ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರುಖ್, ಸಲ್ಮಾನ್ ನಂತರ ಅಮೀರ್ ಗೆ ಅಸಹಿಷ್ಣುತೆ ಬಿಸಿ ಏಕೆ?

By Mahesh
|
Google Oneindia Kannada News

ಮುಂಬೈ, ನ.24: ಬಾಲಿವುಡ್ ನಟರಾದ ಶಾರುಖ್ ಹಾಗೂ ಸಲ್ಮಾನ್ ನಂತರ ಪ್ರಬುದ್ಧ ನಟ ಎನಿಸಿಕೊಂಡಿರುವ ಅಮೀರ್ ಖಾನ್ ಅವರು ದೇಶದಲ್ಲಿ ಅಸಹಿಷ್ಣುತೆ, ಅಸುರಕ್ಷತೆ ಹೆಚ್ಚುತ್ತಿದೆ ಎಂದು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಹೇಳಿದ್ದು ಈಗ ಭಾರಿ ವಿವಾದ ಎಬ್ಬಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಅಮೀರ್ ಪರ -ವಿರೋಧದ ಟ್ವೀಟ್ಸ್, ಸ್ಟೇಟಸ್ ಅಪ್ಡೇಟ್ಸ್, ಮೀಮ್ಸ್, ಟ್ರಾಲ್ಸ್ ಎಲ್ಲೆಡೆ ಅಮೀರ್ ದರ್ಶನವಾಗುತ್ತದೆ.

ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರು ಮಾತನಾಡುತ್ತಾ ತಾವು ಪತ್ನಿ ಕಿರಣ್ ರಾವ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಅಸುರಕ್ಷತೆಯ ಆತಂಕ ಕಾಡುತ್ತಿದೆ, ತಾವು ಭಾರತ ದೇಶವನ್ನು ತೊರೆಯಬಾರದೇಕೆ ಎಂದು ಪ್ರಶ್ನಿಸಿದ್ದರು. ಕಿರಣ್ ಅವರು ಮಕ್ಕಳ ಭದ್ರತೆಯ ದೃಷ್ಟಿಯಿಂದ ತಾವು ವಿದೇಶದಲ್ಲಿ ನೆಲೆಸಬಾರದೇಕೆ ಎಂದು ನನ್ನನ್ನು ಪ್ರಶ್ನಿಸಿದ್ದರು ಎಂದಿದ್ದರು.[ಬಿರುಗಾಳಿ ಎಬ್ಬಿಸಿರುವ ಅಮೀರ್ ಮಾತು]

ನಟ ಆಮಿರ್ ಖಾನ್ ಅವರ ಹೇಳಿಕೆಗೆ ನಟ ಅನುಪಮ್ ಖೇರ್, ಪರೇಶ್ ರಾವಲ್ ಅವರು ತಿರುಗೇಟು ನೀಡಿದ್ದಾರೆ. ನಿಜವಾದ ದೇಶಪ್ರೇಮಿ ಎಂದಿಗೂ ದೇಶ ತೊರೆಯುವ ಮಾತನಾಡುವುದಿಲ್ಲ ಎಂದಿದ್ದಾರೆ. ಅಮೀರ್ ನೀವು ಕಿರಣ್ ರಾವ್ ಅವರು ಯಾವ ದೇಶಕ್ಕೆ ಹೋಗಬೇಕು ಎಂದು ಯೋಚಿಸಿದ್ದೀರಿ? ಎಂದು ನಟ ಅನುಪಮ್ ಖೇರ್ ಪ್ರಶ್ನಿಸಿದ್ದಾರೆ.

ಹೇಳಿಕೆ ಸಮರ್ಥಿಸಿಕೊಂಡ ಅಮೀರ್ ಖಾನ್

ಹೇಳಿಕೆ ಸಮರ್ಥಿಸಿಕೊಂಡ ಅಮೀರ್ ಖಾನ್

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಅಸುರಕ್ಷತೆ ಬಗ್ಗೆ ಪ್ರತಿದಿನ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಬಂದ ಸುದ್ದಿಗಳನ್ನು ನೋಡಿ ಕಿರಣ್ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಅವರು ಆತಂಕಗೊಂಡು ನನ್ನನ್ನು ಆ ರೀತಿ ಪ್ರಶ್ನಿಸಿದರು ಎಂದು ಅಮೀರ್ ಪ್ರತಿಕ್ರಿಯಿಸಿದ್ದಾರೆ. ಅದರೆ, ಅಸಹಿಷ್ಣುತೆ ನೆಪವೊಡ್ಡಿ ಪ್ರಶಸ್ತಿ ಹಿಂತಿರುಗಿಸುವ ಪ್ರಕ್ರಿಯೆ ನಡೆಸುತ್ತಿದ್ದ ಸಾಹಿತಿಗಳಿಗೆ ಆಮಿರ್ ಖಾನ್ ಅವರು ತಮ್ಮ ಬೆಂಬಲ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪರೇಶ್ ರಾವಲ್ ಅವರು ತಿರುಗೇಟು ನೀಡಿದ್ದಾರೆ

ಪರೇಶ್ ರಾವಲ್ ಅವರು ತಿರುಗೇಟು ನೀಡಿದ್ದಾರೆ

ನಿಜವಾದ ದೇಶಪ್ರೇಮಿ ಎಂದಿಗೂ ದೇಶ ತೊರೆಯುವ ಮಾತನಾಡುವುದಿಲ್ಲ ಎಂದಿದ್ದಾರೆ.ಅಮೀರ್ ಖಾನ್ ವಿರುದ್ಧ ಸರಣಿ ಟ್ವೀಟ್ ಮಾಡಿ ತಿಳಿ ಹೇಳಿದ್ದಾರೆ.

ನಿಜವಾದ ದೇಶಪ್ರೇಮಿ ಯಾರು?

ನಿಜವಾದ ದೇಶಪ್ರೇಮಿ ಯಾರು? ಎಂಬುದು ದೇಶದ ಕಷ್ಟದ ಪರಿಸ್ಥಿತಿಯಲ್ಲೇ ತಿಳಿಯುತ್ತದೆ. ದೇಶಪ್ರೇಮಿ ಎಂದಿಗೂ ದೇಶ ತೊರೆಯುವ ಮಾತನಾಡುವುದಿಲ್ಲ ಎಂದಿದ್ದಾರೆ.

ಅಮೀರ್ ಖಾನ್ ಒಬ್ಬ ಫೈಟರ್ ಎಂದು ತಿಳಿದಿದ್ದೇನೆ

ಅಮೀರ್ ಖಾನ್ ಒಬ್ಬ ಫೈಟರ್ ಎಂದು ತಿಳಿದಿದ್ದೇನೆ, jeena yahan marna yahan ಎಂಬುದು ಬರೀ ಹೇಳಿಕೆ ಅಲ್ಲ ಎಂಬ ಅರಿವು ಅಮೀರ್ ಗಿರುತ್ತದೆ.

ಅನುಪಮ್ ಖೇರ್ ಅವರಿಂದ ಪ್ರಶ್ನೆ

2 ಮಿಲಿಯನ್ ದೇಶವಾಸಿಗಳಿಗೆ ನೀವು ಇದೇ ಸಲಹೆ ನೀಡಿ ಹೋಗುತ್ತ್ತೀರಾ? ದೇಶದಲ್ಲಿ ಅಸಹಿಷ್ಣುತೆ ಇದೆಯೇ?

ಯಾವ ದೇಶಕ್ಕೆ ಹೋಗಬೇಕು ಎಂದು ಯೋಚಿಸಿದ್ದೀರಿ?

ಆಮೀರ್ ಖಾನ್ ರನ್ನು ಸೃಷ್ಟಿ ಮಾಡಿದ ದೇಶ ಯಾವುದು ಎಂದು ಕಿರಣ್ ಅವರಿಗೆ ನೀವು ತಿಳಿಸಿದ್ದೀರಾ ಎಂದು ಹೇಳುವ ಮೂಲಕ ಆಮಿರ್ ಖಾನ್ ಅವರ ಹೇಳಿಕೆಯನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ.

ಪಿಕೆ ನಂತರ ಅಮೀರ್ ಗೆ ಏನಾಯ್ತು?

ಲಗಾನ್, ಮಂಗಲ್ ಪಾಂಡೆ, ಸರ್ಫರೋಶ್ ಮಾಡಿದ್ದ ಅಮೀರ್ ಗೆ ಪಿಕೆ ನಂತರ ಅಮೀರ್ ಗೆ ಏನಾಯ್ತು?

ಏನೋ ಅಸಹಿಷ್ಣುತೆ ಇರಬಹುದು ಪಿಎಂಗೆ ಗೊತ್ತು

ಏನೋ ಅಮೀರ್ ಹೇಳಿದಂತೆ ದೇಶದಲ್ಲಿ ಅಸಹಿಷ್ಣುತೆ ಇರಬಹುದು ಪಿಎಂಗೆ ಗೊತ್ತು ಏಕೆಂದರೆ ಅವರು ಯಾವಾಗಲೂ ಫಾರೀನ್ ಟೂರ್ ನಲ್ಲೇ ಇರುತ್ತಾರೆ.

ಮೋದಿ ಕೂಡಾ ಅಮೀರ್ ಖಾನ್ ಗೆ ಬೆಂಬಲ ನೀಡಿದ್ದಾರಂತೆ!

ಮೋದಿ ಕೂಡಾ ಅಮೀರ್ ಖಾನ್ ಗೆ ಬೆಂಬಲ ನೀಡಿದ್ದಾರೆ. ಸತ್ಯವಾಕ್ಯವನ್ನು ನುಡಿದ್ದೀರಿ ಎಂದಿದ್ದಾರೆ ಎಂದು ವಿನೋದ್ ಮೆಹ್ತಾ ಅವರ ಪರೋಡಿ ಐಡಿಯಿಂದ ಟ್ವೀಟ್.

ಅಮೀರ್ ಖಾನ್ ಬೇಕಾದರೆ ದೇಶ ತೊರೆಯಲಿ

ಸರ್ ಜಡೇಜರಿಂದ ಟ್ವೀಟ್ ಅಮೀರ್ ಖಾನ್ ಬೇಕಾದರೆ ದೇಶ ತೊರೆಯಲಿ, ಅದರೆ, ದೇಶಕ್ಕೆ ಅಪಮಾನ ಮಾಡುವುದನ್ನು ಬಿಡಲಿ.

ಅಸಹಿಷ್ಣುತೆ ಬಿಸಿ ನಿಜವಾಗಲೂ ಎಲ್ಲಿದೆ?

ಅಸಹಿಷ್ಣುತೆ ನಿಜವಾಗಲೂ ಎಲ್ಲಿದೆ? ಶಾರುಖ್, ಅಮೀರ್ ಹೇಳಿಕೆಯಲ್ಲೋ ಅಥವಾ ಹೇಳಿಕೆ ನಾವು ನೀಡುತ್ತಿರುವ ಪ್ರತಿಕ್ರಿಯೆಯಲ್ಲೋ?[ಶಾರುಖ್, ಸಲ್ಮಾನ್ ನಂತರ ಅಮೀರ್ ಗೆ ಅಸಹಿಷ್ಣುತೆ ಬಿಸಿ ಏಕೆ?]

English summary
Just a day after his controversial statement about intolerance, Bollywood actor Aamir Khan faced severe criticisms from various sections of society and this time he was slammed by his colleagues in Bollywood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X