ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ಯಾನ್ ಕಾರ್ಡ್ ಹಾಗೂ ಆಧಾರ್ ಜೋಡಣೆ ಕಡ್ಡಾಯ ಬೇಡ'

Permanent Account Number (PAN) ಕಾರ್ಡ್ ಜತೆಗೆ ಆಧಾರ್ ಕಾರ್ಡ್ ಜೋಡಿಸುವುದನ್ನು ಕಡ್ದಾಯಗೊಳಿಸಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

By Mahesh
|
Google Oneindia Kannada News

ನವದೆಹಲಿ, ಜೂನ್ 09: Permanent Account Number (PAN) ಕಾರ್ಡ್ ಜತೆಗೆ ಆಧಾರ್ ಕಾರ್ಡ್ ಜೋಡಿಸುವುದನ್ನು ಕಡ್ದಾಯಗೊಳಿಸಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ಬೇಡ ಎಂದು ಶುಕ್ರವಾರ(ಜೂನ್ 09) ದಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಈಗಾಗಲೇ ಆಧಾರ್ ಹಾಗೂ ಪ್ಯಾನ್ ಹೊಂದಿದವರು ಐಟಿ ರಿಟರ್ನ್ಸ್ ಮಾಡುವಾಗ ಜೋಡಣೆ ಮಾಡಬಹುದು. ಆದರೆ, ಆಧಾರ್ ಅಥವಾ ಪ್ಯಾನ್ ಕಾರ್ಡಿಗಾಗಿ ಅರ್ಜಿ ಹಾಕದವರಿಗೆ ಕಡ್ಡಾಯ ಆದೇಶ ಅನ್ವಯವಾಗುವುದಿಲ್ಲ.

[ಆನ್ ಲೈನ್ ನಲ್ಲಿ ಪ್ಯಾನ್​ಗೆ ಆಧಾರ್ ಜೋಡಿಸುವುದು ಹೇಗೆ?]

Aadhaar linking is not mandatory for PAN cards: SC

ಜುಲೈ 1, 2017ರಿಂದ ಇದು ಜಾರಿಗೆ ಬರಲಿದೆ. ಪ್ಯಾನ್​ ಹಾಗೂ ಆಧಾರ್ ಲಿಂಕ್ ಮಾಡಲು ಇಲಾಖೆಯು ತನ್ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವಂತೆ ಕೋರಿತ್ತು.

ತೆರಿಗೆಗಳ್ಳರಿಗೆ ಆಘಾತ ನೀಡಿರುವ ಆದಾಯ ತೆರಿಗೆ ಇಲಾಖೆ, ಈಗ ಎಲ್ಲಾ ತೆರಿಗೆದಾರರು ತಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ಸಂಖ್ಯೆ ಜೋಡಿಸುವಂತೆ ಸೂಚಿಸಿತ್ತು. ಈ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗಿತ್ತು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139 ಎಎ ಅನ್ವಯ ನೀಡಲಾಗಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಲಾಗಿತ್ತು.

ಐಟಿ ರಿಟರ್ನ್ ಮಾಡುವ ಮುನ್ನ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಜೋಡಣೆಯಾಗಿರಬೇಕು ಎಂಬ ನಿಯಮವನ್ನು ಹಿಂದಕ್ಕೆ ಪಡೆಯಲು ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಅರ್ಜಿಯಲ್ಲಿ ಹೇಳಲಾಗಿತ್ತು. ಅರ್ಜಿ ವಿಚಾರಣೆ ನಡೆಸಿ ಮೇ 04ರಂದು ತೀರ್ಪು ಕಾಯ್ದಿರಿಸಿದ್ದ ನ್ಯಾ. ಎ.ಕೆ ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಶುಕ್ರವಾರ (ಜೂನ್ 09) ದಂದು ಆದೇಶ ಹೊರಡಿಸಿದೆ.

English summary
The Supreme Court on Friday upheld the government’s scheme to link Aadhaar to PAN but refused to make it compulsory for those who don’t have an Aadhaar card or who have not yet applied for one, till the Constitutional Bench decides the privacy question.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X