• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಎಪಿಯಿಂದ ಸ್ಪರ್ಧಿಸುವಂತೆ ಯಶವಂತ್ ಸಿನ್ಹಾಗೆ ಆಹ್ವಾನ

|

ನವದೆಹಲಿ, ಸೆಪ್ಟೆಂಬರ್ 25: ಲೋಕಸಭೆ ಚುನಾವಣೆ 2019ಕ್ಕೆ ರಣಕಹಳೆ ಊದಿರುವ ಆಮ್ ಆದ್ಮಿ ಪಕ್ಷವು ತನ್ನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ನಡುವೆ ಬಿಜೆಪಿಯ ರೆಬೆಲ್, ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರಿಗೆ ಆಮ್ ಆದ್ಮಿ ಪಕ್ಷವು ಟಿಕೆಟ್ ಆಫರ್ ಮಾಡಿದೆ.

ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಯಶವಂತ್ ಸಿನ್ಹಾರನ್ನು ಕೋರಲಾಗಿದೆ. ಈ ಬಗ್ಗೆ ಮಾತುಕತೆ ಸದ್ಯ ಜಾರಿಯಲ್ಲಿದೆ ಎಂದು ಎಎಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ದೇಶದ ಭದ್ರತೆ ಜೊತೆ ರಾಜಿಯಾಗಿದ್ದಾರೆ ಮೋದಿ: ಶೌರಿ, ಸಿನ್ಹಾ

ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರಿಗೂ ದೆಹಲಿಯ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಲಾಗಿದೆ. ಆದರೆ, ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಬಿಹಾರದ ಪಾಟ್ನಾ ಸಾಹೀಬ್ ಕ್ಷೇತ್ರವನ್ನು ತೊರೆಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿಯಿದೆ,

ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಅವಧಿಯಲ್ಲಿ ಪ್ರಮುಖ ಕ್ಯಾಬಿನೆಟ್ ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು, ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

ರಫೇಲ್ ಡೀಲ್: ಮೋದಿಗೆ 10 ಪ್ರಶ್ನೆ ಕೇಳಿದ ಯಶವಂತ್ ಸಿನ್ಹಾ

ಇತ್ತೀಚೆಗೆ ನೋಯ್ಡಾದಲ್ಲಿ ನಡೆದ ಮೋದಿ ಸರ್ಕಾರ ವಿರುದ್ಧದ ಜನ್ ಅಧಿಕಾರ್ ಪ್ರತಿಭಟನಾ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜತೆ ಯಶವಂತ್ ಸಿನ್ಹಾ ಹಾಗೂ ಶತ್ರುಘ್ನ ಸಿನ್ಹಾ ಕಾಣಿಸಿಕೊಂಡಿದ್ದರು.

ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಹಾಗೂ ಬಿಜೆಪಿ ಸಂಸದ, ಮಾಜಿ ಕ್ರಿಕೆಟರ್ ಕೀರ್ತಿ ಅಜಾದ್ ಅವರನ್ನು ಸೆಳೆಯಲು ಎಎಪಿ ಯತ್ನಿಸುತ್ತಿದೆ.

100 ಲೋಕಸಭಾ ಕ್ಷೇತ್ರಗಳಲ್ಲಿ AAP ಸ್ಪರ್ಧೆ: ಮಿಷನ್ 25 ಟಾರ್ಗೆಟ್!

ಯಶವಂತ್ ಸಿನ್ಹಾ ಅವರು 2009ರಲ್ಲಿ ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಎನ್ಡಿಎಯಲ್ಲಿ ಸಚಿವರಾಗಿರುವ ಇವರ ಪುತ್ರ ಜಯಂತ್ ಸಿನ್ಹಾ ಅವರು ಇದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The AAP wants former BJP leader Yashwant Sinha to contest from New Delhi Lok Sabha constituency and talks between the two sides are in an advanced stage, a senior party leader said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X