ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಲ್ಟಾ ಹೊಡೆದ ಅಮೀರ್: ದೇಶ ಬಿಡುತ್ತೇನೆ ಎಂದು ಹೇಳಿಯೇ ಇಲ್ಲ

|
Google Oneindia Kannada News

ಮುಂಬೈ, ಜನವರಿ, 26: ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ್ದ ಅಮೀರ್ ಖಾನ್ ಇದೀಗ ಉಲ್ಟಾ ಹೊಡೆದಿದ್ದಾರೆ. ನನ್ನ ಪತ್ನಿ ದೇಶ ಬಿಟ್ಟು ಹೋಗೋಣ ಎಂದು ಹೇಳಿರಲಿಲ್ಲ ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ನಾನು ಭಾರತದಲ್ಲೇ ಹುಟ್ಟಿದ್ದೇನೆ, ಭಾರತದಲ್ಲೆ ಸಾಯುಯ್ತೇನೆ ಎಂದು ಅಮೀರ್ ಖಾನ್ ಹೇಳಿದ್ದಾರೆ. ರಂಗ್ ದೇ ಬಸಂತಿ ಚಿತ್ರ ಬಿಡುಗಡೆಯಾದ 10 ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮೀರ್ ಖಾನ್ ಇಂಥ ಹೇಳಿಕೆ ನೀಡಿದ್ದಾರೆ.[ಬೂದಿಮುಚ್ಚಿದ್ದ 'ಅಸಹಿಷ್ಣುತೆ' ಕೆಂಡ ಕೆದಕಿದ ಕರಣ್ ಜೋಹರ್!]

khan

ಭಾರತ ಸಹಿಷ್ಣುತೆಗೆ ಹೆಸರಾಗಿದೆ. ನನ್ನ ಪತ್ನಿ ಒಬ್ಬ ಹಿಂದೂ. ನನ್ನ ಎರಡು ಹೆಣ್ಣು ಮಕ್ಕಳನ್ನು ಹಿಂದೂ ಕುಟುಂಬಕ್ಕೆ ನೀಡಿದ್ದೇನೆ. ನನ್ನ ಕಸಿನ್ ಕ್ಯಾಥೋಲಿಕ್ ಒಬ್ಬರನ್ನು ವಿವಾಹವಾಗಿದ್ದಾರೆ. ನಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ಎಂಬ ತಾರತಮ್ಯವಿಲ್ಲ ಎಂದು ಖಾನ್ ಹೇಳೀದ್ದಾರೆ.

ದೇಶದಲ್ಲಿ ಅಸಹಿಷ್ಣುತೆ, ಅಸುರಕ್ಷತೆ ಹೆಚ್ಚುತ್ತಿದೆ ಹೀಗಾಗಿ ದೇಶವನ್ನು ತೊರೆಯಬಾರದೇಕೆ ಎಂದು ಪತ್ನಿ ಕಿರಣ್ ಒಮ್ಮೆ ನನ್ನನ್ನು ಕೇಳಿದ್ದರು ಎಂದು ಅಮೀರ್ ಖಾನ್ ಹೇಳಿದ್ದು ವಿವಾದ ಎಬ್ಬಿಸಿತ್ತು. ಇಂಥದ್ದೇ ಹೇಳಿಕೆ ನೀಡಿದ್ದ ಶಾರುಖ್ ಖಾನ್ ಸಹ ನಂತರ ದೇಶದ ಕ್ಷಮೆ ಯಾಚಿಸಿದ್ದರು. ಇದೀಗ ಅಮೀರ್ ಖಾನ್ ಸರದಿ.

English summary
Mumbai: Bollywood actor Aamir Khan, whose "leaving India" comments linked to the "intolerance" debate had kicked up a huge controversy, Aamir said he never meant that he wanted to leave the country and asserted that India was intolerant. Asserting that no other country is as diverse as India, Aamir, 50, said, "I was born here and I will die here."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X