ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿಗೂ ಎಎಪಿಯಿಂದ ಸ್ಪರ್ಧೆ

|
Google Oneindia Kannada News

ಇಂದೋರ್, ಸೆಪ್ಟೆಂಬರ್ 24: ಮಧ್ಯಪ್ರದೇಶದಲ್ಲಿ ತನ್ನ ಅಸ್ತಿತ್ವ ಬೆಳೆಸಿಕೊಳ್ಳಲು ಹವಣಿಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ)ವು ಹೊಸ ಹುರುಪಿನೊಂದಿಗೆ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ.

ಮಧ್ಯಪ್ರದೇಶದ ಎಲ್ಲಾ 230 ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ಶೇ 80 ಟಿಕೆಟ್ ಗಳನ್ನು ಹೊಸಬರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಎಎಪಿ ವಕ್ತಾರರು ಹೇಳಿದ್ದಾರೆ.

100 ಲೋಕಸಭಾ ಕ್ಷೇತ್ರಗಳಲ್ಲಿ AAP ಸ್ಪರ್ಧೆ: ಮಿಷನ್ 25 ಟಾರ್ಗೆಟ್!100 ಲೋಕಸಭಾ ಕ್ಷೇತ್ರಗಳಲ್ಲಿ AAP ಸ್ಪರ್ಧೆ: ಮಿಷನ್ 25 ಟಾರ್ಗೆಟ್!

2012ರಲ್ಲಿ ಸ್ಥಾಪನೆಯಾದ ಎಎಪಿ, 2013ರ ಮಧ್ಯಪ್ರದೇಶ ಚುನಾವಣೆಯಲ್ಲಿ ಪಾಲ್ಗೊಂಡಿರಲಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿ, 29 ಸ್ಥಾನಗಳನ್ನು ಕಳೆದುಕೊಂಡಿತ್ತು. ಅನೇಕ ಅಭ್ಯರ್ಥಿಗಳು ಠೇವಣಿ ಕೂಡಾ ಕಳೆದುಕೊಂಡರು.

AAP upbeat, to contest all 230 Assembly seats in MP

ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಯೋಧರು, ಇಂಜಿನಿಯರ್, ಮ್ಯಾನೇಜರ್, ಡಾಕ್ಟರ್, ಯುವ ವೃತ್ತಿಪರರನ್ನು ಕಣಕ್ಕಿಳಿಸಲಾಗುವುದು ಎಂದು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ, ರಾಜ್ಯಾಧ್ಯಕ್ಷ ಅಲೋಕ್ ಅಗರವಾಲ್ ಹೇಳಿದ್ದಾರೆ.

ವಿಶ್ಲೇಷಣೆ : ಮಧ್ಯಪ್ರದೇಶದಲ್ಲಿ ಮಣ್ಣುಮುಕ್ಕುವವರು ಯಾರು? ಕಾಂಗ್ರೆಸ್, ಬಿಜೆಪಿ?ವಿಶ್ಲೇಷಣೆ : ಮಧ್ಯಪ್ರದೇಶದಲ್ಲಿ ಮಣ್ಣುಮುಕ್ಕುವವರು ಯಾರು? ಕಾಂಗ್ರೆಸ್, ಬಿಜೆಪಿ?

ಈಗಾಗಲೆ 119 ಸ್ಥಾನಗಳಿಗೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ವಿರೋಧಿ ಅಲೆ ಇದೆ. ಕಾಂಗ್ರೆಸ್ ಪರ್ಯಾಯ ಶಕ್ತಿಯಾಗದೆ ಸೋತಿದೆ. ಮೂರನೇ ಶಕ್ತಿಯಾಗಿ ಎಎಪಿ ಹೊರ ಹೊಮ್ಮಲಿದೆ ಎಂದು ಹೇಳಿದರು.

English summary
In a bid to emerge as the third force in the year-end Assembly polls in Madhya Pradesh, the Aam Aadmi Party (AAP) is going to fight on all 230 seats with 80 percent tickets earmarked for new faces, a senior party functionary said Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X