ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರುಷಿ ಹತ್ಯೆ: ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ

By Mahesh
|
Google Oneindia Kannada News

ನವದೆಹಲಿ, ನ.26: ಆರುಷಿ ತಲ್ವಾರ್ - ಹೇಮರಾಜ್ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ಅವರು ಅಪರಾಧಿಗಳು ಎಂದು ತೀರ್ಪು ನೀಡಿದ ಗಾಜಿಯಾಬಾದ್ ವಿಶೇಷ ನ್ಯಾಯಾಲಯ ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.

14 ವರ್ಷದ ಮಗಳು ಆರುಷಿ ತಲ್ವಾರ್ ಹಾಗೂ ಮನೆಗೆಲಸದವ ಹೇಮರಾಜ್ ಹತ್ಯೆ ಮಾಡಿ ತಪ್ಪಿತಸ್ಥರಾಗಿರುವ ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಗಾಜಿಯಾಬಾದ್ ವಿಶೇಷ ನ್ಯಾಯಾಲಯದ ಜಸ್ಟೀಸ್ ಎಸ್ ಲಾಲ್ ತೀರ್ಪು ನೀಡಿದ್ದಾರೆ. ಐಪಿಸಿ ಸೆಕ್ಷನ್ 302 ಅನ್ವಯ ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ, 5 ಸೆಕ್ಷನ್ 203 ಪ್ರಕಾರ ವರ್ಷ ಶಿಕ್ಷೆ; ಸೆಕ್ಷನ್ 201 ಪ್ರಕಾರ ರಾಜೇಶ್ ಗೆ 1 ವರ್ಷ ಶಿಕ್ಷೆ ಘೋಷಿಸಲಾಗಿದೆ.

ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಸಿಬಿಐ ತಂಡ ಮನವಿ ಸಲ್ಲಿಸಿತ್ತು. ಅವಳಿ ಕೊಲೆ ಪ್ರಕರಣದಲ್ಲಿ 'ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲದ ಕಾರಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬಾರದು. ಈ ತೀರ್ಪಿನ ವಿರುದ್ಧ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ನೂಪುರ್ ಪರ ವಕೀಲ ಸತ್ಯಕೇತು ಸಿಂಗ್ ಹೇಳಿದ್ದಾರೆ

Aarushi-Hemraj verdict: Convicts Rajesh and Nupur get life imprisonment

2008 ರಲ್ಲಿ ನಡೆದ ಈ ಕೊಲೆ ಕೇಸ್ ಬಗ್ಗೆ ದೇಶದಲ್ಲೆಡೆ ಭಾರಿ ಚರ್ಚೆ ನಡೆದಿತ್ತು. ಮರ್ಯಾದಾ ಹತ್ಯೆ, ಪೋಷಕರೇ ಪಾತಕಿಗಳು, ಕೊಲೆಯ ಕಾರಣ, ಸಾಕ್ಷಿ ನಾಶ, ತನಿಖಾ ತಂಡದ ವಿಳಂಬ, ಮಾಧ್ಯಮಗಳಲ್ಲಿ ಜೀವಂತವಾಗಿದ್ದ ಕೇಸ್ ಬಗ್ಗೆ ತೀರ್ಪು ನೀಡಲು ಇಷ್ಟು ವರ್ಷ ವಿಳಂಬವಾಗಿದ್ದು ಏಕೆ ಎಂಬ ಅನೇಕ ಪ್ರಶ್ನೆಗಳು ಹಾಗೇ ಉಳಿದಿದೆ. [ಸಾಮಾಜಿಕ ಜಾಲ ತಾಣಗಳಲ್ಲಿನ ಚರ್ಚೆ]

2008ರಲ್ಲಿ ಮೇ 15ರಂದು ರಾತ್ರಿ 14 ವರ್ಷದ ಮಗಳಾದ ಆರುಷಿ ಹಾಗೂ ಮನೆಗೆಲಸ ಹುಡುಗ ಹೇಮರಾಜ್ ಇಬ್ಬರನ್ನು ಮೆಡಿಕಲ್ ಪರಿಕರ ಬಳಸಿ ವೈದ್ಯ ರಾಜೇಶ್ ತಲ್ವಾರ್ ಹಾಗೂ ನೂಪುರ್ ದಂಪತಿ ಕೊಲೆಗೈದಿದ್ದರು. ನಂತರ ಯಾವುದೇ ಸಾಕ್ಷಿ ಸಿಗದಂತೆ ಸ್ವಚ್ಛಗೊಳಿಸಿದ್ದರು. ಮೇ 16ರಂದು ಆರುಷಿ ಮೃತದೇಹ ಮಹಡಿಯ ಬೆಡ್ ರೂಮಿನಲ್ಲಿ ಪತ್ತೆಯಾಗಿತ್ತು. [ಡಬ್ಬಲ್ ಮರ್ಡರ್ ಟೈಮ್ ಲೈನ್]

ಜೀವಾವಧಿ ಶಿಕ್ಷೆ ಏಕೆ?: ಈ ಪ್ರಕರಣದಲ್ಲಿ ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತು ಮಾಡಲು ಹಾಕಿರುವ ಐಪಿಎಸ್ ಸೆಕ್ಷನ್ ಅನ್ವಯ ಕನಿಷ್ಠ ಜೀವಾವಧಿ ಶಿಕ್ಷೆ ವಿಧಿಸುವುದು ನಿರೀಕ್ಷಿತವಾಗಿತ್ತು.
* ಪಬ್ಲಿಕ್ ಪ್ರಾಸಿಕ್ಯೂಟರ್ ಆರ್ ಕೆ ಸೈನಿ ಅವರು ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸುವಂತೆ ಮನವಿ ಸಲ್ಲಿಸಿದ್ದರು.
* ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂಬ ಲೇಬಲ್ ಕಳಚುವಂತೆ ನೋಡಿಕೊಳ್ಳುವುದು ವಕೀಲರ ಸವಾಲಾಗಿತ್ತು.ಇದು ಪೂರ್ವನಿಯೋಜಿತ ಕೊಲೆಯಲ್ಲ, ಇದು ಅಮಾನುಷ ಹತ್ಯೆ ಅಲ್ಲ ಎಂದು ಸಿಬಿಐ ತಂಡವೇ ಹೇಳಿಕೆ ನೀಡಿದೆ.
* ಘಟನೆ ನಡೆದ ದಿನದಂದು ರಾಜೇಶ್ ಇದ್ದ ಪರಿಸ್ಥಿತಿ ಕುಡಿದಿದ್ದರೆ ಇಲ್ಲವೇ ಎಂಬುದರ ಬಗ್ಗೆ ಸಾಕ್ಷಿ ಸಿಕ್ಕಿಲ್ಲ. ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ವಿಧಿಸಿ ಎಂದು ಮನವಿ ಸಲ್ಲಿಸಿರುವ ಸಿಬಿಐ ತನ್ನ ವಾದ ಪುಷ್ಟಿಕರಿಸಲು ಸೂಕ್ತ ಸಾಕ್ಷಿ ಒದಗಿಸುವಲ್ಲಿ ವಿಫಲವಾಗಿದೆ.

English summary
Aarushi-Hemraj double murder case verdict:Special CBI court in Ghaziabad today(Nov.26) pronounced Quantum of punishment of convicted Dr. Rajesh Talwar and Nupur. Both the convicted are awarded with life imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X