ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶೀಯ ವಿಮಾನದಲ್ಲಿ ಸಂಚಾರ ನಡೆಸುವವರು ತಪ್ಪದೇ ಇದನ್ನು ಪಾಲಿಸಿ

|
Google Oneindia Kannada News

ನವದೆಹಲಿ, ಮೇ 21: ದೇಶೀಯ ವಿಮಾನಗಳ ಹಾರಾಟ ಮೇ 25ರಿಂದ ಆರಂಭಗೊಳ್ಳಲಿದ್ದು, ನೀವು ಪಾಲಿಸಬೇಕಾದ ಕಟ್ಟುನಿಟ್ಟಿನ ಸೂಚನೆಗಳು ಇಲ್ಲಿವೆ.

ಸಾಮಾಜಿಕ ಅಂತರ ಕಯ್ದುಕೊಳ್ಳುವುದು, ಆರೋಗ್ಯ ಸೇತು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವುದು, ಥರ್ಮಲ್ ಸ್ಕ್ರೀನಿಂಗ್ ಮಾಡಿಸುವುದು ಕಡ್ಡಾಯ ಎಂದು ಏರ್‌ಪೋರ್ಟ್ಸ ಅಫಾರಿಟಿ ಆಫ್ ಇಂಡಿಯಾ ಘೋಷಣೆ ಮಾಡಿದೆ.

Recommended Video

ಹಾಸನದಲ್ಲಿ ಕೊರೊನಾ ಕೇಸ್ ಪತ್ತೆಯಾಗ್ತಿದ್ದಂತೆ ಮಲೆನಾಡಿಗರು ಮಾಡ್ತಿರೋ ಕೆಲಸ ನೋಡಿ | Hassan | Oneindia Kannada

ದೇಶೀಯ ವಿಮಾನಗಳ ಹಾರಾಟ ಮೇ 25ರಿಂದ ಆರಂಭ: ಮಾರ್ಗಸೂಚಿ ಶೀಘ್ರ ಪ್ರಕಟದೇಶೀಯ ವಿಮಾನಗಳ ಹಾರಾಟ ಮೇ 25ರಿಂದ ಆರಂಭ: ಮಾರ್ಗಸೂಚಿ ಶೀಘ್ರ ಪ್ರಕಟ

ಬುಧವಾರವಷ್ಟೇ ಕೇಂದ್ರ ಸರ್ಕಾರವು ಮೇ 25 ರಿಂದ ಅಂದರೆ ಸೋಮವಾರದಿಂದ ದೇಶೀಯ ವಿಮಾನ ಹಾರಾಟ ಆರಂಭವಾಗಲಿವೆ ಶೀಘ್ರ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿತ್ತು.

AAI Announces SOPs For Domestic Flights

ವಿಮಾನ ನಿಲ್ದಾಣಕ್ಕೆ ಬರುವ ಮುನ್ನವೇ ಥರ್ಮಲ್ ಸ್ಕ್ರೀನಿಂಗ್ ಮಾಡಿಸಬೇಕು.14 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಆರೋಗ್ಯ ಸೇತು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿಲ್ಲ.

ದೇಶದಲ್ಲಿ ಕೊರೊನಾವೈರಸ್ ಹಬ್ಬುತ್ತಿದ್ದಂತೆ ಮಾರ್ಚ್ ತಿಂಗಳಿನಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಇದುವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ದಿನಾಂಕವನ್ನು ಅಂತಿಮಗೊಳಿಸಿಲ್ಲ.

ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ಈ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿ
- ವಿಮಾನ ನಿಲ್ದಾಣಕ್ಕೆ ಬರುವಾಗ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿರುತ್ತದೆ.ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡಿರಬೇಕು. 14 ವರ್ಷದ ಒಳಗಿನವರಿಗೆ ಕಡ್ಡಾಯವಿಲ್ಲ. ಒಂದೊಮ್ಮೆ ಥರ್ಮಲ್ ಸ್ಕ್ರೀನಿಂಗ್ ಮಾಡುವಾಗ ಹಸಿರು ತೋರಿಸಿದೇ ಇದ್ದಲ್ಲಿ, ಅಥವಾ ರೋಗ್ಯ ಸೇತು ಅಪ್ಲಿಕೇಷನ್ ನಿಮ್ಮ ಬಳಿ ಇಲ್ಲದಿದ್ದಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ಇರುವುದಿಲ್ಲ.
-ವಿಮಾನ ಹೊರಡುವ 2 ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಬರಬೇಕು.
-ನೀವು ಪ್ರಯಾಣಿಸುವ ವಿಮಾನ ಹೊರಡಲು ನಾಲ್ಕು ಗಂಟೆ ಇರುವಾಗ ಟರ್ಮಿನಲ್ ಬಿಲ್ಡಿಂಗ್ ಒಳಗೆ ಪ್ರವೇಶಕ್ಕೆ ಅವಕಾಶವಿರುತ್ತದೆ.
-ಪ್ರಯಾಣಿಕರಿಗಾಗಿ ಸರ್ಕಾರವು ಸಾರ್ವಜನಿಕ ಸಾರಿಗೆ, ಟ್ಯಾಕ್ಸಿ, ಏರ್‌ಲೈನ್ ಕ್ರ್ಯೂ ವ್ಯವಸ್ಥೆ ಮಾಡಬೇಕು.
-ಕೇವಲ ಸ್ವಂತ ವಾಹನಗಳು ಅಥವಾ ಕೆಲವೇ ಕ್ಯಾಬ್‌ಗಳಿಗೆ ಮಾತ್ರ ಅವಕಾಶವಿದೆ.
-ಪ್ರತಿಯೊಂದು ಪ್ರಯಾಣಿಕರು ಕೈಗವಸು, ಮಾಸ್ಕ್‌ ಧರಿಸಿರಲೇಬೇಕು.
-ಗೃಹ ಸಚಿವಾಲಯದ ನಿರ್ದೇಶನದಂತೆ ವಿಮಾನ ಸಿಬ್ಬಂದಿ ಬಳಿ ಸ್ಯಾನಿಟೈಸರ್, ಪಿಪಿಇ ಕಿಟ್ ಇರಲೇಬೇಕು.
-ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೊರ ಹೋಗುವ ಸಂದರ್ಭದಲ್ಲಿ ಟ್ರಾಲಿಗಳ ವ್ಯವಸ್ಥೆ ಇರುವುದಿಲ್ಲ.
-ಟರ್ಮಿನಲ್‌ನ ಎಲ್ಲಾ ಎಂಟ್ರಿ ಗೇಟ್‌ಗಳು ತೆರೆದಿರಬೇಕು.
-ಟರ್ಮಿನಲ್ ಬಿಲ್ಡಿಂಗ್ ಅಥವಾ ಲಾಂಜ್‌ಗಳಲ್ಲಿ ದಿನಪತ್ರಿಕೆ ಅಥವಾ ಮಾಸಪತ್ರಿಕೆಗಳಿರುವುದಿಲ್ಲ.
-ಒಂದೊಮ್ಮೆ ವಿಮಾನ ಸಿಬ್ಬಂದಿಗೆ ಜ್ವರ ಅಥವಾ ಕಫವಿದ್ದರೆ ಅವರಿಗೆ ವಿಮಾನ ನಿಲ್ದಾಣದೊಳಗೆ ಪ್ರವೇಶವಿರುವುದಿಲ್ಲ.
-ವಿಮಾನವು ಲ್ಯಾಂಡ್ ಆದ ಬಳಿಕ ತಂಡ ತಂಡವಾಗಿ ಪ್ರಯಾಣಿಕರನ್ನು ಕಳುಹಿಸಿಕೊಡಲಾಗುತ್ತದೆ.

English summary
AAI Announces New rules making physical distancing, the Aarogya Setu app on mobiles and thermal screening a must for entering airports were announced today, a day after the government announced that domestic flights, stopped due to the coronavirus lockdown, would resume from Monday.Some of the new SOPs to be followed at airports are Here.=
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X