ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ 6 ವಿಮಾನ ನಿಲ್ದಾಣಗಳು ಖಾಸಗೀಕರಣ

|
Google Oneindia Kannada News

ನವದೆಹಲಿ, ಡಿಸೆಂಬರ್ 02 : ದೇಶದ ಇನ್ನೂ 6 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ 5 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲಾಗಿತ್ತು.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸಭೆಯಲ್ಲಿ ಇನ್ನೂ 6 ವಿಮಾನ ನಿಲ್ದಾಣ ಖಾಸಗೀಕರಣಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗಿದೆ.

ದೇಶದಲ್ಲಿ 2024ರೊಳಗೆ 100 ಹೆಚ್ಚುವರಿ ಏರ್‌ಪೋರ್ಟ್‌ ನಿರ್ಮಾಣದೇಶದಲ್ಲಿ 2024ರೊಳಗೆ 100 ಹೆಚ್ಚುವರಿ ಏರ್‌ಪೋರ್ಟ್‌ ನಿರ್ಮಾಣ

ಅಮೃತಸರ, ವಾರಣಾಸಿ, ಭುವನೇಶ್ವರ, ಇಂಧೋರ್, ರಾಯ್‌ಪುರ್ ಮತ್ತು ತಿರುಚಿ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಎಎಐ ದೇಶದ 100ಕ್ಕೂ ವಿಮಾನ ನಿಲ್ದಾಣಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.

ರಾಜ್ಯದ 15 ಕಡೆ ಸಣ್ಣ ವಿಮಾನ ನಿಲ್ದಾಣ: ಎಲ್ಲೆಲ್ಲಿ?ರಾಜ್ಯದ 15 ಕಡೆ ಸಣ್ಣ ವಿಮಾನ ನಿಲ್ದಾಣ: ಎಲ್ಲೆಲ್ಲಿ?

Airports

ಈ ವರ್ಷದ ಫೆಬ್ರವರಿಯಲ್ಲಿ ಸರ್ಕಾರ ಲಕ್ನೋ, ಅಹಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರಂ ಮತ್ತು ಗೌಹಾಟಿ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗೀಕರಣಗೊಳಿಸಿತ್ತು. ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ವಹಣೆ ನಡೆಯಲಿದೆ.

ಮಂಗಳೂರು ವಿಮಾನ ನಿಲ್ದಾಣದ ಹೊಣೆ ಅದಾನಿ ಕೈಗಿತ್ತ ಕೇಂದ್ರ ಸಂಪುಟಮಂಗಳೂರು ವಿಮಾನ ನಿಲ್ದಾಣದ ಹೊಣೆ ಅದಾನಿ ಕೈಗಿತ್ತ ಕೇಂದ್ರ ಸಂಪುಟ

ಮೊದಲ ಹಂತದಲ್ಲಿ ಕರ್ನಾಟಕದ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣವನ್ನು ಸರ್ಕಾರ ಖಾಸಗೀಕರಣಗೊಳಿಸಿತ್ತು. 'ಅದಾನಿ ಗ್ರೂಪ್' 50 ವರ್ಷಗಳ ಅವಧಿಗೆ ವಿಮಾನ ನಿಲ್ದಾಣದ ನಿರ್ವಹಣೆ ಗುತ್ತಿಗೆಯನ್ನು ಪಡೆದುಕೊಂಡಿದೆ.

ಸಾರ್ವಜನಿಕ-ಖಾಸಗಿ ಪಾಲುದಾರಿಕೆ ನಿರ್ಧಾರಣಾ ಸಮಿತಿ (ಪಿಪಿಪಿಎಸಿ) ಮೂಲಕ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಅಡಿಯಲ್ಲಿ ವಿಮಾನ ನಿಲ್ದಾಣ ಕಾರ್ಯಚರಣೆ, ನಿರ್ವಹಣೆ ನಡೆಯಲಿದೆ. ಅದಾನಿ ಗ್ರೂಪ್ ದೇಶದ ಹಲವು ವಿಮಾನ ನಿಲ್ದಾಣಗಳ ನಿರ್ವಹಣೆ ಗುತ್ತಿಗೆ ಪಡೆದಿದ್ದು, ಇದಕ್ಕಾಗಿಯೇ 'ಅದಾನಿ ಏರ್‌ಪೋರ್ಟ್ ಲಿಮಿಟೆಡ್' ಎಂಬ ಸಂಸ್ಥೆಯನ್ನು ಆರಂಭಿಸಿದೆ.

English summary
Airports Authority of India submitted the recommendation to union government to privatised 6 more airports. In 2019 February govt privatised 5 airports of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X