ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಲಸಿಕೆಗೆ ಆಧಾರ್ ಕಡ್ಡಾಯವಲ್ಲ, ಐಡಿ ಇಲ್ಲದೆ 87 ಲಕ್ಷ ಜನರಿಗೆ ಲಸಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 7: ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಆಧಾರ್‌ ಕಾರ್ಡ್‌ ಅನ್ನು ಗುರುತಿನ ಪುರಾವೆಯನ್ನಾಗಿ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಧಿಕಾರಿಗಳಿಗೆ ಸೂಚಿಸಿದೆ. ಲಸಿಕೆ ಹಾಕಿಸಿಕೊಳ್ಳಲು ಜನರು CO-WIN ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದ ನಂತರ ಈ ಸೂಚನೆ ಕೋರ್ಟ್‌ನಿಂದ ಬಂದಿದೆ.

"ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಅರ್ಜಿಯಲ್ಲಿ ಅಫಿಡವಿಟ್ ಸಲ್ಲಿಸಿದೆ. ಇದು ನಿರ್ದಿಷ್ಟವಾಗಿ CO-WIN ಪೋರ್ಟಲ್‌ನಲ್ಲಿ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳುತ್ತದೆ. ಲಸಿಕೆ ಹಾಕಿಸಿಕೊಳ್ಳುವವರು ಒಂಬತ್ತು ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು. ಆಧಾರ್ ಕಾರ್ಡ್ ವ್ಯಾಕ್ಸಿನೇಷನ್ ಪಡೆಯಲು ಕಡ್ಡಾಯವಲ್ಲ. ಅರ್ಜಿದಾರರ ಕುಂದುಕೊರತೆಗಳನ್ನು ಸರಿಯಾಗಿ ಪೂರೈಸಲಾಗುತ್ತದೆ. ಎಲ್ಲಾ ಸಂಬಂಧಿತ ಅಧಿಕಾರಿಗಳು ಆರೋಗ್ಯ ಸಚಿವಾಲಯದ ನೀತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾರೆ, "ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠವು ಪಿಐಎಲ್ ಅನ್ನು ವಿಲೇವಾರಿ ಮಾಡುವಾಗ ಹೇಳಿದೆ.

ಸುಲಭವಾಗಿ ಆಧಾರ್‌ ಲಾಕ್‌-ಅನ್ಲಾಕ್‌ ಮಾಡಿ, ವರ್ಚುವಲ್‌ ಐಡಿ ರಚಿಸಿ: ಇಲ್ಲಿದೆ ವಿಧಾನ
ಸರ್ಕಾರವನ್ನು ಪ್ರತಿನಿಧಿಸಿದ ವಕೀಲ ಅಮನ್ ಶರ್ಮಾ, ಆಧಾರ್ ಮಾತ್ರ ಪೂರ್ವ ಷರತ್ತಲ್ಲ ಮತ್ತು ಯಾವುದೇ ಗುರುತಿನ ಚೀಟಿ ಇಲ್ಲದ 87 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮಯಾಂಕ್ ಕ್ಷೀರಸಾಗರ್, ಲಸಿಕೆ ಕೇಂದ್ರಗಳು ಆಧಾರ್ ಕಾರ್ಡ್ ವಿವರಗಳನ್ನು ಕೇಳಬಾರದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Aadhaar Not Mandatory for COVID-19 Vaccination: Centre to SC

ಲಸಿಕೆ ಆಡಳಿತಕ್ಕಾಗಿ ವ್ಯಕ್ತಿಯನ್ನು ಪರಿಶೀಲಿಸುವಾಗ ಕೋವಿಡ್-19 ಲಸಿಕೆ ಕೇಂದ್ರ/ವ್ಯಾಕ್ಸಿನೇಟರ್‌ಗಾಗಿ CO-WIN ಪೋರ್ಟಲ್‌ನಲ್ಲಿ ಆಧಾರ್ ವಿವರಗಳನ್ನು ಸಲ್ಲಿಸುವ ಕಡ್ಡಾಯ ಪೂರ್ವ-ಷರತ್ತನ್ನು ತೆಗೆದುಹಾಕಲು ನಿರ್ದೇಶನಗಳನ್ನು ಕೋರಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಇದಕ್ಕೂ ಮೊದಲು, ಕೆಲವು ಲಸಿಕಾ ಕೇಂದ್ರಗಳು ವ್ಯಾಕ್ಸಿನೇಷನ್‌ಗಾಗಿ ಆಧಾರ್ ಕಾರ್ಡ್‌ಗೆ ಒತ್ತಾಯಿಸುತ್ತವೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುವಾಗ, ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರ ಪೀಠವು ಕೋವಿಡ್ ಅನ್ನು ನಿರ್ವಹಿಸುವ ಉದ್ದೇಶಕ್ಕಾಗಿ ಗುರುತಿನ ಏಕೈಕ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಒದಗಿಸುವಂತೆ ಒತ್ತಾಯಿಸಬೇಡಿ ಎಂದು ಕೇಳಿತ್ತು.

ಆಧಾರ್ ಜೊತೆ ಭವಿಷ್ಯ ನಿಧಿ ಖಾತೆ ಲಿಂಕ್ ಮಾಡೋದು ಹೇಗೆ?
ಸುಪ್ರೀಂ ಕೋರ್ಟ್ ಅಕ್ಟೋಬರ್ 1, 2021 ರಂದು PIL ಮೇಲೆ ಕೇಂದ್ರಕ್ಕೆ ನೋಟಿಸ್ ನೀಡಿತ್ತು. "ಅಕ್ಟೋಬರ್ 1, 2021 ರ ನ್ಯಾಯಾಲಯದ ಆದೇಶದ ಪ್ರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ದಾಖಲಿಸುವ ಅಫಿಡವಿಟ್ ಅನ್ನು ಸಲ್ಲಿಸಿದೆ. ಒಂಬತ್ತು ಗುರುತಿನ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬಹುದು." ಎಂದು ಪೀಠ ಹೇಳಿದೆ.

ಈ ಸಂಬಂಧ "ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅರ್ಜಿಯಲ್ಲಿ ಅಫಿಡವಿಟ್ ಸಲ್ಲಿಸಿದ್ದು, ಇದು ನಿರ್ದಿಷ್ಟವಾಗಿ CO-WIN ಪೋರ್ಟಲ್‌ನಲ್ಲಿ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ದಾಖಲಿಸುತ್ತದೆ ಮತ್ತು ಒಂಬತ್ತು ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು. ಆಧಾರ್ ವ್ಯಾಕ್ಸಿನೇಷನ್ ಪಡೆಯಲು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮಯಾಂಕ್ ಕ್ಷೀರಸಾಗರ್ ಅವರು ವಾದ ಮಂಡಿಸಿದರು.

Recommended Video

ಪಾಕಿಸ್ತಾನ ಪರವಾಗಿ ನಿಂತ ಹುಂಡೈ ಕಂಪನಿ‌ ಮೇಲೆ ಭಾರತೀಯರ ಆಕ್ರೋಶ | Oneindia Kannada

English summary
The Supreme Court on Monday asked the authorities not to make Aadhar Card as the only proof of identification to get Covid vaccination. It came after the Centre informed the court that it was not mandatory for people to submit Aadhar Card details on the CO-WIN portal to get vaccinated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X