• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಅವರಂತೆ ಆಡಬೇಡಿ, ಮಾಸ್ಕ್ ಧರಿಸಿ: ಎಎಪಿ ಟ್ರೋಲ್

|
Google Oneindia Kannada News

ನವದೆಹಲಿ, ಡಿಸೆಂಬರ್ 17: ಸ್ವಯಂಸೇವಕರೊಬ್ಬರಿಂದ ಮಾಸ್ಕ್ ಪಡೆದುಕೊಳ್ಳಲು ನಿರಾಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಮ್ ಆದ್ಮಿ ಪಕ್ಷ ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡು, ಮೋದಿ ಅವರಂತೆ ಮಾಡಬೇಡಿ ಎಂದು ಟ್ರೋಲ್ ಮಾಡಿದೆ.

ಸ್ವಯಂ ಸೇವಕರೊಬ್ಬರು ನೀಡುವ ಮಾಸ್ಕ್‌ಅನ್ನು ಮೋದಿ ನಿರಾಕರಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಎಎಪಿ, 'ಮಾಸ್ಕ ಧರಿಸಿ, ಮೋದಿ ಅವರಂತೆ ಆಗಬೇಡಿ' ಎಂದು ಲೇವಡಿ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಮೋದಿ ಅವರ ನಡೆಯನ್ನು ಟೀಕಿಸಿದ್ದಾರೆ.

ಮೋದಿ ಸರ್ಕಾರದ ಕ್ರೌರ್ಯ ಎಲ್ಲಾ ಮಿತಿಗಳನ್ನು ಮೀರಿದೆ: ರಾಹುಲ್ ಗಾಂಧಿ ಮೋದಿ ಸರ್ಕಾರದ ಕ್ರೌರ್ಯ ಎಲ್ಲಾ ಮಿತಿಗಳನ್ನು ಮೀರಿದೆ: ರಾಹುಲ್ ಗಾಂಧಿ

ಮೋದಿ ಅವರು ಉತ್ಸವವೊಂದರ ಪ್ರದರ್ಶನದಲ್ಲಿ ಇರಿಸಲಾಗಿದ್ದ ಕರಕುಶಲ ವಸ್ತುಗಳು ಮತ್ತು ಮಾಸ್ಕ್‌ಗಳ ಮಾರಾಟದ ಮಳಿಗೆಗಳ ನಡುವೆ ಹಾದುಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತಮ್ಮಿಂದ ಮಾಸ್ಕ್ ಒಂದನ್ನು ಪಡೆದುಕೊಳ್ಳುವಂತೆ ಅಲ್ಲಿದ್ದ ಮಾರಾಟಗಾರರೊಬ್ಬರು ಮೋದಿ ಅವರಿಗೆ ಕೋರುತ್ತಾರೆ. ಆದರೆ ಮೋದಿ ಅದನ್ನು ನಿರಾಕರಿಸುತ್ತಾರೆ. ಕೈಗೆ ನೀಡಿದ್ದ ಮಾಸ್ಕ್‌ಅನ್ನು ಕೆಳಕ್ಕಿಟ್ಟು ಪಕ್ಕದಲ್ಲಿನ ಬಟ್ಟೆಗಳನ್ನು ಪರಿಶೀಲಿಸುತ್ತಾರೆ.

ಅಲ್ಲದೆ, ಮಾಧ್ಯಮದವರು, ಅಧಿಕಾರಿಗಳು ಹಾಗೂ ಇತರರಿಂದ ತುಂಬಿದ್ದ ಆ ಜಾಗದಲ್ಲಿ ಸ್ವತಃ ಮೋದಿ ಅವರು ಮಾಸ್ಕ್ ಧರಿಸದೆ ಸಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ಎಎಪಿ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದೆ. ಮಾಸ್ಕ್ ಧರಿಸದ ಮೋದಿ ಅವರನ್ನು ಅಣಕಿಸಿರುವ ಎಎಪಿ, ಮಾಸ್ಕ್ ಕುರಿತಾಗಿ ಜಾಗೃತಿ ಮೂಡಿಸಿದೆ.

ಇತ್ತೀಚೆಗೆ ಭಾರತೀಯ ನೌಕಾದಿನದ ಸಂದರ್ಭದಲ್ಲಿ ನೌಕಾಧಿಕಾರಿಯೊಬ್ಬರು ಮೆಡಲ್ ಅನ್ನು ನರೇಂದ್ರ ಮೋದಿ ಅವರ ದಿರಿಸಿಗೆ ಅಳವಡಿಸುವಾಗಲೂ ಅವರು ಮಾಸ್ಕ್ ಧರಿಸದೆ ಇದ್ದಿದ್ದು ಟೀಕೆಗೆ ಒಳಗಾಗಿತ್ತು.

English summary
AAP has trolled PM Narendra Modi by sharing a video of him not wearing mask and refusing to take a mask.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X