ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಿಷನ್ ಹಿಮಾಚಲ': ಮಂಡಿಯಲ್ಲಿ ಕೇಜ್ರಿವಾಲ್, ಭಗವಂತ್ ಮಾನ್ ರೋಡ್‌ಶೋ

|
Google Oneindia Kannada News

ಮಂಡಿ ಏಪ್ರಿಲ್ 6: ಪಂಚರಾಜ್ಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪಂಜಾಬ್‌ನಲ್ಲಿ ಬಹುಮತದಿಂದ ಗೆಲುವು ಸಾಧಿಸಿದೆ. ಪಂಜಾಬ್‌ನಲ್ಲಿ ಗೆಲುವಿನಿಂದ ಉಲ್ಲಾಸಗೊಂಡಿರುವ ಆಮ್ ಆದ್ಮಿ ಪಕ್ಷ (ಎಎಪಿ) ಹಿಮಾಚಲ ಪ್ರದೇಶದತ್ತ ತನ್ನ ಚಿತ್ತ ಹರಿಸಿದೆ. ಜೊತೆಗೆ ಕೆಲ ಅಭಿವೃದ್ಧಿಯ ಯೋಜನೆಗಳನ್ನು ಸಿದ್ಧಪಡಿಸಲು ಆರಂಭಿಸಿದೆ. ಏಕೆಂದರೆ ಇಲ್ಲಿ ಇದೇ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಚುನಾವಣಾ ಪ್ರಚಾರ ಆರಂಭಿಸಲು ಹಾಲಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ತವರು ಕ್ಷೇತ್ರವಾದ ಮಂಡಿಯನ್ನು ಆಪ್ ಆಯ್ಕೆ ಮಾಡಿಕೊಂಡಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಇಂದು ಮಂಡಿಯಲ್ಲಿ ರೋಡ್ ಶೋ ನಡೆಸಿದರು. ರೋಡ್‌ಶೋ ಪ್ರಾರಂಭವಾಗುವ ಮೊದಲು, ಎಎಪಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಿಂದ ರೋಡ್‌ಶೋ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ ಎಂದು ಟ್ವೀಟ್ ಮಾಡಲಾಗಿತ್ತು.

'ಅಭಿವೃದ್ಧಿಗಾಗಿಯೇ ನಮ್ಮ ಬದ್ಧತೆ' ಎಂದ ಪ್ರಧಾನಿ ಮೋದಿ'ಅಭಿವೃದ್ಧಿಗಾಗಿಯೇ ನಮ್ಮ ಬದ್ಧತೆ' ಎಂದ ಪ್ರಧಾನಿ ಮೋದಿ

ಇತ್ತೀಚೆಗಷ್ಟೇ ನಡೆದ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಪಕ್ಷವು ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಬಯಸುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರ AAP ಅಧಿಕಾರಕ್ಕೆ ಬಂದರೆ "ಹಿಮಾಚಲ ಪ್ರದೇಶದಿಂದ ಭ್ರಷ್ಟಾಚಾರವನ್ನು ತೊಡೆದುಹಾಕುತ್ತದೆ" ಎಂಬ ಭರವಸೆಯನ್ನು ನೀಡುತ್ತಿದೆ.

ಈ ವೇಳೆ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, 'ಮೊದಲು ದೆಹಲಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿದೆವು, ನಂತರ ಪಂಜಾಬ್ ನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿದೆವು' ಎಂದು ಹೇಳಿದ್ದಾರೆ. ಈಗ ಹಿಮಾಚಲ ಪ್ರದೇಶದಿಂದ ಭ್ರಷ್ಟಾಚಾರವನ್ನು ಕಿತ್ತೊಗೆಯುವ ಸಮಯ ಬಂದಿದೆ. AAP ತನ್ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲು ಹಾಲಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ತವರು ಕ್ಷೇತ್ರವಾದ ಮಂಡಿಯನ್ನು ಆಯ್ಕೆ ಮಾಡಿದೆ. ಹಿಮಾಚಲ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಮೊದಲ ಪ್ರಮುಖ ಕಾರ್ಯಕ್ರಮ ಇದಾಗಿದ್ದು, ಗುಡ್ಡಗಾಡು ಪ್ರದೇಶದ ಜನರ ಮನವನ್ನು ಗೆಲ್ಲಲು ಪ್ರಯತ್ನಿಸುತ್ತಿದೆ.

AAPs Mission Himachal: Arvind Kejriwal Bhagwant Manns roadshow in Mandi

ಬಿಜೆಪಿ ಆಡಳಿತವಿರುವ ಹಿಮಾಚಲ ಮತ್ತು ಗುಜರಾತ್‌ನಲ್ಲಿ ಈ ವರ್ಷದ ಕೊನೆಯಲ್ಲಿ ಚುನಾವಣೆಗಳು ನಡೆಯಲಿವೆ. ಎಎಪಿ ಶಿಮ್ಲಾ ಮುನ್ಸಿಪಲ್ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಹೀಗಾಗಿ ಶೀಘ್ರದಲ್ಲೇ ವೇಳಾಪಟ್ಟಿಯನ್ನು ನಿರೀಕ್ಷಿಸಲಾಗಿದೆ. ಕಳೆದ ತಿಂಗಳು ಎಎಪಿ ಸಂಘಟನೆಯನ್ನು ವಿಸ್ತರಿಸಲು ಮತ್ತು ಹಿಮಾಚಲದಲ್ಲಿ ಚುನಾವಣಾ ಕಾರ್ಯತಂತ್ರವನ್ನು ತಯಾರಿಸಲು ಎಂಟು ಸದಸ್ಯರ ತಂಡವನ್ನು ನೇಮಿಸಿತ್ತು.

AAPs Mission Himachal: Arvind Kejriwal Bhagwant Manns roadshow in Mandi

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ಮಾಡಲಾಗಿದೆ ಮತ್ತು ಎಎಪಿ ಪಂಜಾಬ್ ವಿಜಯದ ನಂತರ ಅವರು ಹಿಮಾಚಲ ಪ್ರದೇಶಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದಾರೆ. ದುರ್ಗೇಶ್ ಪಾಠಕ್ ಅವರನ್ನು ರಾಜ್ಯ ಉಸ್ತುವಾರಿ, ರತ್ನೇಶ್ ಗುಪ್ತಾ ಅವರನ್ನು ಉಪ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

English summary
Buoyed by the electoral victory in Punjab, the Aam Aadmi Party (AAP) has started preparing plans for Himachal Pradesh. Because the assembly elections are going to be held in November this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X