌ ಅಥವಾ ಆಹಾರದ ರೀತಿಯಲ್ಲಿ ಅದನ್ನು ಪರಿವರ್ತಿಸಿ ಆರ್ಥಿಕ ಲಾಭ ಪಡೆದುಕೊಳ್ಳುತ್ತಿಲ್ಲ. ಗುಡಿ ಮತ್ತು ಗೃಹ ಕೈಗಾರಿಕೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಭಾರತದ ಕೈಗಾರಿಕೆ ಅಭಿವೃದ್ಧಿ ದರದಲ್ಲಿ ಇವುಗಳದ್ದೇ ಶೇ.40 ಪಾಲಿದೆ ಎಂಬ ಸಂಗತಿ ಮರೆತಂತಿದೆ ಎಂದು ಕಲಾಂ ವಿಷಾದ ವ್ಯಕ್ತಪಡಿಸಿದರು.

ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯವಿರುವ ತಂತ್ರಜ್ಞಾನ ಮತ್ತಿತರ ಸೌಲಭ್ಯಗಳನ್ನು ಸರ್ಕಾರ ಕಾನೂನು ಬದ್ಧವಾಗಿ ಕಲ್ಪಿಸಿಕೊಡಬೇಕಿದೆ. ಅಭಿವೃದ್ಧಿ ಸಂಬಂಧಿತ ಕ್ರಮಗಳ ಅಗತ್ಯ ಖಂಡಿತ ಇದೆ. ಉತ್ಪಾದನೆ ಮತ್ತು ರಫ್ತು ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

kalam

ಯುವಕರಿಗಾಗಿ ಕಲಾಂ ಪದ್ಯ
ತಮ್ಮ 83ನೇ ಹುಟ್ಟುಹಬ್ಬದ ಸಂದರ್ಭ ಯುವಕರಿಗಾಗಿ ಕಲಾಂ ಸ್ಫೂರ್ತಿದಾಯಕ ಪದ್ಯವೊಂದನ್ನು ಹಂಚಿಕೊಂಡರು. ಪ್ರತಿಯೊಂದು ದಿನವೂ ಹೊಸ ಹೊಸ ಆಲೋಚನೆಗಳನ್ನು ತರುತ್ತದೆ. 2010ರ ಆಗಸ್ಟ್‌ 28ರಂದು ನವದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ತೆರಳುತ್ತಿದ್ದ ವೇಳೆ ಈ ಕವನವನ್ನು ರಚಿಸಿದ್ದೆ. ಈ ಕವನ ಯುವಕರ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದು ಎಂದು ಹೇಳಿದರು.

ಕವನದ ಶೀರ್ಷಿಕೆ 'ಸೋಲಿಸಲಾಗದ ಶಕ್ತಿ' (Indomitable Spirit) ಎಂಬುದಾಗಿದ್ದು, ಬಡತನ, ಕೌಟುಂಬಿಕ ಜಂಜಾಟ, ಭಾರತೀಯ ಸಂಸ್ಕೃತಿ ವಿನಾಶ, ಅಪನಂಬಿಕೆ, ಭ್ರಷ್ಟಾಚಾರ, ಅಶಾಂತಿ, ಭಯೋತ್ಪಾದನೆ ಮುಂತಾದ ಎಲ್ಲ ಸಮಸ್ಯೆಗಳಿಗೆ ಉತ್ತರ ಎಂದುಕೊಂಡಿದ್ದೇನೆ ಎಂದು ತಿಳಿಸಿದ ವಿಜ್ಞಾನಿ ತಮ್ಮ ಮಾತಿಗೆ ಪೂರ್ಣ ವಿರಾಮ ಇಟ್ಟರು.

ಯುವಕರಿಗಾಗಿ ಕಲಾಂ ನೀಡಿದ ಕವನ

I was swimming in the sea,
Waves came one after the other I was swimming and swimming to reach my destination.
But one wave, a powerful wave, overpowered me;
It took me along in its own direction,
I was pulled long and along.
hen I was about to lose amidst the sea wave power,
One thought flashed to me,
yes, that is courage Courage to reach my goal,
courage to defeat the powerful force and succeed;
With courage in my mind,
indomitable spirit engulfed me,
With indomitable spirit in mind and action,
I regained lost confidence I can win,
win and win Strength came back to me,
overpowered the sea wave I reached the destination, my mission.

English summary
People's President and India's inspiration machine turned 83 on Wednesday, Oct 15. Dr Kalam granted an exclusive interview to Oneindia.He disclose many things of his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X