ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರುಷಿಯನ್ನು ಆಕೆ ಪೋಷಕರು ಕೊಂದಿಲ್ಲ: ಕೋರ್ಟ್

|
Google Oneindia Kannada News

ಅಲಹಾಬಾದ್, ಅಕ್ಟೋಬರ್ 12 : ಆರುಷಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲ್ವಾರ್ ದಂಪತಿ ಅಪರಾಧಿಗಳಲ್ಲ ಎಂದು ಹೇಳಿ ಅಲಹಾಬಾದ್ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.

ಕೊಲೆಗೆ ಯಾವುದೇ ಸಾಕ್ಷ್ಯಧಾರಗಳು ಇಲ್ಲದಿದ್ದರಿಂದ ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ದಂಪತಿಗಳನ್ನು ನಿರಾಪರಾಧಿ ಎಂದು ಹೇಳಿ ಕೋರ್ಟ್ ತೀರ್ಪು ಪ್ರಕಟಿಸಿದೆ.

ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ಅವರು 2008ರಲ್ಲಿ ಮೇ 15ರಂದು ರಾತ್ರಿ 14 ವರ್ಷದ ಮಗಳಾದ ಆರುಷಿ ಹಾಗೂ ಮನೆಗೆಲಸ ಹುಡುಗ ಹೇಮರಾಜ್ ಇಬ್ಬರನ್ನು ಮೆಡಿಕಲ್ ಪರಿಕರ ಬಳಸಿ ವೈದ್ಯ ರಾಜೇಶ್ ತಲ್ವಾರ್ ಹಾಗೂ ನೂಪುರ್ ದಂಪತಿ ಕೊಲೆಗೈದಿದ್ದಾರೆ ಎಂದು ಅವರಿಗೆ ಜೀವಾವಧಿ ಶಿಕ್ಷೆ ನೀಡಿ ಗಾಜಿಯಾಬಾದ್ ಕೋರ್ಟ್ ಆದೇಶ ಹೊರಡಿಸಿತ್ತು.

Aarushi’s parents did not murder her says Allahabad High Court

ಇದನ್ನು ಪ್ರಶ್ನಿಸಿ ತಲ್ವಾರ್ ದಂಪತಿಯ ಪರ ವಕೀಲ ಸತ್ಯಕೇತು ಸಿಂಗ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ನಲ್ಲಿ ತಲ್ವಾರ್ ದಂಪತಿಗೆ ಜಯ ಸಿಕ್ಕಿದೆ.

English summary
The Allahabad High Court has cleared dentist couple Nupur and Rajesh Talwar in the murder case of their teen daughter, Aarushi. The High Court says the CBI had failed to prove "guilt beyond reasonable doubt". ಆರುಷಿಯನ್ನು ಆಕೆ ಪೋಷಕರು ಕೊಂದಿಲ್ಲ: ಕೋರ್ಟ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X